ತುಮಕೂರು: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಮಕ್ಕಳು ದೇಶದ ಭವಿಷ್ಯದ ಸಂಪತ್ತು ಅವರಿಗೆ ಉತ್ತಮ ಶಿಕ್ಷಣ, ಸಂಸ್ಕೃತಿ, ನೀಡುವ ಮೂಲಕ ಭವ್ಯ ಭಾರತದ ಪ್ರಜೆಗಳನ್ನಾಗಿ ರೂಪಿಸಬೇಕಾಗಿರುವ ಜವಾಬ್ದಾರಿ ಎಲ್ಲರ ಮೇಲಿದೆ. ಆದರೆ ಅನೇಕ ಕಡು ಬಡ ಕುಟುಂಬಗಳು ಇಂದಿಗೂ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದೇ ಕೆಲಸಕ್ಕೆ ದೂಡುತ್ತಿದ್ದಾರೆ.
ಬಾಲಕಾರ್ಮಿಕ ಪದ್ಧತಿ ಜೀವಂತ: ಸ್ವಾತಂತ್ರ್ಯ ಬಂದು 71 ವರ್ಷ ಕಳೆದರೂ ಬಡತನದ ಬೇಗೆಯಲ್ಲಿರುವ ಅನೇಕ ಪೋಷಕರು ಸರ್ಕಾರದ ಆದೇಶಗಳನ್ನೇ ಗಾಳಿಗೆ ತೂರಿ ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೂಲಿ ಕೆಲಸಕ್ಕೆ ಕಳು ಹಿಸುತ್ತ ಬಾಲ ಕಾರ್ಮಿಕ ಪದ್ಧತಿ ಜೀವಂತವಾಗಿರಿಸಿ ದ್ದಾರೆ. ಜಿಲ್ಲೆಯಲ್ಲಿ ಕಾರ್ಮಿಕರ ಇಲಾಖೆ ಅಧಿಕಾರಿ ಗಳು ಮಕ್ಕಳನ್ನು ವಶಕ್ಕೆ ಪಡೆಯುತ್ತಿರುವುದೇ ಸಾಕ್ಷಿಯಾಗಿದೆ.
ಸೌಲಭ್ಯ ಬಳಸುತ್ತಿಲ್ಲ: ದೇಶದಲ್ಲಿರುವ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರಬೇಕು ಎನ್ನುವ ಹತ್ತು ಹಲವು ಯೋಜನೆ ಗಳ ಮೂಲಕ ಸರ್ಕಾರ ಸರ್ವ ಶಿಕ್ಷಣ ಯೋಜನೆ ಜಾರಿಗೆ ತಂದಿದ್ದರೂ, ಇಂದಿಗೂ ಸಾವಿರಾರು ಮಕ್ಕಳು ಕಾರ್ಖಾನೆ, ಗ್ಯಾರೇಜ್, ಸೈಕಲ್ ಶಾಪ್, ಹೋಟೆಲ್, ಮನೆ, ವಸತಿಗೃಹಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ: ಬಾಲ ಕಾರ್ಮಿಕ ಪದ್ದತಿ ವಾಸ್ತವವಾಗಿಯೂ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಸಂದರ್ಭಅವರಿಂದ ಯಾವುದೇ ರೀತಿ ಯಲ್ಲಿ ಕಾರ್ಮಿಕರಾಗಿ ದುಡಿಸಿಕೊಳ್ಳುವುದು ಕಾನೂನಿ ನಲ್ಲಿ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ 1986 ರಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದಿದೆ. ತಮಿಳುನಾಡಿನ ಶಿವಕಾಶಿ ಬೆಂಕಿಪೊಟ್ಟಣ ಕಾರ್ಖಾನೆ ಯಲ್ಲಿ ದುಡಿಯುತ್ತಿದ್ದ 40 ಮಕ್ಕಳನ್ನು ತುಂಬಿ ಹೋಗು ತ್ತಿದ್ದ ಟ್ರಕ್ ಅಪಘಾತ ದುರ್ಘಟನೆ ಹಿನ್ನೆಲೆಯಲ್ಲಿ 1996ರಲ್ಲಿ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿತ್ತು.
ವಸತಿ ಕೇಂದ್ರ ಸ್ಥಾಪನೆ: ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಲು ಜಿಲ್ಲಾಮಟ್ಟದ ಅಧಿಕಾರಿಗಳ ಉಸ್ತುವಾರಿ ಯಲ್ಲಿ ಬಾಲ ಕಾರ್ಮಿಕ ಪುನರ್ ವಸತಿ ಕೇಂದ್ರ ಸ್ಥಾಪನೆ ಮಾಡಿ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳುವುದು ಅಪರಾಧ ವಾಗಿದೆ. ಕೆಲಸಕ್ಕೆ ನಿಯೋಜಿಸಿಕೊಂಡರೆ ಮಾಲೀಕನನ್ನು ವಾರಂಟ್ ರಹಿತವಾಗಿ ಬಂಧಿಸಬಹುದಾಗಿದೆ.
● ಚಿ.ನಿ. ಪುರುಷೋತ್ತಮ್