Advertisement

ಶಾಲಾ ಅಂಗಳದಲ್ಲಿ ಗ್ರಹಣ ವೀಕ್ಷಿಸಿದ ಮಕ್ಕಳು

01:21 PM Dec 27, 2019 | Team Udayavani |

ನಾಗಮಂಗಲ: ಗುರುವಾರ ಮುಂಜಾನೆ ಎಲ್ಲರಿಗೂ ಕಂಕಣ ಸೂರ್ಯಗ್ರಹಣ ವೀಕ್ಷಿಸುವ ಕುತೂಹಲ. 8 ಗಂಟೆಗೆಲ್ಲಾ ತಾಲೂಕಿನ ಅನೇಕ ದೇವಸ್ಥಾನಗಳು ಮುಚ್ಚಿದ್ದವು. ವ್ಯಾಪಾರ ವಹಿವಾಟೂ ಸ್ಥಗಿತಗೊಂಡಿತ್ತು. ಕಳೆದ ವಾರ ಆರಂಭಗೊಂಡಿರುವ ದನು ರ್ಮಾಸದ ಪೂಜೆಗಳೂ ಬಂದ್‌ ಆಗಿದ್ದವು. ಬುಧವಾರ ರಾತ್ರಿಯೇ ಅರ್ಚಕರು ದೇವರ ಪೂಜೆ ಮುಗಿಸಿ ಗುರುವಾರ ಬೆಳಗಿನ ಜಾವ ಬಾಗಿಲು ತೆರೆಯಲಿಲ್ಲ.

Advertisement

ಪಟ್ಟಣದ ಇತಿಹಾಸ ಪ್ರಸಿದ್ಧ ಸೌಮ್ಯ ಕೇಶವಸ್ವಾಮಿ, ಯೋಗಾ ನರಸಿಂಹ ಸ್ವಾಮಿ, ಕಾಳಿ ಕಾಂಬ ಕಮಟೇಶ್ವರಿ, ವೀರ ಭದ್ರೇಶ್ವರ, ಬೆಳ್ಳೂರು ಹೋಬಳಿ ಆದಿಚುಂಚನಗಿರಿ ಶ್ರೀ ಕಾಲ ಭೈರ ವೇಶ್ವರ, ಪಟ್ಟಣದ ಆದಿ ಮಾದವರಾಯಸ್ವಾಮಿ ದೇವಾಲ ಯಗಳು 11.30ರ ಬಳಿಕ ದೇವರ ಮೂರ್ತಿ, ದೇವಾಲಯ ಸ್ವತ್ಛಗೊಳಿಸಿದ ಬಳಿಕ ಬಾಗಿಲು ತೆರೆದು ದೇವರ ಪೂಜೆ, ಅಭಿಷೇಕ, ಅಲಂಕಾರ ಮಾಡಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.

ಅಮಾವಾಸ್ಯೆ ಪೂಜೆ: ಗ್ರಹಣದ ಜೊತೆಗೆ ಅಮಾವಾಸ್ಯೆಯೂ ಸೇರಿದ್ದು ಶೇ.70ರಷ್ಟು ಅಂಗಡಿ ಮುಚ್ಚಿದ್ದು ರಸ್ತೆ ಬಿಕೋ ಎನ್ನುತ್ತಿದ್ದು, ಜನಸಂಖ್ಯೆ ವಿರಳವಾಗಿತ್ತು. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಸಂತೆ ಬೀದಿ, ಮಾರ್ಕೆಟ್‌ ರಸ್ತೆಗಳು ಜನರಿಲ್ಲದೇ ಭಣಗುಡುತ್ತಿದ್ದವು. ತುಮಕೂರು- ಮೈಸೂರು ಬಸ್ಸುಗಳಲ್ಲಿಯೂ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು.

ದೋಷ ನಿವಾರಣೆ: ಗ್ರಹಣದ ಪರಿನಾಮದಿಂದ ದೋಷವಿದೆಯೆಂಬ ಕಾರಣದಿಂದ ಪರಿಹಾರಾರ್ಥವಾಗಿ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮುಂಜಾನೆ 8 ಗಂಟೆಯಿಂದಲೇ ಗ್ರಹಣ ಬಿಡುಗಡೆ ತನಕ ಹೋಮ ಹವನ, ವಿಶೇಷ ಪೂಜೆ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next