Advertisement

ಮಕ್ಕಳ ಅಶ್ಲೀಲ ಚಿತ್ರ ಜಾಲ ಪತ್ತೆ

11:23 PM Oct 14, 2019 | Team Udayavani |

ತಿರುವನಂತಪುರಂ: ಮಕ್ಕಳ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲೆಂದೇ ಅಂತಾರಾಷ್ಟ್ರೀಯ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳನ್ನು ರಚಿಸಿಕೊಂಡಿರುವ ಜಾಲವೊಂದನ್ನು ಪತ್ತೆಹಚ್ಚಲಾಗಿದ್ದು, 7 ಮಂದಿ ವಿರುದ್ಧ ಸಿಬಿಐ ಕೇಸು ದಾಖಲಿಸಿಕೊಂಡಿದೆ. ಸಿಬಿಐನ ಅಂತಾರಾಷ್ಟ್ರೀಯ ಪೊಲೀಸ್‌ ಸಹಕಾರ ಘಟಕಕ್ಕೆ ಜರ್ಮನಿಯ ರಾಯಭಾರ ಕಚೇರಿ ಕಳುಹಿಸಿದ ರಾಜತಾಂತ್ರಿಕ ಸಂವಹನವೊಂದನ್ನು ಆಧರಿಸಿ ತನಿಖೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬೆಂದಿದೆ. ಸುಮಾರು 50,000 ಸದಸ್ಯರು ಇರುವ ಹಲವಾರು ಪ್ರಮುಖ ಗುಂಪುಗಳು ಮಕ್ಕಳ ಅಶ್ಲೀಲ ಚಿತ್ರಗಳನ್ನು ಜಾಲ ತಾಣಗಳಲ್ಲಿ ನಿರ್ವಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, 7-8 ತಂಡಗಳು ಇದನ್ನು ನಿರ್ವಹಿಸುತ್ತಿವೆ ಎಂದು ಕೇರಳ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ 29 ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ, ಈ ದಂಧೆ ನಡೆಸಲಾಗುತ್ತಿದೆ ಎಂದೂ ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next