Advertisement
ಆಡಳಿತಾತ್ಮಕ ಕೆಲಸಗಳನ್ನು ಪರಿಶೀಲಿ ಸುವ ಉದ್ದೇಶದಿಂದ ಆ. 28ರಂದು ಎಲ್ಲ ಶಿಶು ವಿಹಾರಗಳನ್ನು ಮುಚ್ಚಲಾ ಗುವುದು; ಆ. 31ರಿಂದ ಶಾಶ್ವತ ವಾಗಿ ಮುಚ್ಚಲಾಗುವುದು ಎಂದು ಕೇಂದ್ರಗಳ ನಿರ್ವಹಣ ಸಂಸ್ಥೆಯು ಸುಳ್ಯದ ಶಿಶುಪಾಲನ ಕೇಂದ್ರಕ್ಕೆ ಪತ್ರದ ಮೂಲಕ ಮಾಹಿತಿ ನೀಡಿದೆ. ಉಡುಪಿಯ ಕೇಂದ್ರಗಳಿಗೆ ಯಾವುದೇ ಸೂಚನೆ ಈ ತನಕ ಬಂದಿಲ್ಲ ಎನ್ನಲಾಗುತ್ತಿದೆ.
ನಿರ್ಮಾಣ ಕಾರ್ಮಿಕರ ಮಕ್ಕಳಿಗಾಗಿ 2022ರ ಜೂನ್ 10ರಂದು ಸುಳ್ಯ ಸೇರಿದಂತೆ ರಾಜ್ಯದ ವಿವಿಧೆಡೆ ಶಿಶುಪಾಲನ ಕೇಂದ್ರಗಳನ್ನು ಆರಂಭಿಸಲಾಗಿತ್ತು; 5 ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತಿದ್ದವು. ಶಿಕ್ಷಕಿ ಹಾಗೂ ಸಹಾಯಕಿ ಅಲ್ಲಿದ್ದು, ಕಾರ್ಮಿಕರ ಮಕ್ಕಳನ್ನು ಅಂಗನವಾಡಿಯ ಮಾದರಿಯಲ್ಲೇ ಇಲ್ಲಿ ಪಾಲನೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ ಇಂತಹ 143 ಕೇಂದ್ರಗಳಿವೆ. ಕಾರ್ಮಿಕರ ಅಸಮಾಧಾನ
ಕೇಂದ್ರಗಳ ದಿಢೀರ್ ಸ್ಥಗಿತ ತೀರ್ಮಾನವು ಕಾರ್ಮಿಕರಲ್ಲಿ ಗೊಂದಲ ವನ್ನುಂಟು ಮಾಡಿದ್ದು, “ಎಳೆಯ ಮಕ್ಕಳನ್ನು ಏಕಾಏಕಿ ಬೇರೆ ಕಡೆಗೆ ಕಳುಹಿಸ ಬೇಕೆಂದರೆ ಹೇಗೆ ಸಾಧ್ಯ?’ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಕೇಂದ್ರಗಳ ಸಿಬಂದಿಯೂ ಸರಕಾರದ ನಿರ್ಧಾರದಿಂದ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
Related Articles
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿಗಳಿರುವ ಕಾರಣ ಶಿಶುಪಾಲನ ಕೇಂದ್ರಗಳನ್ನು ಮುಚ್ಚುತ್ತಿದ್ದೇವೆ ಎಂದು ಕಾರ್ಮಿಕ ಇಲಾಖೆ ಸಮಜಾಯಿಶಿ ನೀಡಿದರೂ ಆರ್ಥಿಕ ಸಮಸ್ಯೆ ನೈಜ ಕಾರಣ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಶಿಶುಪಾಲನ ಕೇಂದ್ರಗಳನ್ನು ನಿರ್ವಹಿಸುವ ಸಂಸ್ಥೆಗಳಿಗೆ 8 ತಿಂಗಳಿನಿಂದ ಬಿಲ್ ಪಾವತಿಯಾಗಿಲ್ಲ. ಕೆಲವು ಕಡೆ ವರ್ಷದಿಂದ ಬಿಲ್ ಪಾವತಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಈಗ ಎಲ್ಲೆಡೆ ಅಂಗನವಾಡಿಗಳಿವೆ. ಆದ್ದರಿಂದ ರಾಜ್ಯ ದಲ್ಲಿನ ಶಿಶುಪಾಲನ ಕೇಂದ್ರಗಳ ಸ್ಥಗಿತಕ್ಕೆ ನಿರ್ಧರಿಸಲಾಗಿದೆ. ಕಾರ್ಮಿಕರ ಮಕ್ಕಳ ಸಂಖ್ಯೆ ಹೆಚ್ಚಿದ್ದು ಅಂಗನವಾಡಿಯ ಬೇಡಿಕೆಯಿದ್ದಲ್ಲಿ, ಅಂತಹ ಕಡೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ಕೇಂದ್ರ ಆರಂಭಿಸುತ್ತೇವೆ.– ಭಾರತಿ ಡಿ. ಸಿಇಒ ಮತ್ತು ಕಾರ್ಯದರ್ಶಿ, ಕರ್ನಾಟಕ ಕಟ್ಟಡ, ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ – ದಯಾನಂದ ಕಲ್ನಾರ್