Advertisement

Disease: ಡೆಂಘೀ ಜತೆ ಮಕ್ಕಳ ಕಾಡುತ್ತಿದೆ ಕಾಲು ಬಾಯಿ ರೋಗ!

10:10 AM Jul 01, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಳೆಗಾಲ ಪ್ರಾರಂಭವಾಗಿದ್ದು, ಒಂದೆಡೆ ಡೆಂಘೀ ಪ್ರಕರಣಗಳಲ್ಲಿ ಗಣನೀಯ ವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲಿಯೇ, ಸದ್ದಿಲ್ಲದೇ ಮಕ್ಕಳಲ್ಲಿ ಫ‌ೂಟ್‌- ಮೌತ್‌ ಆ್ಯಂಡ್‌ ಹ್ಯಾಂಡ್‌ ಡಿಸೀಸ್‌ (ಕಾಲು ಬಾಯಿ ರೋಗ) ಏರಿಕೆಯಾಗುತ್ತಿದೆ.

Advertisement

ಫ‌ೂಟ್‌ ಆ್ಯಂಡ್‌ ಮೌತ್‌ ಡಿಸೀಸ್‌ ಸಾಮಾನ್ಯವಾಗಿ 10 ವರ್ಷದ ಒಳಗಿನ ಮಕ್ಕಳಲ್ಲಿ ಸೋಂಕು ದೃಢವಾಗುತ್ತಿದೆ. ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಕಾಕ್ಸ್‌ಸಾಕಿ ವೈರಸ್‌ ದೇಹ ಸೇರುವುದರಿಂದ ಸೋಂಕು ದೃಢವಾಗುತ್ತದೆ. ಇದು ಲಾಲಾರಸ, ಮಲ, ಉಸಿರಾಟದ ಹಾಗೂ ಸೋಂಕಿತ ಮಗುವಿನ ಸಂಪರ್ಕದ ಮೂಲಕವೂ ಕಾಲು ಬಾಯಿ ರೋಗ ಹರಡಬಹುದಾಗಿದೆ. ಅತ್ಯಂತ ಸುಲುಭವಾಗಿ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹರಡುತ್ತದೆ. ಕಳೆದ ಒಂದು ವಾರದಿಂದ ಬೆಂಗಳೂರು ಸೇರಿ ದಂತೆ ಇತರೆ ಜಿಲ್ಲೆಗಳ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ಬರುವ 20 ಜ್ವರದ ಪ್ರಕರಣದಲ್ಲಿ 12 ಪ್ರಕರಣಗಳು ಕಾಲುಬಾಯಿ ರೋಗಕ್ಕೆ ಸಂಬಂಧಿಸಿದೆ. ಈ ಸಂಖ್ಯೆ ಮುಂದಿನ ದಿನದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ. 10 ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. 10 ವರ್ಷ ಮೇಲ್ಪಟ್ಟವರಲ್ಲಿ ಈ ವೈರಸ್‌ ತೀವ್ರತೆ ಪ್ರಮಾಣ ತುಂಬಾ ಕಡಿಮೆ ಇರಲಿದೆ. ಕೆಲವೊಂದು ಶಾಲೆಗಳಲ್ಲಿ ಕಾಲು ಬಾಯಿ ರೋಗವಿದ್ದ ಮಕ್ಕ ಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಶಾಲಾ ಶಿಕ್ಷಕರು ಮನವಿ ಮಾಡಿದ್ದಾರೆ. ಕಾಲು ಬಾಯಿ ರೋಗವು ಮಾರಣಾಂತಿಕ ವಲ್ಲ ದಿದ್ದರೂ, ಪೋಷಕರು ಎಚ್ಚರಿಕೆ ವಹಿಸಬೇಕು. ಸೋಂಕು ಸೌಮ್ಯವಾಗಿದೆ. ಆದರೆ, ಹೆಚ್ಚು ವೇಗವಾಗಿ ಹರಡುತ್ತದೆ. ಮಕ್ಕಳಲ್ಲಿ ರೋಗಕ್ಕೆ ಕಾರಣವಾಗುವ ವೈರಸ್‌ಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯಿಲ್ಲದ ಕಾರಣದಿಂದ ಮಕ್ಕಳು ಸಾಮಾನ್ಯವಾಗಿ ಸೋಂಕು ಹೆಚ್ಚಾಗಿ ಕಂಡು ಬರುತ್ತದೆ. 5 ವರ್ಷ ದೊಳಗಿನ ಮಕ್ಕಳಲ್ಲಿ ಅಪರೂಪದ ಪ್ರಕರಣದಲ್ಲಿ ಕೆಲವೊಬ್ಬರು ಮೆದುಳು ಸೋಂಕು ಹಾಗೂ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ ಎನ್ನುತ್ತಾರೆ ವೈದ್ಯರು.

ಸೋಂಕಿನ ಲಕ್ಷಣಗಳೇನು?: ಫ‌ೂಟ್‌ ಆ್ಯಂಡ್‌ ಮೌತ್‌ ಡಿಸೀಸ್‌ಗೆ ದೃಢವಾಗುವ ಮಕ್ಕಳಲ್ಲಿ ಪ್ರಾರಂ ಭದ 2 ದಿನಗಳ ಕಾಲ ತೀವ್ರ ಜ್ವರ ಇರಲಿದೆ. ಜತೆಗೆ ಬಾಯಿ ಹೊರ ಹಾಗೂ ಒಳಭಾಗದಲ್ಲಿ ಹುಣ್ಣುಗಳು, ಕೈ-ಕಾಲು-ಪಾದ, ಪೃಷ್ಟದ ಮೇಲೆ ಕೆಂಪು ಬಣ್ಣದ ಕೀವಿನಿಂದ ಕೂಡಿದ ದದ್ದುಗಳು, ನೋವು ಹಾಗೂ ತುರಿಕೆ ಸಹ ಇರಲಿದೆ. ಇದು ಗುಣಮುಖವಾಗಲು ಸುಮಾರು 5ರಿಂದ 10ದಿನಗಳು ಬೇಕಾಗುತ್ತದೆ. ಮುನ್ನೆಚ್ಚರಿಕೆ ಅಗತ್ಯ: ಕಾಲ ಬಾಯಿ ರೋಗಕ್ಕೆ ತುತ್ತಾದ ಮಕ್ಕಳನ್ನು ಗುಣಮುಖರಾಗುವ ವರೆಗೆ ಶಾಲೆಗೆ ಕಳುಹಿಸಬಾರದು. ಕೈ ಸ್ವತ್ಛತೆಗೆ ಗಮನ, ಸೋಂಕಿತರಿಂದ ದೂರ ಉಳಿಯಬೇಕು. ಉಪ್ಪು, ಖಾರ, ಮಸಾಲೆ ಪದಾರ್ಥ ನೀಡಲೇಬಾರದು.

ಈ ವೈರಸ್‌ ಹೇಗೆ ಹರಡುತ್ತದೆ?:

 ಬಾಯಿಯ ಲಾಲಾರಸ

Advertisement

ಗುಳ್ಳೆಗಳು

 ಮಲ

 ಕೆಮ್ಮು

 ಸೀನು

ಲಕ್ಷಣಗಳೇನು?:

 ತೀವ್ರ ಜ್ವರ

 ಕೆಂಪು ಬಣ್ಣದ ಕೀವಿನಿಂದ ಕೂಡಿದದದ್ದು

 ಮೈ ಕೈ ನೋವು

 ಬಾಯಿ ಒಳಗೆ ಹೊರಗೆ ಹುಣ್ಣು

ಫ‌ೂಟ್‌, ಮೌತ್‌ ಆ್ಯಂಡ್‌ ಡಿಸೀಸ್‌ ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುತ್ತಿದೆ. ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ.ಆದರೆ, ನಿರಂತರವಾಗಿ ಕೈ ಸ್ವತ್ಛತೆ ಹಾಗೂ ಸೋಂಕಿತ ಮಕ್ಕಳಿಂದ ದೂರ ಇದ್ದರೆ ರೋಗವನ್ನು ತಡೆಗಟ್ಟ ಬಹುದು. ●ಡಾ.ರಂದೀಪ, ಆಯುಕ್ತರು ಆರೋಗ್ಯ ಇಲಾಖೆ

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next