Advertisement

ಲಾರಿ – ಓಮ್ನಿ ಅಪಘಾತ: ಮಗು ಸೇರಿದಂತೆ 6 ಮಂದಿ ದಾರುಣ ಅಂತ್ಯ

11:42 AM Mar 19, 2023 | Team Udayavani |

ಚೆನ್ನೈ: ಲಾರಿ ಹಾಗೂ ಓಮ್ನಿ ನಡುವೆ ಸಂಭವಿಸಿದೆ ಭೀಕರ ಅಪಘಾತದಲ್ಲಿ ಒಂದು ಮಗು ಸೇರಿದಂತೆ 6 ಮಂದಿ ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ತಿರುವಾಸಿ ಬಳಿಯ ತಿರುಚ್ಚಿ-ಸೇಲಂನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ( 19 ರಂದು ) ಮುಂಜಾನೆ ನಡೆದಿದೆ.

Advertisement

ಓಮ್ನಿ ಕಾರಿನಲ್ಲಿ ಬರುತ್ತಿದ್ದ ವೇಳೆ ತಿರುಚ್ಚಿ-ಸೇಲಂನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಲಾರಿಯೊಂದಕ್ಕೆ  ಢಿಕ್ಕಿ ಹೊಡೆದಿದೆ. ಪರಿಣಾಮ ಘಟನೆಯಲ್ಲಿ ಒಂದು ಪುಟ್ಟ ಮಗು ಸೇರಿದಂತೆ ನಾಲ್ವರು ಪುರುಷರು ಮತ್ತು ಒಬ್ಬ ಮಹಿಳೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ನೋಟಿಸ್ ಬಳಿಕ ಇದೀಗ ರಾಹುಲ್ ಗಾಂಧಿ ನಿವಾಸಕ್ಕೆ ಪೊಲೀಸರ ಲಗ್ಗೆ

ಕಾರಿನಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿರುಚ್ಚಿಯ ಎಸ್ಪಿ ಸುಜಿತ್ ಕುಮಾರ್ ಹೇಳಿದ್ದಾರೆ.

ಮೃತರ ಗುರುತು ಪರಿಚಯ ಇನ್ನಷ್ಟೇ ಆಗಬೇಕಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next