Advertisement

ಬಾಲ ಲೇಖಕ ಆಸ್ಟಿನ್‌ ಅಜಿತ್‌ ಕೃತಿ ಬಿಡುಗಡೆ

06:27 PM May 05, 2022 | Team Udayavani |

ಬೆಂಗಳೂರು: ವಿಶ್ವದ ಅತಿ ಕಿರಿಯ ಲೇಖಕ (ಫಿಕ್ಷನ್‌ ವಿಭಾಗ) ಎಂಬ ಹೆಗ್ಗಳಿಕೆಗೆ ಬೆಂಗಳೂರು ಮೂಲದ ಆಸ್ಟಿನ್‌ ಅಜಿತ್‌ ಪಾತ್ರವಾಗಿದ್ದಾರೆ. ಎಂಟು ವರ್ಷ ವಯಸ್ಸಿನ ಬಾಲಕ ಆಸ್ಟಿನ್‌ ಅಜಿತ್‌ ರಚಿಸಿರುವ “ಗ್ರಾಂಡ್ಮ ಆ್ಯಂಡ್‌ ಆಸ್ಟಿನ್ಸ್‌ ಪ್ಲಾಂಟ್‌ ಕಿಂಗ್ಡಮ್’ (ಅಜ್ಜಿ ಮತ್ತು ಆಸ್ಟಿನ್‌ ಸಸ್ಯ ಸಾಮ್ರಾಜ್ಯ) ಎಂಬ 64 ಪುಟಗಳ ಕಾಲ್ಪನಿಕ ಕಥೆಯ ಇಂಗ್ಲಿಷ್‌ ಕೃತಿ ಕಾರ್ಮಿಕರ ದಿನಾಚರಣೆಯಂದು ಬಿಡುಗಡೆಯಾಯಿತು.

Advertisement

ಇದೇ ವೇಳೆ ಮಾತನಾಡಿದ ಆಸ್ಟಿನ್‌ ಅಜಿತ್‌, ಕಳೆದ ವರ್ಷ ಬೇಸಿಗೆ ಸಮಯದಲ್ಲಿ ಅಜ್ಜಿಯ ಮನೆಗೆ ಹೋದಾಗ, ದುರಾದೃಷ್ಟವಶಾತ್‌ ಕೊರೊನಾದಿಂದ ಅಲ್ಲಿಯೇ ಉಳಿದುಕೊಳ್ಳಬೇಕಾಯಿತು. ಆಗ ಆ ಸಮಯವನ್ನು ಸದುಪಯೋಗಪಡಿಸಿಕೊಂಡು ಕೃಷಿ, ಪ್ರಕೃತಿ ಮತ್ತು ಸಸ್ಯ ಸಾಮ್ರಾಜ್ಯದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಅದೆಲ್ಲದರ ಪ್ರೇರಣೆಯಿಂದ ಈ ಪುಸ್ತಕ ಬರೆಯಲು ಸಾಧ್ಯವಾಯಿತು ಎಂದರು.

ಈ ಹಿಂದೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಅಭಿಯುಜಿತ ಗುಪ್ತಾ ನಾನ್‌ ಫಿಕ್ಷನ್‌ ವಿಭಾಗದಲ್ಲಿ ಕಥೆಯನ್ನು ಬರೆದು ದಾಖಲೆ ನಿರ್ಮಿಸಿದ್ದರು. ಈಗ ಆಸ್ಟಿನ್‌ ಅಜಿತ್‌ ಫಿಕ್ಷನ್‌ (ಕಾಲ್ಪನಿಕ) ವಿಭಾಗದಲ್ಲಿ ಬರೆದಿದ್ದು, ವಿಶ್ವದ ಮೊದಲ ಕಿರಿಯ ಲೇಖಕನೆಂದು ಪ್ರಶಂಸೆಗೆ ಪಾತ್ರವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next