Advertisement

Education: ಲ್ಯಾಪ್‌ಟಾಪ್‌ಗೆ ಕಾಯುತ್ತಿರುವ ಕಟ್ಟಡ ಕಾರ್ಮಿಕರ ಮಕ್ಕಳು

12:54 AM Dec 27, 2023 | Team Udayavani |

ಕಾರ್ಕಳ: ಸರಕಾರವು ಕಾರ್ಮಿಕ ಇಲಾಖೆ ಮೂಲಕ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್‌ ವಿತರಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಭಿಸಿದ್ದರೂ ಉಡುಪಿ ಜಿಲ್ಲೆಯ ಮಕ್ಕಳಿಗೆ ಇನ್ನೂ ವಿತರಣೆ ಆರಂಭವಾಗಿಲ್ಲ.

Advertisement

ಜಿಲ್ಲೆಯ 7 ತಾಲೂಕು ಗಳಲ್ಲಿ ಅರ್ಜಿ ಸ್ವೀಕರಿಸ ಲಾಗಿದೆ. ಕಾರ್ಮಿಕ ನಿರೀಕ್ಷಕ ಕಚೇರಿ ಅಧಿ ಕಾರಿ ಗಳು ತಾಲೂಕು ವಾರು ಅರ್ಹರ ಪಟ್ಟಿಯನ್ನು ಉಡುಪಿ ಉಪವಿಭಾಗಕ್ಕೆ ಸಲ್ಲಿಸಿದ್ದಾರೆ. ಈ ಪಟ್ಟಿ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮೇಲ್ವಿಚಾರಣ ಸಮಿತಿಯ ಅನು ಮೋದನೆಗೆ ಸಲ್ಲಿಕೆಯಾಗಿದ್ದು, ಇನ್ನಷ್ಟು ದಿನ ಲ್ಯಾಪ್‌ ಟಾಪ್‌ಗೆ ಕಾಯಬೇಕಿದೆ.

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಿಆರ್‌ -205, 2022-23ರನ್ವಯ 2023ರ ಮಾರ್ಚ್‌ ಮೊದಲು ನೋಂದಣಿಯಾಗಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕ್ಷೇತ್ರದ ಕಾರ್ಮಿಕರ ಮಕ್ಕಳ ಪೈಕಿ 2023-24ನೇ ಸಾಲಿನಲ್ಲಿ ಕಲಿಯುತ್ತಿರುವ ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ (ಎಸೆಸೆಲ್ಸಿಯಲ್ಲಿ ಪಡೆದ ಅಂಕಗಳ ಮೆರಿಟ್‌ ಆಧರಿಸಿ) ಉಚಿತ ಲ್ಯಾಪ್‌ಟಾಪ್‌ಗ್ಳನ್ನು ನೀಡಲಾಗುತ್ತಿದೆ.

ಉಡುಪಿ ತಾಲೂಕಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ತಲಾ 10, ವಿಜ್ಞಾನ-8, ಕಾಪು ತಾಲೂಕಿನಲ್ಲಿ ಅನುಕ್ರಮವಾಗಿ 8, 8, 6, ಬ್ರಹ್ಮಾವರ ತಾಲೂಕಿನಲ್ಲಿ 8, 8, 6, ಕಾರ್ಕಳ ತಾಲೂಕಿನಲ್ಲಿ 8, 8, 6 ಹಾಗೂ ಹೆಬ್ರಿ ತಾಲೂಕಿನಲ್ಲಿ 8, 8, 6, ಕುಂದಾಪುರ ತಾಲೂಕಿನಲ್ಲಿ 8, 8, 8 ಹಾಗೂ ಬೈಂದೂರು ತಾಲೂಕಿನಲ್ಲಿ 8,8,6 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಒಟ್ಟು 162 ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಕಲಿಕಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಬೇಕಿದೆ.

ತಾಲೂಕುವಾರು ಪಟ್ಟಿ
ಉಡುಪಿ – 28
ಕಾಪು – 22
ಬ್ರಹ್ಮಾವರ – 22
ಕಾರ್ಕಳ – 22
ಹೆಬ್ರಿ – 22
ಕುಂದಾಪುರ – 24
ಬೈಂದೂರು – 22
ಒಟ್ಟು – 162

Advertisement

ಇದೇ ಮೊದಲ ಬಾರಿಗೆ ಟ್ಯಾಬ್‌ ಬದಲಿಗೆ ಲ್ಯಾಪ್‌ಟಾಪ್‌
ಈ ಹಿಂದೆ ಮಕ್ಕಳಿಗೆ ಟ್ಯಾಬ್‌ ವಿತರಿಸಲಾಗಿತ್ತು. ಇದೇ ಮೊದಲ ಬಾರಿಗೆ ಲ್ಯಾಪ್‌ಟಾಪ್‌ ವಿತರಿಸಲಾಗುತ್ತಿದೆ. ಮಕ್ಕಳು ಲ್ಯಾಪ್‌ಟಾಪ್‌ಗೆ ಕಾಯುತ್ತಿದ್ದು ವಿಳಂಬದಿಂದಾಗಿ ನಿರಾಶೆಗೆ ಒಳಗಾಗಿದ್ದಾರೆ.

ಲ್ಯಾಪ್‌ಟಾಪ್‌ ವಿತರಣೆಗೆ ಪಟ್ಟಿ ಸಿದ್ಧವಾಗಿದೆ. ಅಪರ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ವಿತರಿಸಲಾಗುತ್ತದೆ. ಉಡುಪಿ ನಗರಸಭೆಯ ವಾರ್ಡೊಂದರ ಚುನಾವಣೆ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ವಿಳಂಬವಾಗಿದ್ದು, ಅದು ಮುಗಿದ ಬಳಿಕ ವಿತರಿಸುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
– ಕುಮಾರ್‌ ಬಿ.ಆರ್‌., ಕಾರ್ಮಿಕ ಅಧಿಕಾರಿ, ಉಡುಪಿ ಉಪವಿಭಾಗ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next