Advertisement

Bengaluru: ಅಶ್ವಿ‌ನಿ ಪುನೀತ್‌ಗೆ ನಿಂದನೆ: ಫಿಲ್ಮ್ ಚೇಂಬರ್‌ಗೆ ದೂರು

03:43 PM Sep 06, 2024 | Team Udayavani |

ಬೆಂಗಳೂರು: ಕೆಲವು ದಿನಗಳ ಹಿಂದೆ ಅಶ್ವಿ‌ನಿ ಪುನೀತ್‌ ರಾಜ್‌ಕುಮಾರ್‌ ಅವರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿ ಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ಡೀಪ್‌ ಫೇಕ್‌ ವಿಡಿಯೋ ಮಾಡಿದ್ದ ವ್ಯಕ್ತಿಯ ವಿರುದ್ಧ ಮಂಡಳಿಗೆ ದೂರು ನೀಡಲಾಗಿದೆ.

Advertisement

ಈ ಕುರಿತಾಗಿ ರಾಜ್‌ ಕುಟುಂಬದ ಅಭಿ ಮಾನಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಜತೆಗೆ ನಕಲಿ ಜಾಲತಾಣ ಖಾತೆಯಿಂದ ಅಸಭ್ಯ, ಚಾರಿತ್ರ್ಯ ಹೀನ ವಿಡಿಯೋಗಳನ್ನು ಹರಿಬಿಡುತ್ತಿ ರುವುದು ಹೆಚ್ಚಾದ ಕಾರಣ, ಜಾಲತಾಣ ಖಾತೆಗಳಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವಂತೆಯೂ ಸರ್ಕಾರ ಕ್ರಮವಹಿಸ ಬೇಕೆಂದು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಂಡಳಿ ಅಧ್ಯಕ್ಷ ಎನ್‌.ಎಂ. ಸುರೇಶ್‌, ಚಿತ್ರರಂಗ ಒಂದು ಕುಟುಂಬವಿದ್ದಂತೆ. ಯಾರೂ ಇಂಥ ಹೀನ ಕೃತ್ಯ ಮಾಡ ಬಾರದು. ಇತ್ತೀಚೆಗೆ ಇಂಥ ಪ್ರಕರಣ ಹೆಚ್ಚಾಗುತ್ತಿವೆ. ಹಾಗಾಗಿ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ನಿರ್ಮಾಪಕ ಸಾ.ರಾ. ಗೋವಿಂದು ಮಾತನಾಡಿ, ರಾಜ್‌ ಕುಟುಂಬಕ್ಕೆ ಒಂದು ಗೌರವದ ಸ್ಥಾನವಿದೆ. ಈ ರೀತಿಯ ಕೃತ್ಯವೆಸಗಿ ಕರ್ನಾಟಕ ಚಿತ್ರರಂಗದ ಘನತೆಗೆ ಧಕ್ಕೆ ತರಬೇಡಿ. ಕೃತ್ಯವೆಸಗಿದವರ ವಿರುದ್ಧ ಕ್ರಮ ಕೈಗೊಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.