Advertisement

ಆಧಾರ್‌ ಲಿಂಕ್‌ನಿಂದ ಮಕ್ಕಳ ಪೋಷಕರ ಪತ್ತೆ

06:15 AM Aug 05, 2017 | Team Udayavani |

ಬಳ್ಳಾರಿ: ಆಂಧ್ರಪ್ರದೇಶದಿಂದ ತಪ್ಪಿಸಿಕೊಂಡು ರಾಜ್ಯದ ವಿವಿಧ ರೈಲು ನಿಲ್ದಾಣಗಳಲ್ಲಿ ಪತ್ತೆಯಾಗಿ ಕೊನೆಗೆ ಬಳ್ಳಾರಿ ನಗರದ ಬಾಲಕರ ರಕ್ಷಣಾ ಘಟಕದ ಬುದಿಟಛಿಮಾಂದ್ಯ ಮಕ್ಕಳ ಸಂಸ್ಥೆಯಲ್ಲಿ ರಕ್ಷಣೆ ಪಡೆದಿದ್ದ ಮೂವರು ಮಕ್ಕಳ ಪಾಲಕರು ಆಧಾರ್‌ ಕಾರ್ಡ್‌ ನಿಂದಾಗಿ ಪತ್ತೆಯಾಗಿದ್ದಾರೆ.

Advertisement

2012ರಲ್ಲಿ ಬಾಬು (15) ಚೆನ್ನೈನಲ್ಲಿ, 2015ರಲ್ಲಿ ಮೂಕ ರಾಜ (15) ಶಿವಮೊಗ್ಗ ರೈಲು ನಿಲ್ದಾಣದಲ್ಲಿ, ಕಲ್ಯಾಣ್‌ (14) ಬೆಂಗಳೂರಿನಲ್ಲಿ ಪತ್ತೆಯಾಗಿದ್ದ. ಈ ಮೂವರೂ ಅನಾಥರಾಗಿದ್ದು, ಬುದಿಟಛಿಮಾಂದ್ಯರಾಗಿದ್ದರಿಂದ ಬಳ್ಳಾರಿಯಲ್ಲಿರುವ ಬುದ್ಧಿಮಾಂದ್ಯ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಲಾಗಿತ್ತು.

ಬಳ್ಳಾರಿಯಲ್ಲಿ ಇತ್ತೀಚೆಗೆ ಈ ಮಕ್ಕಳಿಗೆ ಆಧಾರ್‌ ಕಾರ್ಡ್‌ ಮಾಡಿಸಿದಾಗ ಆಧಾರ್‌ನ ಡೇಟಾಬೇಸ್‌ನಲ್ಲಿದ್ದ ಮಾಹಿತಿಯು ನಾಪತ್ತೆಯಾದವರ ದೂರು ದಾಖಲು ಘಟಕದಲ್ಲಿದ್ದ ಮಾಹಿತಿ ಜತೆಗೆ ಹೋಲಿಕೆಯಾಗಿ ಪೋಷಕರ ಪತ್ತೆಯಾಗಿದೆ.
ಬಳ್ಳಾರಿಯ ಬುದ್ಧಿಮಾಂದ್ಯ ಮಕ್ಕಳ ಸಂಸ್ಥೆಯ ಅ ಧೀಕ್ಷಕ ಕೊಟ್ರಪ್ಪ ಈ ಮಕ್ಕಳ ಪೋಷಕರನ್ನು ಸಂಪರ್ಕಿಸಿ ವಿಷಯ
ತಿಳಿಸಿದ್ದಾರೆ.

ಈ ಮೂವರು ಮಕ್ಕಳ ಪೈಕಿ ಬಾಬು ಮತ್ತು ಕಲ್ಯಾಣ್‌ರವರ ಪೋಷಕರು ಈಗಾಗಲೇ ಒಮ್ಮೆ ಬಳ್ಳಾರಿಗೆ ಆಗಮಿಸಿ ತಮ್ಮ ಮಕ್ಕಳ ಗುರುತು ಹಚ್ಚಿದ್ದಾರೆ. ಮೂಕ ರಾಜನ ಪೋಷಕರು ಶನಿವಾರ ಬಳ್ಳಾರಿಗೆ ಆಗಮಿಸಲಿದ್ದಾರೆ. ಶನಿವಾರ ನಗರದಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಕಲ್ಯಾಣ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಈ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡಾಗ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ ದೂರು, ಅವರ ಜನನ ಪ್ರಮಾಣ ಪತ್ರ ಮತ್ತಿತರೆ ದಾಖಲೆ ಪರಿಶೀಲಿಸಿ ಅವರನ್ನು ಪೋಷಕರ ಸುಪರ್ದಿಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next