Advertisement

ಬಾಲ್ಯದಲ್ಲೇ ಬೊಜ್ಜು

09:38 PM Aug 03, 2019 | Team Udayavani |

ಕಳೆದ ಸಂಚಿಕೆಯಿಂದ- ಕೊಬ್ಬು
ಆಹಾರದ ನಾರಿನಂಶವು ಶಕ್ತಿಯ ಒಂದು ಪ್ರಮುಖ ಮೂಲವಾಗಿದೆ. ಮಾತ್ರವಲ್ಲದೆ ಅದು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳ ಸರಬರಾಜಿಗೆ ಸಹಾಯ ಮಾಡುತ್ತದೆ. ಅಲ್ಲದೆ ಆಲ್ಫಾ-ಲಿನೊಲೆನಿಕ್‌ ಆ್ಯಸಿಡ್‌ (ಎಎಲ್‌ಎ, ಒಮೆಗಾ -3 ಗುಂಪು) ಮತ್ತು ಲಿನೊಲೆಯಿಕ್‌ ಆ್ಯಸಿಡ್‌ (ಎಲ್‌ಎ, ಒಮೆಗಾ -6 ಗುಂಪು) ಎಂಬ ಎರಡು ಅಗತ್ಯ ಫ್ಯಾಟಿ ಆ್ಯಸಿಡ್‌ಗಳನ್ನು ಒದಗಿಸುತ್ತದೆ. ನಾಲ್ಕರಿಂದ 18 ವರ್ಷ ವಯೋಮಾನದ ಮಕ್ಕಳಲ್ಲಿ ಒಟ್ಟು ಕೊಬ್ಬು ಪೂರೈಕೆಯು ಶಕ್ತಿ ಸೇವನೆಯ ಶೇ.25ರಿಂದ 35ರಷ್ಟಿರಬೇಕು.

Advertisement

ಸ್ಯಾಚುರೇಟೆಡ್‌ ಮತ್ತು ಟ್ರಾನ್ಸ್‌ ಫ್ಯಾಟ್‌: ಸ್ಯಾಚುರೇಟೆಡ್‌ ಫ್ಯಾಟ್‌ ಸೇವನೆಯನ್ನು ಕಡಿಮೆ ಮಾಡಬೇಕು – ಕೆಂಪು ಮಾಂಸ, ಕೋಳಿಮಾಂಸ ಮತ್ತು ಪೂರ್ಣ ಕೊಬ್ಬಿನ ಹೈನು ಉತ್ಪನ್ನಗಳಂತಹ ಪ್ರಾಣಿಜನ್ಯ ಆಹಾರ ಮೂಲಗಳಿಂದ ಇವು ದೊರೆಯುತ್ತವೆ. ಹೀಗಾಗಿ ಸ್ಯಾಚುರೇಟೆಡ್‌ ಫ್ಯಾಟ್‌ ಬದಲಾಗಿ ತರಕಾರಿ ಮತ್ತು ಎಣ್ಣೆಕಾಳುಗಳ ಎಣ್ಣೆಗಳನ್ನು ಉಪಯೋಗಿಸಬಹುದು. ಇವುಗಳು ಅಗತ್ಯವಾದ ಫ್ಯಾಟಿ ಆ್ಯಸಿಡ್‌ಗಳನ್ನು ಒದಗಿಸುವುದಲ್ಲದೆ ವಿಟಮಿನ್‌ ಇ ಕೂಡ ನೀಡುತ್ತವೆ. ಆಲಿವ್‌, ಬೀಜಗಳು, ಬೆಣ್ಣೆಹಣ್ಣು ಸಮುದ್ರ ಆಹಾರಗಳಲ್ಲಿ ಇರುತ್ತದೆ. ಭಾಗಶಃ ಹೈಡ್ರೊಜನೀಕೃತ ಎಣ್ಣೆಗಳ ಉಪಯೋಗವನ್ನು ವರ್ಜಿಸುವ ಮೂಲಕ ಟ್ರಾನ್ಸ್‌ ಫ್ಯಾಟ್‌ ಸೇವನೆಯನ್ನು ಕಡಿಮೆ ಮಾಡಿಕೊಳ್ಳಿ.

ಸೇರ್ಪಡೆ ಸಕ್ಕರೆ: ಹೆಚ್ಚುವರಿ ಸಕ್ಕರೆ ಸೇರ್ಪಡೆ ಮಾಡಿ ಸೇವಿಸುವುದನ್ನು ಕಡಿಮೆ ಮಾಡಿರಿ. ಹಣ್ಣು ಮತ್ತು ಹಾಲುಗಳಲ್ಲಿ ನೈಸರ್ಗಿಕವಾಗಿ ಇರುವ ಸಕ್ಕರೆಯಂಶದ ಹೊರತಾಗಿ ಹೆಚ್ಚುವರಿಯಾಗಿ ಸಕ್ಕರೆ ಸೇರಿಸುವುದನ್ನು ವರ್ಜಿಸಿ. ಬ್ರೌನ್‌ ಶುಗರ್‌, ಕಾರ್ನ್ ಸ್ವೀಟನರ್‌, ಕಾರ್ನ್ ಸಿರಪ್‌, ಜೇನು ಇತ್ಯಾದಿಗಳು ಹೆಚ್ಚುವರಿ ಸಕ್ಕರೆಗಳಿಗೆ ಉದಾಹರಣೆ.

ಬಾಲ್ಯದಲ್ಲಿಯೇ ಬೊಜ್ಜು ಅಧಿಕ ದೇಹತೂಕ
ಉಂಟಾಗುವುದನ್ನು ತಡೆಯಲು ಪೋಷಕರಾಗಿ
ನಾವೇನು ಮಾಡಬಹುದು?
ನಿಮ್ಮ ಮಗು ಆರೋಗ್ಯಯುತ ದೇಹತೂಕವನ್ನು ಹೊಂದಿರುವುದಕ್ಕಾಗಿ ನಿಮ್ಮ ಮಗು ಸೇವಿಸುವ ಆಹಾರ ಮತ್ತು ಪಾನೀಯಗಳಿಂದ ಒದಗುವ ಕ್ಯಾಲೊರಿಗಳು ಹಾಗೂ ಮಗುವಿನ ದೈಹಿಕ ಚಟುವಟಿಕೆ ಮತ್ತು ಬೆಳವಣಿಗೆಯ ನಡುವೆ ಸಮತೋಲನವನ್ನು ಸಾಧಿಸಿ. ಆರೋಗ್ಯಯುತ ಆಹಾರ ಆಯ್ಕೆಗಳು ಮತ್ತು ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಇಡೀ ಕುಟುಂಬಕ್ಕೆ ಆರೋಗ್ಯವನ್ನು ಒದಗಿಸುತ್ತದೆ; ಆದ್ದರಿಂದ ಈ ಕ್ರಿಯೆಯಲ್ಲಿ ಎಲ್ಲರೂ ಸೇರಿಕೊಳ್ಳಬೇಕು. ಇಡೀ ಕುಟುಂಬ ಆರೋಗ್ಯಯುತ ಜೀವನ ಮತ್ತು ಆಹಾರಶೈಲಿಯನ್ನು ಅಳವಡಿಸಿಕೊಂಡರೆ ಅದರಿಂದ ಅಧಿಕ ದೇಹತೂಕ ಮತ್ತು ಬೊಜ್ಜು ಹೊಂದಿರುವ ಮಕ್ಕಳು ಸುಲಭವಾಗಿ ಪ್ರಯೋಜನ ಪಡೆಯುತ್ತಾರೆ.

ಮುಂದುವರಿಯುವುದು

Advertisement
Advertisement

Udayavani is now on Telegram. Click here to join our channel and stay updated with the latest news.

Next