Advertisement

ಮಕ್ಕಳ ಸಹಾಯವಾಣಿ ಸಂಖ್ಯೆ ಪ್ರಚಾರಕ್ಕೆ ಡೀಸಿ ಚಾಲನೆ

03:52 PM Nov 17, 2019 | Suhan S |

ರಾಮನಗರ: ಮಕ್ಕಳ ಸಹಾಯವಾಣಿ (ಸಂಖ್ಯೆ: 1098) ಬಗ್ಗೆ ಮಕ್ಕಳಾದಿಯಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವ ವಾಹನಕ್ಕೆ ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಚಾಲನೆ ನೀಡಿದರು.

Advertisement

ಶನಿವಾರ ಜಿಲ್ಲಾ ಸರ್ಕಾರಿ ಕಚೇರಿಯ ಸಂಕಿರ್ಣದ ಆವರಣದಲ್ಲಿ ಮಕ್ಕಳ ಸಹಾಯ ವಾಣಿ ಬಗೆಗಿನ ಬಿತ್ತಿ ಪತ್ರ ಮತ್ತು ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗಾಗಿಯೇ ಸಹಾಯವಾಣಿಯನ್ನು ಸರ್ಕಾರ ಸ್ಥಾಪಿಸಿದೆ. ಸಹಾಯವಾಣಿ ಸಂಖ್ಯೆ 1098ರ ಇಡೀ ದೇಶದಲ್ಲಿ ಲಭ್ಯವಿದ್ದು, ಉಚಿತ ವಾಗಿದೆ ಪೋಷಣೆ ಮತ್ತು ಸಂರಕ್ಷಣೆಯ ಅವಶ್ಯಕತೆ ಇರುವ ಮಕ್ಕಳು ಈ ಸಂಖ್ಯೆಯ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಯೋಜನೆಯಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿ ಸ್ವಯಂ ಸೇವಾ ಸಂಘಟನೆಗಳ ಮೂಲಕ ಮಕ್ಕಳ ರಕ್ಷಣೆ ಕೆಲಸಗಳಲ್ಲಿಕಾರ್ಯ ನಿರ್ವಹಿಸುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಕಳೆದ ಮಾರ್ಚ್‌ 2016ರಿಂದ ಮಕ್ಕಳಸಹಾಯವಾಣಿಯ ಅಸ್ತಿತ್ವದಲ್ಲಿದೆ ಎಂದರು.

ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ: ಮಕ್ಕಳಸಹಾಯವಾಣಿ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ಕೊಟ್ಟ ಅಧಿಕಾರಿಗಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ನಿರ್ಲಕ್ಷಿಸುತ್ತಿರುವ ಮಾಹಿತಿ ದೊರೆತರೆ ಹಾಗೂ ಮನೆಯಿಂದ ಓಡಿ ಹೋದ ಮಕ್ಕಳ ಬಗ್ಗೆ, ವೈದ್ಯಕೀಯ ಸೇವೆ ಅವಶ್ಯಕತೆ ಇರುವ ಮಕ್ಕಳ ಬಗ್ಗೆ , ಮಕ್ಕಳಿಗೆ ಆಶ್ರಯ ಬೇಕಾದಲ್ಲಿ ಸಾರ್ವಜನಿಕರು ಸಹ ಇದೇ ಸಂಖ್ಯೆಯ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡ ಬಹುದು ಎಂದು ತಿಳಸಿದರು.

ನವೆಂಬರ್‌ 20ರವರೆಗೆ ಮಕ್ಕಳ ಸಹಾಯ ವಾಣಿಯ ಪ್ರಚಾರ ವಾಹನ ಸಂಚರಿಸಿ ಮಕ್ಕಳ ಹಕ್ಕುಗಳು, ಮಕ್ಕಳ ಮೇಲಿನ ದೌರ್ಜನ್ಯ ತಡೆ ಗಟ್ಟುವ ಕಾನೂನು ಇತ್ಯಾದಿ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು. ಈ ಸಂಬಂಧ ಮಕ್ಕಳ ಸಹಾಯವಾಣಿಯ ಸ್ನೇಹ ಬಂಧು ಸಪ್ತಾಹ-2019ರ ಜಾಗೃತಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

Advertisement

ಈ ವೇಳೆ ಜಿಪಂ ಉಪ ಕಾರ್ಯದರ್ಶಿ ಉಮೇಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ದೇವಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಷಣ್ಮುಗ ಸುಂದರಂ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುರೇಂದ್ರ, ಕಾರ್ಮಿಕ ಕಲ್ಯಾಣಾಧಿಕಾರಿ ಶೇಖರ್‌ ಘಡದ್‌, ಮಕ್ಕಳ ವಿಶೇಷ ಪೊಲೀಸ್‌ ಘಟಕದ ರಮೇಶ್‌ ಹಾಗೂ ಇತರರು ಉಪಸ್ಥಿತರಿದ್ದರು.

ಸಂಚಾರ ಎಲ್ಲೆಲ್ಲಿ: ನವೆಂಬರ್‌ 18ರಂದು ಚನ್ನ ಪಟ್ಟಣ ತಾಲೂಕು, ನವೆಂಬರ್‌ 19ರಂದು ಕನಕಪುರ ತಾಲೂಕು, ನವೆಂಬರ್‌ 20ರಂದು ಮಾಗಡಿ ತಾಲೂಕಿನಲ್ಲಿ ಮಕ್ಕಳ ಸಹಾಯ ವಾಣಿಯ ಪ್ರಚಾರ ವಾಹನವು ಸಂಚರಿಸಲಿದೆಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next