Advertisement
ಮುಖ್ಯವಾಗಿ ಕೇಂದ್ರ ಬಸ್ ನಿಲ್ದಾಣ, ಗಾಂಧಿ ವೃತ್ತ, ಸಿಬಿಎಸ್, ಇಂದಿರಾ ಗಾಂಧಿ ವೃತ್ತ ಹಾಗೂ ಸಿಬಿಎಸ್ ಗಂಜ್ ಪ್ರದೇಶ,ಕಿಷ್ಕಿಂದಾ ಅಂಜನಾದ್ರಿ ಬೆಟ್ಟ, ಪಂಪಾಸರೋವರ, ಆದಿಶಕ್ತಿ ದೇಗುಲದ ಬಳಿ ಪ್ರತಿ ದಿನ ಹಲವು ಬಾಲಕ ಬಾಲಕಿಯರು ವಯೋವೃದ್ದರು ದೇಶ ವಿದೇಶಗಳಿಂದ ಆಗಮಿಸುವ ಜನರಿಂದ ಮತ್ತು ಗಂಗಾವತಿ ನಗರದಲ್ಲಿ ಪ್ರತಿ ದಿನ ಬೆಳ್ಳಗೆ ಕನಕಗಿರಿ, ಕಾರಟಗಿ, ತಾವರಗೇರಾ, ಕಂಪ್ಲಿ, ಶ್ರೀ ರಾಮನಗರ ಸೇರಿ ಹಲವು ಊರುಗಳಿಂದ ಭಿಕ್ಷೆ ಬೇಡಲು ಮಕ್ಕಳು ಆಗಮಿಸುತ್ತಾರೆ.
ಸರಕಾರ ಭೀಕ್ಷೆ ಬೇಡುವುದನ್ನು ನಿಷೇಧ ಮಾಡಿದರೂ ತಾಲೂಕು ಮಟ್ಟದ ಅಧಿಕಾರಿಗಳು ಭಿಕ್ಷೆ ಬೇಡುವ ಪಿಡುಗನ್ನು ನಿವಾರಿಸುವಲ್ಲಿ ವಿಫಲರಾಗಿದ್ದಾರೆ. ಬಾಲ ಭಿಕ್ಷುಕರನ್ನು ಶಾಲೆಗೆ ಕಳುಹಿಸಲು ಸರಕಾರ ಶಿಕ್ಷಣ ಇಲಾಖೆ ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖೆ ಮತ್ತು ನಗರಸಭೆ ನೇತೃತ್ವದಲ್ಲಿ ಹಲವು ಯೋಜನೆ ಜಾರಿ ಮಾಡಿದರೂ ಅವುಗಳು ಅನುಷ್ಠಾನಕ್ಕೆ ಬರುತ್ತಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.