ಧಾರವಾಡ: ಕರ್ನಾ ಟಕ ಬಾಲವಿಕಾಸ ಅಕಾಡೆಮಿಯು 2019-20, 2020-21, 2021- 22ನೇ ಸಾಲಿನ ಎಲ್ಲ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅಕಾಡೆಮಿಯ ಗೌರವ ಪ್ರಶಸ್ತಿ, ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ, ಬಾಲಗೌರವ ಪ್ರಶಸ್ತಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಾಲಮಂದಿರಗಳ ಅಭಿರಕ್ಷಣೆಯಲ್ಲಿರುವ ಮಕ್ಕಳಲ್ಲಿ ಹುದುಗಿರುವ ವಿಶೇಷ ಪ್ರತಿಭೆ ಗುರುತಿಸಿ ವಿಶೇಷ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾ. 27ರಂದು ಪೂರ್ವಾಹ್ನ 10.30ಕ್ಕೆ ಧಾರವಾಡದ ಲಕ್ಕಮ್ಮನ ಹಳ್ಳಿಯಲ್ಲಿ ರುವ ಅಕಾಡೆಮಿ ಸಭಾಂಗಣದಲ್ಲಿ ನಡೆಯಲಿದೆ.
ಅಕಾಡೆಮಿ ಗೌರವ ಪ್ರಶಸ್ತಿ
ಉಡುಪಿ ಪಾಂಬೂರಿನ ಮಾನಸಿಕ ವಿಶೇಷ ಮಕ್ಕಳ ಶಾಲೆ (ಮಕ್ಕಳ ವಿಕಲಚೇತನ), ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ, ಐ.ಕೆ. ಬೋಳುವಾರು ದ.ಕನ್ನಡ (ಮಕ್ಕಳ ರಂಗಭೂಮಿ) ಸಹಿತ ಹಲವಾರು ಸಂಘ – ಸಂಸ್ಥೆಗಳು ಹಾಗೂ ಸಾಧಕರಿಗೆ ಮೂರು ವರ್ಷಗಳ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ.
ಅಕಾಡೆಮಿ ಮಕ್ಕಳ
ಚಂದಿರ ಪುಸ್ತಕ ಪ್ರಶಸ್ತಿ
ವಸುಮತಿ ಉಡುಪ (ಮಕ್ಕಳ ಕಥೆಗಳು-ಅಭಿಜಿತನ ಕಥೆಗಳು) ಸಹಿತ ಹಲವಾರು ಸಾಹಿತಿಗಳ ಕೃತಿಗಳಿಗೆ ಮೂರು ವರ್ಷಗಳ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ ಘೋಷಿಸಲಾಗಿದೆ.
ವಿಶೇಷ ಆಯ್ಕೆ
2 ಉಳವಂಗಡ ಕಾವೇರಿ ಉದಯ (ಮಕ್ಕಳ ಕಾದಂಬರಿ-ಚಿಗುರೆಲೆಗಳು) ಸಹಿತ ಮೂರು ಮಂದಿ ಸಾಧಕರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Related Articles
ಅಕಾಡೆಮಿ ಬಾಲಗೌರವ ಪ್ರಶಸ್ತಿ
ಅನ್ವಿತ್‌ಕುಮಾರ ಸಿ.ವಿ. ಕೊಡಗು (ಸಂಗೀತ), ಶ್ರಾವ್ಯಾ ಬಿ.ಎಸ್. ಮಂಗಳೂರು (ನೃತ್ಯ), ಪ್ರತಿಷ್ಠಾ ಶೇಟ್ ಉಡುಪಿ (ಚಿತ್ರಕಲೆ), ತನುಶ್ರೀ ಉಡುಪಿ (ಬಹುಮುಖ), ಹರ್ಷಿತ್ ಎ.ಕೆ. ಕೊಡಗು (ವಿಜ್ಞಾನ), ಅಮೋಘ ಹೆಗಡೆ ಮೂಡುಬಿದರೆ (ಬರವಣಿಗೆ) ಸಹಿತ ಹಲವರಿಗೆ ಮೂರು ವರ್ಷಗಳ ಬಾಲಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ.
ರವಿ ದಕ್ಷಿಣ ಕನ್ನಡ (ಚಿತ್ರಕಲೆ), ವಿದ್ಯಾ ಕೊಡಗು (ಕಲಾಕ್ಷೇತ್ರ) ಸಹಿತ ಹಲವರಿಗೆ ವಿಶೇಷ ಗೌರವ ಪ್ರಶಸ್ತಿ (ಬಾಲಮಂದಿರಗಳ ಮಕ್ಕಳು) ಪ್ರಕಟಿಸಲಾಗಿದೆ.