Advertisement

ಮಕ್ಕಳ ಕಾಯಲು ಗನ್‌

06:55 AM Dec 20, 2018 | |

ನ್ಯೂಯಾರ್ಕ್‌:  ಅಮೆರಿಕ ಶಾಲೆಗಳಲ್ಲಿ ಇತ್ತೀಚೆಗೆ ಗುಂಡಿನ ದಾಳಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಹೊಸ ನೀತಿಯನ್ನು ಜಾರಿಗೆ ತಂದಿದ್ದು, ಶಾಲೆಗಳಲ್ಲಿ ಶಿಕ್ಷಕರು ಹಾಗೂ ಭದ್ರತಾ ಸಿಬ್ಬಂದಿ ಗನ್‌ಗಳನ್ನು ಹೊಂದಬಹುದಾಗಿದೆ. 

Advertisement

ಶಾಲೆ ಭದ್ರತೆಗೆ ಸೇನೆಯ ಹಿರಿಯ ಅಧಿಕಾರಿಗಳನ್ನೂ ನೇಮಿಸಿಕೊಳ್ಳಬಹು ದಾಗಿದೆ. ಫ್ಲೋರಿಡಾದಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಶೂಟ್‌ಔಟ್‌ ನಂತರ ಶಾಲೆ ಸುರಕ್ಷತೆಗಾಗಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ವರದಿ ಆಧರಿಸಿ ಈ ನಿಯಮ ರೂಪಿಸಲಾಗಿದೆ. ಗನ್‌ ಖರೀದಿಗೆ ವಯೋಮಿತಿಯನ್ನು ಹೆಚ್ಚಿಸಬೇಕು ಎಂಬ ಆಗ್ರಹವನ್ನು ಸಮಿತಿ ತಳ್ಳಿಹಾಕಿದ್ದು, ಬಹುತೇಕ ಪ್ರಕರಣಗಳಲ್ಲಿ ಮಕ್ಕಳು ತಮ್ಮ ಪಾಲಕರ ಗನ್‌ಗಳನ್ನು ತರುತ್ತಾರೆ. ಭದ್ರತಾ ಸಿಬ್ಬಂದಿಗೆ ಗನ್‌ ಹೊಂದಲು ಅವಕಾಶ ಮಾಡಿಕೊಡುವುದರಿಂದ ಹಿಂಸೆಯನ್ನು ತಕ್ಷಣ ನಿಲ್ಲಿಸಬಹುದಾಗಿದೆ ಎಂದು ಸಮಿತಿ ತನ್ನ 180 ಪುಟಗಳ ವರದಿಯಲ್ಲಿ ವಿವರಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next