Advertisement
ಸಂಕಷ್ಟದಲ್ಲಿರುವ ಈ 2.50 ಲಕ್ಷ ಮಂದಿ ಸಣ್ಣವರಾಗಿದ್ದಾಗ ಹೆತ್ತವರ ಜತೆಗೆ ಅಮೆರಿಕಕ್ಕೆ ವಲಸೆ ಬಂದಿದ್ದರು. ನಿಯಮದ ಪ್ರಕಾರ, ಈ ಮಕ್ಕಳಿಗೆ 21 ವರ್ಷ ತುಂಬುವವರೆಗೆ ಅವರು “ಅವ ಲಂಬಿತರ ಸ್ಥಾನಮಾನ’ ಹೊಂದಿರು ತ್ತಾರೆ. ಪೋಷಕರಿಗೆ ಖಾಯಂ ವೀಸಾ ಸಿಕ್ಕಿದ್ದರೆ ಯಾವುದೇ ಸಮಸ್ಯೆಯಿಲ್ಲ. ಇಲ್ಲದಿದ್ದರೆ, ಮಕ್ಕಳಿಗೆ 21 ವರ್ಷ ತುಂಬಿದೊಡನೆ ಗಡೀಪಾರು ಮಾಡಬೇಕಾಗುತ್ತದೆ. ವಲಸಿಗರ ಸಂಕಷ್ಟ ಉಂಟಾಗಲು ರಿಪಬ್ಲಿಕನ್ ಸಂಸದರು ಕಾರಣ ಎಂದು ಶ್ವೇತಭವನ ದೂರಿದೆ.
ಅಮೆರಿಕಕ್ಕೆ ಆಗಮಿಸುವ ಅಧಿಕೃತ ವಲಸಿಗರ ಮಕ್ಕಳು 21 ವರ್ಷಕ್ಕೆ ತಲುಪುವ ಹೊತ್ತಿಗೆ, ಅವರ ಪೋಷಕರು ಖಾಯಂ ವೀಸಾ ವನ್ನು ಪಡೆಯಬೇಕು. ಇಲ್ಲದಿದ್ದರೆ ಅಂಥವರ ಮಕ್ಕಳು ಅಮೆರಿಕವನ್ನು ಬಿಟ್ಟು ಹೊರಡಬೇಕಾಗುತ್ತದೆ.