Advertisement

“ಮಾದಕ ವ್ಯಸನದಿಂದ ಮಕ್ಕಳು,ಯುವಕರನ್ನು ರಕ್ಷಿಸಬೇಕಾಗಿದೆ’

06:45 AM Aug 23, 2018 | Team Udayavani |

ಉಡುಪಿ: ಪ್ರಸ್ತುತ ಮಕ್ಕಳು, ಯುವಕ, ಯುವತಿಯರು ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟ ನಡೆಸಬೇಕಾಗಿದೆ. ಬಹು ದೊಡ್ಡ ಪಿಡುಗಾದ ಮಾದಕ ವ್ಯಸನ ಹೋಗಲಾಡಿಸಲು ಸಮಾಜದ ಸರ್ವರೂ ಕೈಜೋಡಿಸಬೇಕಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ್‌ ನಾಯ್ಕ ಕರೆ ನೀಡಿದರು.

Advertisement

ಜಿಲ್ಲಾ ಪೊಲೀಸ್‌ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಪ್ರಸ್‌ ಕ್ಲಬ್‌ ಆಶ್ರಯದಲ್ಲಿ ನಡೆಯುತ್ತಿರುವ ಮಾದಕ ವ್ಯಸನ ವಿರೋಧಿ ಮಾಸಾಚಾರಣೆ ಪ್ರಯುಕ್ತ ಉಡುಪಿಯ ಬಿಗ್‌ ಬಜಾರ್‌ನಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಬುಧವಾರ ನಡೆಸಲಾದ “ಸೆಲ್ಫಿ ವಿದ್‌ ಸಹಿ ಸಂಗ್ರಹ ಜಾಗೃತಿ ಅಭಿಯಾನ’ದಲ್ಲಿ ಸಹಿ ಹಾಕುವ ಮೂಲಕ ಉದ್ಘಾಟಿಸಿದ ಅವರು ಮಾತನಾಡಿ, 1940ರಲ್ಲಿ ಡ್ರಗ್ಸ್‌ ಆ್ಯಂಡ್‌ ಕಾಸೆ¾ಟಿಕ್‌ ಆ್ಯಕ್ಟ್ ಬಂದಿದ್ದರೂ ಮಾದಕ ದ್ರವ್ಯ ಕಳ್ಳ ಸಾಗಾಣಿಕೆ, ಉತ್ಪಾದನೆ, ಮಾರಾಟ ತಡೆಗಟ್ಟುವಲ್ಲಿ ಸಾಧ್ಯವಾಗಿಲ್ಲ. ಮಾದಕ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಇಂತಹ ಕಾರ್ಯಕ್ರಮಗಳಿಂದ ಮಾತ್ರ ಯುವಜನರ ಮನವೊಲಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮಾತನಾಡಿ, ಜನರ ಗಮನ ಸೆಳೆದು, ಮನ ಪರಿವರ್ತನೆಗೊಳಿಸಲು ಅಭಿಯಾನಗಳು ಸಹಕಾರಿಯಾಗಲಿವೆ. ಈ ಕಾರ್ಯಕ್ರಮದಿಂದ ಜನರ ಮನೆ ಮನೆಗಳಿಗೂ ಮಾದಕ ವ್ಯಸನ ವಿರೋಧದ ಬಗ್ಗೆ ಸ್ಪಷ್ಟ ಸಂದೇಶ ರವಾನೆಯಾಗಲಿದೆ ಎಂದರು.

ಹಸ್ತದ ಬಣ್ಣ ಹಚ್ಚುವ ಮೂಲಕ ಉದ್ಘಾಟನೆ ನೆರವೇರಿಸಿದ ನಟ, ರಂಗಕರ್ಮಿ ಸುಂದರ್‌ ರೈ ಮಂದಾರ ಮಾತನಾಡಿ, 15ರಿಂದ 25 ವರ್ಷದ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಶಾಶ್ವತವಾಗಿ ನಿಲ್ಲಿಸುವ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದರು.ಎಸ್‌ಪಿ ಲಕ್ಷ್ಮಣ್‌ ಬ. ನಿಂಬರಗಿ, ಬಿಗ್‌ ಬಜಾರ್‌ನ ವ್ಯವಸ್ಥಾಪಕ ರಾಘವೇಂದ್ರ ಕೆ., ಮಂಗಳೂರು ಅಕ್ಯುಮೆನ್‌ ಟ್ರೆçನಿಂಗ್‌ ಇನ್ಸಿಟ್ಯೂಟ್‌ನ ಮ್ಯಾನೆಜಿಂಗ್‌ ಟ್ರಸ್ಟಿ ಜೊಯೆಲ್‌ ಸೋನ್ಸ್‌, ಅಡಿಷನಲ್‌ ಎಸ್‌ಪಿ ಕುಮಾರ ಚಂದ್ರ, ಪತ್ರಕರ್ತರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.
 
ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ 5 ಮಂದಿ ಅದೃಷ್ಟಶಾಲಿಗಳಿಗೆ ಗಿಫ್ಟ್ ವೋಚರ್‌ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಸೆಲ್ಫಿ ವಿದ್‌ ಸಹಿ ಸಂಗ್ರಹದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಪಲ್ಲವಿ ಸಂತೋಷ್‌ ಸ್ವಾಗತಿಸಿ, ಪ್ರಸ್‌ ಕ್ಲಬ್‌ ಸಂಚಾಲಕ ನಾಗರಾಜ ವರ್ಕಾಡಿ ನಿರೂಪಿಸಿದರು.ಅಶೋಕ್‌ ಪೂಜಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next