Advertisement

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

04:24 PM Jul 25, 2021 | Team Udayavani |

ಪ್ರೌಢಾವಸ್ಥೆಯು ಏನೇ ಹೇಳಿದರೂ ಕೂಡ ಬಹು ಬೇಗನೆ ನಂಬುವ ವಯಸ್ಸು. ನಿಷ್ಕಲ್ಮಶ ಮನಸ್ಸು. ಯಾವುದೇ ಕೋಪ, ಅಸೂಯೆ, ಮತ್ಸರವಿಲ್ಲದೆ ಆಕಾಶದಲ್ಲಿ ಹಾರಾಡುವ ಸ್ವತ್ಛಂದದ ಹಕ್ಕಿಯಂತೆ ಶುದ್ಧ, ಅಂತಃಕರಣದ ಮನಸ್ಸು. ಈ ವಯಸ್ಸಿನ ಶಾಲಾ-ದಿನಗಳ ನೆನಪುಗಳು ಅಚ್ಚಳಿಯದಂತೆ ಉಳಿದುಬಿಟ್ಟಿದೆ.

Advertisement

ಸೂರ್ಯನ ಕಿರಣಗಳು ಭೂಮಿಯನ್ನು ಸ್ಪರ್ಶಿಸುವಷ್ಟರಲ್ಲೇ ಬೆಳಗ್ಗೆ ಬೇಗೆ ಏಳಬೇಕಿತ್ತು. ಅಮ್ಮನಲ್ಲಿ ರಾತ್ರಿಯೇ ವಿನಂತಿ ಮಾಡಿ ಬೇಗ ಎಬ್ಬಿಸಲು ಹೇಳಿರುತ್ತಿದೆ. ಆದರೆ, ಚುಮು ಚುಮು ಚಳಿಗೆ ಮತ್ತೆ ನಿದ್ದೆ ಜಾರಿ ಬಿಡುತ್ತಿದ್ದೆ. ಆಗ ಅಮ್ಮ ಮಾತ್ರ, ನನಗೆ ಎಬ್ಬಿಸಲು ಹೇಳಿ, ಮತ್ತೇ ನೀನು ಮಲಗಿದ್ದೀಯಾ ಎಂದು ಗದರಿ, ಮುಖಕ್ಕೆ ನೀರು ಎರಚುತ್ತಿದ್ದಳು. ಅಷ್ಟರಲ್ಲೇ ಅಪ್ಪನನ್ನು ಕಂಡಾಗಲೇ ಹೆದರಿ, ಓಡಿ ಹೋಗಿ ಶಾಲೆಗೆ ಹೋಗಲು ಸಿದ್ಧವಾಗುತ್ತಿದ್ದೆ.

ಶಾಲೆಗೆ ಹೋಗುವುದು ಒಂದು ಖುಷಿ, ಸಂಭ್ರಮ. ಅಲ್ಲಿ ಸ್ನೇಹಿತರಿದ್ದಾರೆ, ಗುರುಗಳು ಇದ್ದಾರೆ. ಅಲ್ಲೇ ಪಕ್ಕದ ಪರಿಸರದಲ್ಲಿ ಬೆಳೆದು ನಿಂತಿರುವ ಹೂ-ರಾಶಿಗಳು, ಗಿಡ-ಮರಗಳು. ಮಕ್ಕಳಂತೆ ನಗು ಮುಖ ಹೊತ್ತು ನಳನಳಿಸುತ್ತಿದ್ದವು.

ಪುಸ್ತಕದ ಬ್ಯಾಗ್‌ನ್ನು ಬೆನ್ನಿಗೇರಿಸಿಕೊಂಡು, ಊರ ಹೊರಗಿರುವ ಬಯಲಿನಲ್ಲಿ ಗೆಳೆಯ-ಗೆಳೆತಿಯರೊಂದಿಗೆ ಹರಟೆ ಹೊಡೆಯುತ್ತಾ ನಮ್ಮ ಪಯಣ ಶುರುವಾಗಿತ್ತು.

ಗುಡ್ಡ-ಬೆಟ್ಟ, ಹೊಳೆ, ಸೇತುವೆಗಳನ್ನು ದಾಟಿ ಸಾಗುತ್ತಿದ್ದೆವು. ಬೆಟ್ಟದ ತಪ್ಪಲಿನಲ್ಲಿ ವಿಶಾಲವಾದ ಮರಗಳ ಮಧ್ಯೆ ಮುಳ್ಳಕಾಯಿ, ನೇರಳೆ, ಮನಡಕೆ ಹೀಗೆ ಹಲವಾರು ಹಣ್ಣುಗಳನ್ನು ಒಟ್ಟುಗೂಡಿಸಿ ಶಾಲೆಗೆ ಹೋಗಿ ಹಂಚುವ ಘನ ಕಾರ್ಯ ಮಾಡುತ್ತಿದ್ದೆವು. ಆಟ-ಪಾಠದ ಜತೆಗೆ ಯೋಗ ಮತ್ತು ಭಜನೆಯನ್ನು ಕಲಿಯಬೇಕಿತ್ತು. ಮತ್ತೆ ಊಟಕ್ಕೆ ಯಾವಾಗ ಗಂಟೆ ಬಾರಿಸುತ್ತೆ ಎಂದು ಕೈ ಗಡಿಯಾರದ ಕಡೆಗೆ ಗಮನ ಹೋಗುತ್ತಿತ್ತು. ಅಧ್ಯಾಪಕರು ತರಗತಿಯಿಂದ ಹೋಗದಿದ್ದಾಗ ಎಲ್ಲರೂ ಸೇರಿ ಜೋರಾಗಿ ಮಾತನಾಡುತ್ತಿದ್ದೆವು. ಆಗ ಬೇಗ ಹೋಗಿ ಬಿಡುತ್ತಾರೆ. ಆದರೆ ಇದು ಪ್ರತಿ ಸಲ ನಡೆಯುತ್ತಿರಲ್ಲಿಲ್ಲ.

Advertisement

ಊಟದಲ್ಲೂ ಸ್ವರ್ಧೆ ಯಾರು ಮೊದಲು ಊಟ ಮಾಡಿ ಬರುತ್ತಾರೆ. ಅದಕೋಸ್ಕರ ತಾ ಮೊದಲು ನಾ ಮೊದಲು ಕುಳಿತುಕೊಳ್ಳಲು ಜಗಳಗಳೇ ನಡೆಯುತ್ತಿತ್ತು. ಅದು ಅಲ್ಲಿಗೆ ಮುಗಿಯುತ್ತಿತ್ತು. ಮತ್ತೆ ಎಲ್ಲರೂ ಖುಷಿಯಿಂದ ಸಮಯ ಕಳೆಯುತ್ತಿದ್ದೆವು. ಶಾಲೆಯಲ್ಲಿ ನಡೆಯುವ ಯಾವುದೇ ಸ್ಪರ್ಧೆ, ಕ್ರೀಡೆಗಳಾಗಿರಲಿ ಎಲ್ಲರೂ ಹುಮ್ಮಸ್ಸಿನಿಂದಲೇ ಭಾಗವಹಿಸುತ್ತಿದ್ದೆವು. ಸ್ಪರ್ಧೆಯ ಹೊರತಾಗಿಯೂ ನಮ್ಮ ಸ್ನೇಹ ಗಟ್ಟಿಯಾಗಿತ್ತು. ಗೆದ್ದವರೂ, ಸೋತವರೂ ಇಬ್ಬರೂ ಸಂತೋಷಪಡುತ್ತಿದ್ದೆವು.

ಸ್ವಾತಂತ್ರ್ಯ ದಿನಾಚರಣೆಯಂದು ನಾವೆಲ್ಲರೂ ಶುಭ್ರ ಬಟ್ಟೆ ಧರಿಸಿ, ಬ್ಯಾಡ್ಜ್ ಕಟ್ಟಿಕೊಂಡು, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ಆಚರಿಸುತ್ತಿದ್ದೆವು. ನೃತ್ಯ ಮಾಡಿ ಸಂತೋಷಪಡುತ್ತಿದ್ದೆವು. ನಿಷ್ಕಲ್ಮಶ ಮನಸ್ಸಿನಿಂದ ಎಲ್ಲರ ಜತೆ ಮಾತನಾಡುತ್ತಾ ಖುಷಿ-ಖುಷಿಯಾಗಿ ಸಮಯ ಕಳೆಯುತ್ತಿದ್ದೆವು.

ಮತ್ತೆ ಅದೇ ಬೆಂಚು, ಡೆಸ್ಕ್, ಬಾಲ್ಯದ ನೆನಪುಗಳು ಅಚ್ಚಳಿಯದಂತೆ ಕಣ್ಣೆದುರಿಗೆ ಬಂದು ಹೋಗುತ್ತದೆ. ಹಾಗೆಯೇ ಇರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಅದೇ ಬ್ಯಾಗ್‌ ಹಾಕಿ ಮತ್ತೆ ಶಾಲೆಗೆ ಹೋಗುವಂತಿದ್ದರೆ ಎಷ್ಟೊಂದು ಖುಷಿ ನೀಡುತ್ತಿತ್ತು.

 

ಹರ್ಷಿತಾ ವಿಟ್ಲ

ಆಳ್ವಾಸ್‌ ಕಾಲೇಜು, ಮೂಡುಬಿದಿರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next