Advertisement

Mangaluru ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಜಾಗೃತಿ

12:39 AM Oct 19, 2023 | Team Udayavani |

ಮಂಗಳೂರು: ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಶಾಲಾ ಕಾಲೇಜುಗಳಲ್ಲಿ, ವಸತಿ ನಿಲಯದಲ್ಲಿ ಜಾಗೃತಿ ಮೂಡಿಸಬೇಕು. ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ತರಬೇತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಸದಸ್ಯ ಡಾ| ತಿಪ್ಪೇಸ್ವಾಮಿ ಕೆ.ಟಿ. ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್‌ ಎ. ಉಪಸ್ಥಿತರಿದ್ದರು.

ಆಯೋಗದ ಸೂಚನೆಗಳು
– ಪ್ರತೀ ಶಾಲೆ, ಪಂಚಾಯತ್‌ ಕಟ್ಟಡ ಹಾಗೂ ಬಸ್‌ ನಿಲ್ದಾಣಗಳ ಗೋಡೆಯಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು 112ನ್ನು ಕಡ್ಡಾಯವಾಗಿ ಶಾಶ್ವತ ಬರಹದಲ್ಲಿಯೇ ಬರೆಯಬೇಕು.
– ಶಾಲೆ, ವಸತಿ ನಿಲಯಗಳ ಕಟ್ಟಡದ ಮೇಲೆ ವಿದ್ಯುತ್‌ ತಂತಿ ಹಾದು ಹೋಗುವುದು ಅಥವಾ ಶಾಲಾ ವೈದಾನದಲ್ಲಿ ಟ್ರಾನ್ಸ್‌ಫಾರ್ಮರ್‌ ಕಂಬ ಇದ್ದರೆ ಅವುಗಳನ್ನು ತೆರವುಗೊಳಿಸಬೇಕು.
– ಅತೀ ಹೆಚ್ಚು ಮಕ್ಕಳು ಇರುವ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಿ ವಿದ್ಯಾರ್ಥಿಗಳು ಸ್ವತಂತ್ರವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳುವಂತೆ ಪ್ರೇರೇಪಿಸಬೇಕು. ಆರೋಗ್ಯ ಇಲಾಖೆಯವರು ಪ್ರತೀ ಆಸ್ಪತ್ರೆಯಲ್ಲಿ ಹೊರರೋಗಿ ಚೀಟಿಯಲ್ಲಿ ಬಾಲ್ಯವಿವಾಹ ಶಿಕ್ಷರ್ಹ ಅಪರಾಧ ಎಂದು ಮುದ್ರಿಸಿರಬೇಕು.
– ಮಕ್ಕಳನ್ನು ಬಳಸಿ ಭಿûಾಟನೆ ಮಾಡುತ್ತಿರುವ ಪ್ರಕರಣಗಳು ದ.ಕ. ಜಿಲ್ಲೆಯಿಂದ ವರದಿಯಾಗುತ್ತಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು.
-1ರಿಂದ 10ನೇ ತರಗತಿ ವರೆಗಿನ ಟ್ಯೂಷನ್‌ ಸೆಂಟರ್‌ಗಳು ಶಾಲಾ ಶಿಕ್ಷಣ ಇಲಾಖೆಯಲ್ಲಿ ಹಾಗೂ ಪಿಯುಸಿ ಟ್ಯೂಷನ್‌ ಕೇಂದ್ರಗಳು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನೋಂದಾಯಿಸಿರಬೇಕು.

ಮಕ್ಕಳ ಹಕ್ಕುಗಳ ರಕ್ಷಣೆ
ಗ್ರಾ.ಪಂ. ಜವಾಬ್ದಾರಿ
ಹಲವು ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲೇ ವಿವಾಹ ಮಾಡಲಾಗುತ್ತಿದೆ. ಪಾಲಕರ ಇಂತಹ ತಪ್ಪು ನಿರ್ಧಾರಗಳು ಮಕ್ಕಳ ಭವಿಷ್ಯಕ್ಕೆ ಪೂರ್ಣ ವಿರಾಮ ಹಾಕುತ್ತವೆ. ಇದನ್ನು ತಡೆಗಟ್ಟುವ ದೊಡ್ಡ ಜವಾಬ್ದಾರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳದ್ದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಸದಸ್ಯ ಡಾ| ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.

ದ.ಕ. ಜಿ.ಪಂ.ನಲ್ಲಿ ಮಂಗಳವಾರ ತಾ.ಪಂ.ಗಳ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಬಾಲ್ಯದಲ್ಲಿ ಮಕ್ಕಳು ತಮ್ಮ ಹಕ್ಕುಗಳ ಕುರಿತ ಜ್ಞಾನದಿಂದ ವಂಚಿತರಾದರೆ ಭವಿಷ್ಯದಲ್ಲಿ ಅವರಿಗೆ ಸಿಗುವ ಯೋಜನೆಗಳಿಂದಲೂ ವಂಚಿತರಾಗಬೇಕಾಗುತ್ತದೆ. ಮಕ್ಕಳ ಮೇಲೆ ಆಗುವ ದೌರ್ಜನ್ಯ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಆಯೋಗ ಸತತ ಪ್ರಯತ್ನ ನಡೆಸುತ್ತಿದೆ ಎಂದರು.

ಗ್ರಾ.ಪಂ.ಗಳಲ್ಲಿ, ತಾ.ಪಂ.ಗಳಲ್ಲಿ ಅಂಗವಿಕಲರಿಗೆ ಪಿಂಚಣಿ ಸಿಗುವ ಕೆಲಸ ಮತ್ತು ವರ್ಷಕ್ಕೆ ಒಂದು ಸಲ ಅಂಗವಿಕಲರ ಸ್ನೇಹಿ ಸಭೆ ನಡೆಸಬೇಕು ಎಂದು ಸೂಚನೆ ನೀಡಿದರು.

ಇಲಾಖೆಯ ಉಪನಿರ್ದೇಶಕ ಉಸ್ಮಾನ್‌ ಎ., ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕುಮಾರ್‌, ಸಂಧ್ಯಾ, ಬಸವರಾಜ್‌ ಎಸ್‌.ಕೆ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next