Advertisement

ಮಕ್ಕಳಿಗೆ ಉತ್ತಮ ಶಿಕ್ಷಣ ಅಗತ್ಯ: ರೂಪಾರಾಣಿ

06:10 PM Apr 25, 2021 | Team Udayavani |

ಬೆನ್ನೂರ: ಬೆಂಗಳೂರ, ಮಂಗಳೂರ, ಧಾರವಾಡ ಹಾಗೂ ಇತರೆ ನಗರಗಳ ರೀತಿ ನಮ್ಮಲ್ಲಿಯೂ ಉತ್ತಮ ಶಿಕ್ಷಣ ಸಿಗುವಂತಾದರೆ ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಎರಡು ಮಾತಿಲ್ಲ. ಅಂತಹ ಶಿಕ್ಷಣ ಕೊಡುವ ಸಂಸ್ಥೆ ನಮ್ಮನಗರದಲ್ಲಿ ಆರಂಭಗೊಂಡಿದ್ದು ಸಂತಸ ತಂದಿದೆಎಂದು ನಗರಸಭೆ ಅಧ್ಯಕ್ಷೆ ರೂಪಾ ರಾಘವೇಂದ್ರ ಚಿನ್ನಿಕಟ್ಟಿ ಹೇಳಿದರು.

Advertisement

ಇಲ್ಲಿನ ಮೃತ್ಯುಂಜಯ ನಗರದ ಎಂ.ಕೆ. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದಸಮಾರಂಭದಲ್ಲಿ ಸೌಲಭ್ಯಗಳ ಕುರಿತ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳೇ ಈ ನಾಡು ಮತ್ತು ದೇಶದ ಶಕ್ತಿ. ಇಂತಹ ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಸಂಸ್ಕಾರವಂತರಾಗಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷೆ ಎ.ಬಿ. ರತ್ನಮ್ಮ, ಡಾ| ಆರ್‌.ಎಸ್‌.ಯಲಿ, ಸಾಂಬಶಿವರಾವ್‌, ನಗರಸಭೆ ಸದಸ್ಯಮಲ್ಲಿಕಾರ್ಜುನ ಅಂಗಡಿ, ಪ್ರಾಚಾರ್ಯ ಪ್ರಕಾಶ್‌ಕೊಡ್ಲಿವಾಡ, ಉಪನ್ಯಾಸಕಿ ಕಲ್ಪನಾ, ಉಷಾ ಮಾಳಗಿ,ಸುಮಂಗಲಾ ಪಾಟೀಲ, ಪ್ರಭುಲಿಂಗ ಕೋಡದ,ಮೃತ್ಯುಂಜಯ ಯಲಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next