– ಶಕ್ತಿ – ಶಕ್ತಿಯು ಮೂರು ಪ್ರಮುಖ ಸೂಕ್ಷ್ಮ ಪೌಷ್ಟಿಕಾಂಶಗಳಿಂದ ಒದಗಿಬರುತ್ತದೆ: ಪ್ರೊಟೀನ್, ಕೊಬ್ಬು ಮತ್ತು ಕಾಬೊìಹೈಡ್ರೇಟ್.
Advertisement
– ಕಾಬೊìಹೈಡ್ರೇಟ್ – ಕಾಬೊìಹೈಡ್ರೇಟ್‌ಗಳು ಶಕ್ತಿಯ ಮುಖ್ಯ ಮೂಲವಾಗಿದ್ದು, ವಿಟಮಿನ್‌ಗಳು ಮತ್ತು ಸೂಕ್ಷ್ಮ ಧಾತುಗಳು ರವಾನೆಗೆ ಸಹಕರಿಸುತ್ತವೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕಾಬೊìಹೈಡ್ರೇಟ್ ಪೂರೈಕೆಯಾಗುವುದರಿಂದ ನಾರಿನಂಶ, ಕಬ್ಬಿಣದಂಶ, ಥಯಮೀನ್, ನಿಯಾಸಿನ್, ರೈಬೊಫ್ಲೇವಿನ್ ಮತ್ತು ಫೋಲಿಕ್ ಆ್ಯಸಿಡ್ ಪೂರೈಕೆಗೂ ನೆರವಾಗುತ್ತದೆ. ಒಟ್ಟು ಶಕ್ತಿ ಪೂರೈಕೆಯ ಶೇ.45ರಿಂದ ಶೇ.65ರಷ್ಟು ಕಾಬೊìಹೈಡ್ರೇಟ್ ಇರಲೇ ಬೇಕು. ಇಡೀ ಗೋಧಿಯ ಬ್ರೆಡ್, ಕುಚ್ಚಿಗೆ ಅಕ್ಕಿಯ ಅನ್ನ, ಸಜ್ಜೆ, ರಾಗಿ, ಜೋಳದಂತಹ ಇಡೀ ಧಾನ್ಯಗಳನ್ನು ಆರಿಸಿಕೊಳ್ಳಿ. ಬಿಳಿ ಬ್ರೆಡ್, ಪಾಸ್ತಾದಂತಹ ಸಂಸ್ಕರಿತ ಧಾನ್ಯ ಉತ್ಪನ್ನಗಳ ಸೇವನೆಯನ್ನು ಕಡಿಮೆ ಮಾಡಿ.