Advertisement

ಬಾಲ್ಯವಿವಾಹ: ಎಲ್ಲರಲ್ಲಿ ಜಾಗೃತಿ ಮೂಡಿಸಬೇಕಿದೆ

03:49 PM Nov 01, 2018 | |

ಪುತ್ತೂರು: ವಯಸ್ಸಿಗೆ ಮೊದಲೇ ವಿವಾಹ ಮಾಡಿ ಕೊಟ್ಟರೆ, ಹೆಣ್ಣು ಮಕ್ಕಳು ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಆದ್ದರಿಂದ ಬಾಲ್ಯ ವಿವಾಹ ನಿಷೇಧದ ಬಗ್ಗೆ ಗ್ರಾಮದ ಜನರಿಗೆ ಮಾಹಿತಿ ನೀಡುವ ಕೆಲಸ ಆಗಬೇಕಿದೆ ಎಂದು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌ ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ನೆಲ್ಲಿಕಟ್ಟೆ ಶ್ರೀ ರಾಮಕೃಷ್ಣ ಸೇವಾ ಸಮಾಜದಲ್ಲಿ ಅ. 31ರಂದು ನಡೆದ ‘ಬಾಲ್ಯ ವಿವಾಹ ನಿಷೇಧ ಕಾನೂನಿನ ಅರಿವು’ ಉದ್ಘಾಟಿಸಿ ಮಾತನಾಡಿದರು.

Advertisement

ವಯಸ್ಸಿಗೆ ಬರುವ ಮೊದಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ತಪ್ಪು ಕೆಲಸ ನಡೆಯುತ್ತಿದೆ. ವಯಸ್ಸಿಗೆ ಬರುವ ಮೊದಲೇ ವಿವಾಹವಾದರೆ ಹೆಣ್ಣು ಮಕ್ಕಳು ಮಾನಸಿಕ, ದೈಹಿಕ ಆರೋಗ್ಯದಲ್ಲಿ ಬಹಳಷ್ಟು ಸಮಸ್ಯೆ ಎದುರಿಸುತ್ತಾರೆ. ಮಾನಸಿಕ ಖನ್ನತೆಗೂ ಒಳಗಾಗುತ್ತಾರೆ. ಹೆಣ್ಣುಮಕ್ಕಳಿಗೆ 18 ವರ್ಷ ಹಾಗೂ ಹುಡುಗರಿಗೆ 21 ವರ್ಷ ಆದ ಬಳಿಕವೇ ಮದುವೆ ಮಾಡಬೇಕು. ಮಕ್ಕಳಿಗೆ ಮದುವೆ ಮಾಡಿದ ಮಾತ್ರಕ್ಕೆ ಹೆತ್ತ ವರ ಹೊರೆ ಕಡಿಮೆ ಆಗುವುದಿಲ್ಲ. ಅವರ ಬೇಕು- ಬೇಡಗಳಿಗೆ ಸ್ಪಂದಿಸಬೇಕು ಎಂದರು.

ಬಾಲ್ಯ ವಿವಾಹ ನಿಷೇಧದ ಕಾನೂನಿನ ಅರಿವು ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಅಲ್ಲಿ ಸಿಗುವ ಕಾನೂನಿನ ಮಾಹಿತಿ ಪಡೆದುಕೊಂಡು, ಅದನ್ನು ತಮ್ಮ ಗ್ರಾಮದ ಜನರಿಗೆ ತಿಳಿಸುವ ಕಾರ್ಯ ಆಗಬೇಕು. ದಾಂಪತ್ಯ ಜೀವನ ಆರೋಗ್ಯದಿಂದ ಸಾಗಲು ಸಹಕರಿಸಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ ಮಾತನಾಡಿ, ದ.ಕ. ಬುದ್ಧಿವಂತರ ಜಿಲ್ಲೆ. ಶಿಕ್ಷಣದಲ್ಲಿ ಬಹಳಷ್ಟು ಮುಂದುವರಿದಿದ್ದೇವೆ. ಡಿಜಿಟಲ್‌ ಯುಗದಲ್ಲಿ ನಾವಿದ್ದು, ಕಾನೂನಿಗೆ ಗೌರವ ಕೊಡಬೇಕು. ಇಲಾಖೆಯಿಂದ ಎಲ್ಲ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಾನೂನಿನ ಮಾಹಿತಿ ನೀಡುವ ಮೂಲಕ ಅವರು ಜಾಗೃತರಾಗಲು ಸಾಧ್ಯ ಎಂದರು.

ಕ್ರೀಡಾಂಗಣ)ದಲ್ಲಿ ಲಗೋರಿ, ಜುಬಿಲಿ, ಕಣ್ಣಾಮುಚ್ಚಾಲೆ, ಪಾಲೆಡ್‌ ಒಯ್ಪುನೆ, ಟೈರ್‌ ತಿರುಗಿಸುವುದು, ಗೋಲಿ ಆಟ, ಕಲ್ಲಾಟ ಸ್ಪರ್ಧೆಗಳು ನಡೆಯಲಿದೆ. ತುಳು ಸಮ್ಮೇಳನದ ಅಂಗವಾಗಿ ಕಿರಿಯ ಪ್ರಾಥಮಿಕ ಶಾಲಾ ಹೆಣ್ಣು ಮಕ್ಕಳಿಗೆ ಕಲ್ಲಾಟ, ಕುಪ್ಪಿಗ್‌ ನೀರ್‌ ದಿಂಜಾವುನೆ, ಹುಡುಗರಿಗೆ ಸೈಕಲ್‌ ಚಕ್ರ, ಪಾಲೆಡ್‌ ಒಯ್ಪುನ, ಪ್ರೌಢಶಾಲಾ ವಿಭಾಗದ ಹುಡುಗಿಯರಿಗೆ ಸೂಜಿ ನೂಲು, ಜುಬಿಲಿ, ಗಂಡು ಮಕ್ಕಳಿಗೆ ಗೋಣಿ ಚೀಲ ಓಟ, ನಾಯಿ ಎಲು, ಮಹಿಳೆಯರಿಗೆ ಚೆನ್ನೆಮಣೆ, ಲಗೋರಿ, ಹಗ್ಗಜಗ್ಗಾಟ, ಪುರುಷರಿಗೆ ಲಗೋರಿ, ಕೊತ್ತಲಿಂಗೆ ಕ್ರಿಕೆಟ್‌, ಹಗ್ಗಜಗ್ಗಾಟ, ವೇಗದ ನಡಿಗೆ ಸ್ಪರ್ಧೆಗಳು ನಡೆದಿವೆ. 

ಬೂಕು, ಪಿರಾವುದ ಸೊತ್ತುಲೆ ತೂಪರಿಕೆ
ಸಮ್ಮೇಳನದ ಅಂಗವಾಗಿ ಕೆದಂಬಾಡಿ ಜತ್ತಪ್ಪ ರೈ ಮಂಟಮೆಯಲ್ಲಿ ನೂಕು ತೂಪರಿಕೆ (ಪುಸ್ತಕ ಪ್ರದರ್ಶನ-ಮಾರಾಟ ನಡೆಯಲಿದೆ. ಪಿರಾವುದ ಸೊತ್ತುಲ ತೂಪರಿಕೆ (ಪ್ರಾಚ್ಯ ವಸ್ತುಗಳ ಪ್ರದರ್ಶನ) ಮೊಳಹಳ್ಳಿ ಶಿವರಾಯ ಮಂಟಮೆಯಲ್ಲಿ ನಡೆಯಲಿದೆ. ಇದರಲ್ಲಿ ತುಳುನಾಡಿನ ಬದುಕು ಮತ್ತು ಸಂಸ್ಕೃತಿ ಬಿಂಬಿಸುವ ಹಳೇ ವಸ್ತುಗಳ ಪ್ರದರ್ಶನ ಇದೆ. ತುಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗುರುತಿಸಿ ಸಮ್ಮಾನಿಸಲಾಗುತ್ತದೆ. ಜತೆಗೆ ಕವಿಗೋಷ್ಠಿ, ಚಾವಡಿ ಪಟ್ಟಾಂಗ, ತುಳು ತಾಳಮದ್ದಳೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

Advertisement

ತುಳುವೆರೆ ದಿಬ್ಬಣ
ತುಳು ಸಮ್ಮೇಳನದ ಅಂಗವಾಗಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ನೆಹರೂನಗರ ಸುದಾನ ವಿದ್ಯಾಸಂಸ್ಥೆಯ ವರೆಗೆ ತುಳುವೆರೆ ದಿಬ್ಬಣ ಶಿರೋನಾಮೆಯಲ್ಲಿ ಆಕರ್ಷಕ ಮೆರವಣಿಗೆ ನಡೆಯಲಿದೆ. ಕೋಟಿ ಚೆನ್ನಯ ಮಹಾದ್ವಾರದ ಉದ್ಘಾಟನೆಯ ಬಳಿಕ ಸಹಕಾರ ರತ್ನ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಜತೆಗೆ ಬಿ.ಎಂ. ಇದಿನಬ್ಬ ಮಂಟಮೆಯಲ್ಲಿ ತುಳವರ ಕುಲ ಕಸುಬು, ಸ್ವಾತಂತ್ರ್ಯ ಹೋರಾಟಗಾರ ಶೀಂಟೂರು ನಾರಾಯಣ ರೈ ಅಂಗಣದಲ್ಲಿ ಧ್ವಜಾರೋಹಣ, ಬಿ.ಎಸ್‌. ರಾಮಣ್ಣ ರೈ ವೇದಿಕೆಯಲ್ಲಿ ತುಳು ಸಿನೆಮಾ ಪ್ರದರ್ಶನ, ದೇಶಭಕ್ತ ಎನ್‌. ಎಸ್‌. ಕಿಲ್ಲೆ ನಡೆ ಉದ್ಘಾಟನೆಯ ಬಳಿಕ ಕಬಿದುನಿಪು-ನಲಿಪು, ತುಳು ಸಾಹಿತ್ಯದ ಮಗ್ಗಿಲು, ಚಾವಡಿ ಚರ್ಚೆ-ದೈವ ನಿಲೆ (ಪಾರಿ, ಪಾಡ್ಡನ, ಉರಲ್‌, ಬೀರ ಸಂಧಿ), ‘ತುಳು-ತುಲಿಪು’ವಿನಲ್ಲಿ ಮಣ್ಣು, ನೀರು,ಬದುಕು -ಬೇಸಾಯ ಕುರಿತು ಮಾತುಕತೆ ವಿಚಾರ ಸಂಕಿರಣ ನಡೆಯಲಿದೆ.

ಕಬಿ ದುನಿಪು-ನಲಿಪು
ಕಬಿ ದುನಿಪು-ನಲಿಪು ಕಾರ್ಯಕ್ರಮದಲ್ಲಿ ಪುತ್ತೂರು ರಾಮಕೃಷ್ಣ ಪ್ರೌಢಶಾಲೆ, ಸುದಾನ ವಿದ್ಯಾಸಂಸ್ಥೆ, ಹಾರಾಡಿ ಹಿ.ಪ್ರಾ. ಶಾಲೆ, ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರು, ಸಾಂದೀಪನಿ ವಿದ್ಯಾಸಂಸ್ಥೆ ನರಿಮೊಗರು, ಸ.ಪ.ಪೂ. ಕಾಲೇಜು ಜಿಡೆಕಲ್ಲು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಸಂತ ಫಿಲೋಮಿನಾ ಕಾಲೇಜು, ವಿದ್ಯಾರಶ್ಮಿ ವಿದ್ಯಾಲಯ ಸವಣೂರು, ರಾಮಕುಂಜೇಶ್ವರ ವಿದ್ಯಾಸಂಸ್ಥೆ ರಾಮಕುಂಜ, ಡಿಂಡಿಮ ಕಲಾವಿದರು ಇಲ್ಲಿನ ವಿದ್ಯಾರ್ಥಿಗಳಿಂದ ತುಳು ಕುಣಿತಗಳು ನಡೆಯಲಿವೆ.

ನಲಿಕೆ
ಪಾಲ್ತಾಡಿ ಮಂಜುನಾಥನಗರ ಶ್ರೀ ಗೌರಿ ಯುವತಿ ಮಂಡಲದಿಂದ ಚೆನ್ನು ನಲಿಕೆ, ಸರ್ವೆ ಷಣ್ಮುಖ ಯುವಕ ಮಂಡಲದಿಂದ ದುಡಿ ನಲಿಕೆ, ಕರ್ನಾಟಕ ಇಸ್ಲಾಮಿಕ್‌ ಅಕಾಡೆಮಿ ಕುಂಬ್ರ ಇಲ್ಲಿನ ವಿದ್ಯಾರ್ಥಿಗಳಿಂದ ತುಳು ದಪ್ಪು, ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದಿಂದ ಕನ್ಯಾಪು ನಲಿಕೆ, ಸವಣೂರು ಯುವಕ ಮಂಡಲದಿಂದ ಕರಂಗೋಲು ನಲಿಕೆ ಪ್ರದರ್ಶನ ನಡೆಯಲಿದೆ.

ಅಟಿಲ್‌ದ ಅರಗಣೆ
ವಿಶಿಷ್ಟವಾಗಿ ಅನಾವರಣಗೊಳ್ಳಲಿರುವ ತುಳು ಸಮ್ಮೇಳನದಲ್ಲಿ ಊಟೋಪಹಾರವೂ ತುಳುನಾಡ ಶೈಲಿಯಲ್ಲಿ ನಡೆಯಲಿದೆ. ಸಮ್ಮೇಳನದ ದಿನ 2,000 ಜನರಿಗೆ ಉಪಾಹಾರ, ಅಪರಾಹ್ನ 5,000 ಜನರಿಗೆ ಭೋಜನ, ಸಂಜೆಯೂ ಉಪಾಹಾರದ ವ್ಯವಸ್ಥೆ ಇರಲಿದೆ. ತುಳುನಾಡಿನ ಹತ್ತಾರು ಬಗೆಯ ತಿನಿಸುಗಳ ಕೌಂಟರ್‌ಗಳು ಇರಲಿದ್ದು, ಕನಿಷ್ಠ ಬೆಲೆಗೆ ಮಾರಾಟದ ವ್ಯವಸ್ಥೆ ಮಾಡಲಾಗುತ್ತದೆ. ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ತುಳುನಾಡ ಶೈಲಿಯ ಊಟೋಹಾಚಾರ ಭಾರೀ ಆಕರ್ಷಣೆ ಹಾಗೂ ಜನಮನ್ನಣೆ ಗಳಿಸಿತ್ತು. ಅದನ್ನೇ ಮಾದರಿಯಾಗಿಟ್ಟುಕೊಂಡು ಇಲ್ಲೂ ಮಾಡಲಾಗುತ್ತದೆ. ಒಟ್ಟಿನಲ್ಲಿ ತುಳುನಾಡಿನ ಜನರೆಲ್ಲರೂ ತುಳು ಸಾಹಿತ್ಯ ಸಮ್ಮೇಳನದ ಅಪೂರ್ವ ಸನ್ನಿವೇಶವನ್ನು ಎದುರುನೋಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next