Advertisement
ಗುಪ್ತ ಮತದಾನದ ಮಹತ್ವ, ಮತದಾನದಿಂದ ಆಗುವ ಬದಲಾವಣೆ, ಮತದಾನ ಮಾಡುವ ಜವಾಬ್ದಾರಿ ಎಲ್ಲವೂಕಿರಿಯ ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡುವುದಕ್ಕಾಗಿ ನಾಯಕ, ಉಪನಾಯಕನ ಆಯ್ಕೆಯನ್ನು ಮತದಾನದ ಮೂಲಕ ಕ್ರಮ ಬದ್ಧವಾಗಿ ಮಾಡಲಾಯಿತು. 2018-19ರ ಸಾಲಿನ ವಿದ್ಯಾರ್ಥಿ ನಾಯಕನಾಗಿ ಏಳನೇ ತರಗತಿಯ ಸಾಗರ್, ಉಪನಾಯಕನಾಗಿ ದರ್ಶನ್ ಆಯ್ಕೆಯಾದರು. ಸುಮಾರು ಇನ್ನೂರ ಎಂಬತ್ತು ಮಕ್ಕಳು ಚುನಾವಣೆಯಲ್ಲಿ ಭಾಗವಹಿಸಿದ್ದರು.
ಚುನಾವಣೆಯ ಅರಿವು ಮಕ್ಕಳಿಗೆ ಆಗಬೇಕು. ಗುಪ್ತ ಮತದಾನ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಕರ್ತವ್ಯ ಅಂದುಕೊಂಡರೆ ಉತ್ತಮ ಆಡಳಿತವನ್ನು ಪ್ರತಿಷ್ಠಾಪಿಸಬಹುದು. ಮಕ್ಕಳಲ್ಲಿ ಮತದಾನದ ಜಾಗೃತಿಗಾಗಿ ಶಾಲೆಯಲ್ಲಿ ಅಣಕು ಮತದಾನ ಪ್ರಕ್ರಿಯೆ ನಡೆಸಿದ್ದೇವೆ.
– ಜಯಶ್ರೀ,
ಮುಖ್ಯೋಪಾಧ್ಯಾಯಿನಿ