Advertisement

ಮಕ್ಕಳಿಗೆ ಸಂಸ್ಕಾರಭರಿತ ಶಿಕ್ಷಣ ಅಗತ್ಯ: ಡಾ|ವಿಜಯಲಕ್ಷ್ಮೀ

05:36 PM Jul 13, 2022 | Team Udayavani |

ಬಾಗಲಕೋಟೆ: ಒಂದು ರಾಷ್ಟ್ರೀಯ ಭವಿಷ್ಯ ನಿಂತಿರುವುದು ಒಳ್ಳೆಯ ಸಂಸ್ಕಾರವಂತ ಮಕ್ಕಳ ಮೇಲೆ. ಶಿಕ್ಷಣ, ಶಿಸ್ತು, ಶಿಷ್ಟಾಚಾರ, ಸುಚಿತ್ವ, ಮತ್ತು ಸ್ವಾಸ್ಥ್ಯ ಈ ಪಂಚ ತತ್ವಗಳನ್ನು ಅಳವಡಿಸಿಕೊಂಡ ಮಕ್ಕಳು ಒಂದು ಸಮಾಜ‌, ರಾಷ್ಟ್ರದ ಆಸ್ತಿಯಾಗಬಲ್ಲರು ಎಂದು ಬೆಂಗಳೂರು ವೈದ್ಯಕೀಯ ಕಾಲೇಜಿನ ಹಾಗೂ ಸಂಶೋಧನ ಸಂಸ್ಥೆಯ ಹಿರಿಯ ವಿಶ್ರಾಂತ ವೈದ್ಯ ಪ್ರಾಧ್ಯಾಪಕಿ ಡಾ|ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿದರು.

Advertisement

ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಕಾಲೇಜಿನ ಮಹಿಳಾ ಸಶಕ್ತೀಕರಣ ಘಟಕ, ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಮಹಿಳಾ ಸಶಕ್ತೀಕರಣ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆ ಕೇಂದ್ರ ಬಿಂದು. ಶ್ರಮದ ಬದುಕನ್ನು ತಳೆದು, ತನ್ನ ನಿರಂತರ ಕ್ರಿಯಾಶೀಲತೆಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ$ವಿವಿಧ ಆಯಾಮಗಳಲ್ಲಿ ವೈವಿಧ್ಯಮಯವಾಗಿ ಕಾರ್ಯನಿರ್ವಹಿಸಿ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಬಂದವಳು.

ಕೌಟುಂಬಿಕ ಅನೇಕ ಸಮಸ್ಯೆ ಮತ್ತು ಸವಾಲುಗಳ ಮಧ್ಯದಲ್ಲಿಯೂ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳದೇ ತನ್ನ ಕುಟುಂಬಕ್ಕೆ ಆತ್ಮಬಲವನ್ನು ತುಂಬಿ ಇಡಿ ಕುಟುಂಬವನ್ನು ಮುನ್ನಡೆಸುತ್ತಾ ಬಂದಿದ್ದಾಳೆ.

ಅಂತಹ ತಾಯಿಯೊಂದಿಗೆ ಅಜ್ಜ, ಅಜ್ಜಿಯರ ಸಂಸ್ಕಾರ ಒಂದೆಡೆಯಾದರೆ, ಇನ್ನೊಂದೆಡೆ ಗುರುವಿನ ಸಂಸ್ಕಾರ ಮಗುವಿಗೆ ದೊರೆಯುವಂತಾಗಬೇಕು. ವ್ಯಕ್ತಿತ್ವ ವಿಕಸನಕ್ಕೆ ತಾಯಿ ಮತ್ತು ಸಮರ್ಥಗುರುವಿನ ಮಾರ್ಗದರ್ಶನ ಅಗತ್ಯವಾಗಿಬೇಕು. ಪರಿಶುದ್ಧವಾದ, ಪ್ರಾಮಾಣಿಕತೆಯ ಮತ್ತು ಅನ್ಯರ ನೋವಿಗೆ ಸ್ಪಂದಿಸುವ ಹೃದಯವಂತಿಕೆಯಲ್ಲಿ ಮಗುವಿನ ವ್ಯಕ್ತಿತ್ವ ಅರಳುವಂತಾಗಬೇಕು ಎಂದರು.

Advertisement

ಬಿವಿವಿ ಸಂಘದ ಮುಖ್ಯ ಸಲಹೆಗಾರ ಡಾ| ಮೀನಾ ಚಂದಾವರಕರ ಮಾತನಾಡಿ, ಅವರಿಬ್ಬರ ಸಹಕಾರ ಮನೋಭಾವ ಬಹಳ ಮುಖ್ಯ ಎಂದು ಹೇಳಿದರು. ಕಾಲೇಜಿನ ಪ್ರಾಚಾರ್ಯ ಪ್ರೊ| ಎಸ್‌.ಎ. ಭೂಸನೂರಮಠ, ಆಡಳಿತಾಧಿ ಕಾರಿ ಪ್ರೊ| ವಿ.ಆರ್‌. ಶಿರೋಳ, ಮಹಿಳಾ ಕಾಲೇಜಿನ ಪ್ರಾಚಾರ್ಯೆ ಎಸ್‌. ಜೆ. ಒಡೆಯರ, ಡಾ|ಎಸ್‌.ಎಂ. ಗಾಂವಕರ, ಎಸ್‌. ಆರ್‌. ದೇಶಪಾಂಡೆ, ಪಿ.ಕೆ. ಚೌಗಲಾ, ವಿ.ಆರ್‌. ಗೌಡರ, ಟಿ.ಪಿ. ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಸ್‌.ಜೆ. ಒಡೆಯರ ಸ್ವಾಗತಿಸಿ ಪರಿಚಯಿಸಿದರು. ಶ್ವೇತಾ ಪಾಟೀಲ ನಿರೂಪಿಸಿದರು. ಎಸ್‌.ಆರ್‌. ದೇಶಪಾಂಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next