Advertisement

ಮಕ್ಕಳ ಆರೋಗ್ಯ ರಕ್ಷಣೆಗೆ ಗಮನ ಕೊಡಿ

01:37 PM Sep 22, 2021 | Team Udayavani |

ದಾವಣಗೆರೆ: ಸೆಪ್ಟೆಂಬರ್‌ ಹಾಗೂಅಕ್ಟೋಬರ್‌ ತಿಂಗಳಲ್ಲಿ ವಾತಾವರಣ ಬದಲಾಗುವುದರಿಂದ ಸಾಮಾನ್ಯವಾಗಿ ವೈರಲ್‌ ಜ್ವರ ಹಾಗೂ ಡೆಂಘೀ ಹೆಚ್ಚಾಗಿ ಹರಡುತ್ತಿದೆ.

Advertisement

ಉಸಿರಾಟದತೊಂದರೆಯಿಂದಾಗಿ ಆಸ್ಪತ್ರೆಗಳಲ್ಲಿಮಕ್ಕಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ.ವೈದ್ಯರು ಹಾಗೂ ಪೋಷಕರು ಮಕ್ಕಳಬಗೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ಹೇಳಿದರು.

ಮಂಗಳವಾರ ಜಿಲ್ಲಾ ಚಿಗಟೇರಿಆಸ್ಪತ್ರೆ, ಮಹಿಳಾ ಮತ್ತು ಮಕ್ಕಳಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದನಂತರ ಸುದ್ದಿಗಾರರೊಂದಿಗೆ ಅವರುಮಾತನಾಡಿದರು. ಸೆಪ್ಟಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ವಾತಾವರಣ ಬದಲಾಗುವುದರಿಂದ ಮಕ್ಕಳಲ್ಲಿ ವೈರಲ್‌ಜ್ವರ ಬರುವುದು ಸಹಜ ಎಂದರು.

ಮಕ್ಕಳ ಆಸ್ಪತ್ರೆಯಲ್ಲಿ 65 ಬೆಡ್‌,12 ಪಿಐಸಿಯು ಬೆಡ್‌ ಇದೆ. 40 ಬೆಡ್‌ಭರ್ತಿ ಆಗಿದ್ದು, ಉಳಿದ 25 ಬೆಡ್‌ಖಾಲಿ ಇವೆ. ವೈರಲ್‌ ಜ್ವರ 5 ದಿನದೊಳಗೆಹಾಗೂ ಡೆಂಘೀ ಲೈಕ್‌ ಇಲ್‌ನೆಸ್‌10 ದಿನದೊಳಗೆ ಕಡಿಮೆ ಆಗುತ್ತದೆ.ಜಿಲ್ಲಾಸ್ಪತ್ರೆಯಲ್ಲಿ 40 ಮಕ್ಕಳು ವೈರಲ್‌ಜ್ವರದಿಂದ ದಾಖಲಾಗಿದ್ದಾರೆ.

7 ಮಕ್ಕಳುಶಂಕಿತ ಡೆಂಘೀನಿಂದ ಬಳಲುತ್ತಿದ್ದಾರೆ.ರ್ಯಾಪಿಡ್‌ ಟೆಸ್ಟ್‌ ಮಾಡಿಸಿದ್ದು, ಡೆಂಘೀಸಂಬಂಧಿತ ಎಲಿಸಾ ಟೆಸ್ಟ್‌ ಮಾಡಬೇಕಿದೆಎಂದು ತಿಳಿಸಿದರು.ಬಾಪೂಜಿ ಆಸ್ಪತ್ರೆಯಲ್ಲಿ 21 ಮಕ್ಕಳುವೈರಲ್‌ ಜ್ವರದಿಂದ ದಾಖಲಾಗಿದ್ದಾರೆ.10 ಮಕ್ಕಳು ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದಾರೆ.

Advertisement

ಎಸ್‌.ಎಸ್‌. ಹೈಟೆಕ್‌ಆಸ್ಪತ್ರೆಯಲ್ಲಿ 110 ಮಕ್ಕಳು ವೈರಲ್‌ಜ್ವರದಿಂದ ದಾಖಲಾಗಿದ್ದಾರೆ. 28 ಮಕ್ಕಳುಶಂಕಿತ ಡೆಂಘೀ ಜ್ವರದಿಂದ ಬಳಲುತಿದ್ದಾರೆ.ಚಿಕಿತ್ಸೆಗೆ ಯಾವುದೇ ತೊಂದರೆ ಇಲ್ಲ.ಕೊರೊನಾದ ಮೂರನೇ ಅಲೆ ಮಕ್ಕಳಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಹೆಚ್ಚಿದೆ ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ.ಅಗತ್ಯ ಹಾಸಿಗೆ, ವೆಂಟಿಲೆಟರ್ಸ್‌,ಪಾಟ್ಸ್‌, ಮಾನಿಟರ್ಸ್‌ ಸೇರಿದಂತೆಮಾನವ ಸಂಪನ್ಮೂಲಗಳನ್ನು ಸಿದ್ಧತೆಮಾಡಿಕೊಂಡಿದ್ದು, ಅವರಿಗೆ ಬೇಕಾದಎಲ್ಲಾ ತರಬೇತಿಗಳನ್ನು ನೀಡಲಾಗಿದೆ.

ಅನೇಕ ಜಾಗೃತಿ ಕಾರ್ಯಕ್ರಮಗಳನ್ನುರೂಪಿಸಲಾಗುತ್ತಿದೆ. ಬಾಪೂಜಿ ಕಾಲೇಜಿನಅಂತಿಮ ವರ್ಷದ ವಿದ್ಯಾರ್ಥಿಗಳನ್ನುಬಳಸಿಕೊಳ್ಳುತ್ತಿದ್ದೇವೆ. ಜಿಲ್ಲಾ ಚಿಗಟೇರಿಆಸ್ಪತ್ರೆಯಲ್ಲಿ ಮಕ್ಕಳಿಗಾಗಿಯೇವಾರ್ಡ್‌ ನಂ 65 ಹಾಗೂ 66ಮೀಸಲಿಡಲಾಗಿದೆ. ಮಾನಿಟರ್‌ಸ್ಟ್ಯಾಂಡ್‌, ಮಲ್ಟಿಪ್ಯಾರಾ ಮಾನಿಟರ್‌,ಐಸಿಯು ಬೆಡ್‌, ವೆಂಟಿಲೆಟರ್ ಗಳನ್ನುಸೆ.29 ರೊಳಗಾಗಿ, ಆಕ್ಸಿಜನ್‌, ಐಸಿಯುಬೆಡ್‌ಗಳನ್ನು ಶನಿವಾರದೊಳಗಾಗಿತರಿಸಬೇಕು. ಇಲ್ಲದಿದ್ದರೆ ಗುತ್ತಿಗೆರದ್ದುಪಡಿಸಲಾಗುವುದು ಎಂದುಸಂಬಂಧಿತರಿಗೆ ಎಚ್ಚರಿಸಿದರು.ಜಿಲ್ಲಾಸ್ಪತ್ರೆಯಲ್ಲಿ 30-40 ಅಡಿಸ್ಥಳಾವಕಾಶದಲ್ಲಿ ಹೊಸದಾಗಿ ಎಂಆರ್‌ಐ ಸ್ಕ್ಯಾನಿಂಗ್‌ ಕೇಂದ್ರ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ.

ಎಂಬಿಬಿಎಸ್‌ ಅಂತಿಮ ವರ್ಷದವಿದ್ಯಾರ್ಥಿಗಳಿಗೆ ಮಕ್ಕಳ ಚಿಕಿತ್ಸೆ ಕುರಿತಂತೆತರಬೇತಿ ನೀಡಲು ಕ್ರಮ ವಹಿಸಲಾಗಿದೆಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next