Advertisement

ದಂಪತಿ ಕಲಹದಲ್ಲಿ ಮಗುವಿಗೆ ತೊಂದರೆ ಬೇಡ: ಸುಪ್ರೀಂಕೋರ್ಟ್‌

07:25 PM Dec 30, 2021 | Team Udayavani |

ನವದೆಹಲಿ: ಪತಿ ಮತ್ತು ಪತ್ನಿ ನಡುವಿನ ಕಲಹದಲ್ಲಿ ಮಗುವಿಗೆ ಸಮಸ್ಯೆ ಉಂಟಾಗಬಾರದು ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. ಸೇನೆಯ ಹಿರಿಯ ಅಧಿಕಾರಿ ಮತ್ತು ಅವರ ಪತ್ನಿ ನಡುವಿನ ವಿವಾಹ ವಿಚ್ಛೇದನಕ್ಕೆ ಸಮ್ಮತಿ ನೀಡಿದೆ.

Advertisement

ನ್ಯಾ.ಎಂ.ಆರ್‌.ಷಾ ಮತ್ತು ನ್ಯಾ.ಎ.ಎಸ್‌.ಬೋಪಣ್ಣ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ. ಜತೆಗೆ ದಂಪತಿಯ ಪುತ್ರನಿಗೆ ಸದ್ಯ 13 ವರ್ಷ ವಯಸ್ಸಾಗಿದ್ದು, ಆತ ಪ್ರಾಪ್ತ ವಯಸ್ಕನಾಗುವ ವರೆಗೆ ಸೇನೆಯ ಹಿರಿಯ ಅಧಿಕಾರಿಯೇ 50 ಸಾವಿರ ರೂ. ಮೊತ್ತವನ್ನು ಪತ್ನಿ ನೀಡಬೇಕು ಎಂದು ತೀರ್ಪು ನೀಡಿದೆ.

2011ರ ಮೇ ಬಳಿಕ ಸೇನೆಯ ಹಿರಿಯ ಅಧಿಕಾರಿ ಮತ್ತು ಪತ್ನಿ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದಾರೆ. ಹೀಗಾಗಿ, ದಂಪತಿಯ ಮದುವೆ ಮುರಿದು ಬಿದ್ದಿದೆ ಎಂದು ಹೇಳಲು ಅವಕಾಶ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next