Advertisement

ಮಕ್ಕಳ ದತ್ತು: ಕರ್ನಾಟಕಕ್ಕೆ 2ನೇ ಸ್ಥಾನ

10:55 PM May 27, 2019 | Team Udayavani |

ಹೊಸದಿಲ್ಲಿ: 2018-19ರ ವರ್ಷದಲ್ಲಿ ಮಕ್ಕಳನ್ನು ದತ್ತು ಪಡೆಯುವ ಪ್ರಕರಣಗಳ ಸಂಖ್ಯೆ 4,000 ದಾಟಿದ್ದು, ಈ ಪೈಕಿ 2,398 ಹೆಣ್ಣು ಮಕ್ಕಳನ್ನು ದತ್ತು ಪಡೆಯಲಾಗಿದೆ ಎಂದು ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್‌ಎ) ತಿಳಿಸಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 845 ಮಕ್ಕಳನ್ನು ದತ್ತು ಪಡೆಯ ಲಾಗಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿದೆ. ಇಲ್ಲಿ 281 ಮಕ್ಕಳನ್ನು ದತ್ತು ಪಡೆಯ ಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

Advertisement

ಕಳೆದೈದು ವರ್ಷಗಳಿಗೆ ಹೋಲಿಸಿದರೆ ದತ್ತು ಸ್ವೀಕಾರ ಸಂಖ್ಯೆ 2018-19ರಲ್ಲಿ ಗಣನೀಯ ಹೆಚ್ಚಾಗಿದೆ. 2015-16ರಲ್ಲಿ 3,677 ಮಕ್ಕಳನ್ನು ದತ್ತು ನೀಡಲಾಗಿತ್ತು. ಇತ್ತೀಚೆಗೆ ದತ್ತು ಪಡೆಯಲಿಚ್ಛಿಸುವವರು ಹೆಣ್ಣುಮಕ್ಕಳಿಗೆ ಮೊದಲ ಪ್ರಾಶಸ್ತ್ರ ನೀಡುತ್ತಿದ್ದಾರೆ ಎಂದಿದೆ ಪ್ರಾಧಿಕಾರ.

Advertisement

Udayavani is now on Telegram. Click here to join our channel and stay updated with the latest news.

Next