Advertisement

ದೋಟಿಹಾಳದಲ್ಲಿ ಭೀತಿ ಹುಟ್ಟಿಸಿದ ಚಿಕೂನ್‌ಗುನ್ಯಾ-ಡೆಂಘೀ

12:51 PM Nov 17, 2019 | Suhan S |

ದೋಟಿಹಾಳ: ಗ್ರಾಮದಲ್ಲಿ ಒಂದು ತಿಂಗಳ ಹಿಂದೇ ಗ್ರಾಮದಲ್ಲಿ ಚಿಕೂನ್‌ಗುನ್ಯಾ ಕಂಡುಬಂದಿದ್ದು, ರೋಗಿಗಳ ಸಂಖ್ಯೆ ಉಲ್ಬಣಗೊಂಡಿದೆ. ಇದರೊಂದಿಗೆ ಮೂರ್‍ನಾಲ್ಕು ಜನರಲ್ಲಿ ಶಂಕಿತ ಡೆಂಘೀ ಜ್ವರ ಕಂಡುಬಂದಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಒಂದು ವಾರದಿಂದ ಗ್ರಾಮದಲ್ಲಿ ಸುಮಾರು ಮೂರ್‍ನಾಲ್ಕು ಜನರಿಗೆ ಶಂಕಿತ ಡೆಂಘೀ ಜ್ವರ ಇರುವುದು ಕಂಡುಬಂದಿದೆ.

Advertisement

ಸದ್ಯ ಚಿಕೂನ್‌ ಗುನ್ಯಾ ರೋಗದಿಂದ ನರಳುತ್ತಿರುವ 50ಕ್ಕೂ ಹೆಚ್ಚು ಜನರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿತ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ನಿಲ್ಲಲ್ಲು ಜಾಗವಿಲ್ಲದಷ್ಟು ರೋಗಿಗಳ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಚಿಕಿತ್ಸೆಗಾಗಿ ಇಲಕಲ್ಲ, ಕುಷ್ಟಗಿ, ಬಾಗಲಕೋಟೆ ನಗರಗಳ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ಸಾಂಕ್ರಾಮಿಕ ರೋಗಗಳಿಂದ ನರಳುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು..

ಶಂಕಿತ ಡೆಂಘೀ ಜ್ವರ: ಗ್ರಾಮದ ನಾಗರಾಜ ತಿಮ್ಮಪ್ಪ ಹನಮಕಟ್ಟಿ, ಕಾರ್ತಿಕ ನಾಗೇಶ ಪತ್ತಾರ ಎಂಬ ಬಾಲಕರಿಗೆ ಶಂಕಿತ ಡೆಂಘೀ ಇರುವ ಕುರಿತು ಕೊಪ್ಪಳದ ಕೆಎಸ್‌ ಆಸ್ಪತ್ರೆಯಲ್ಲಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದರಿಂದಲೇ ಚಿಕೂನ್‌ಗುನ್ಯಾ ಹರಡಲು ಕಾರಣವಾಗಿದೆ. ಗ್ರಾಪಂ ಸ್ವತ್ಛತಾ ಕಾರ್ಯದಲ್ಲಿ ನಿರ್ಲಕ್ಷ ವಹಿಸಿದೆ. ಇಷ್ಟೊಂದು ಪ್ರಮಾಣದಲ್ಲಿ ಚಿಕೂನ್‌ಗುನ್ಯಾ ಹರಡಿದರೂ 2-3 ಬಾರಿ ಮಾತ್ರ ಫಾಗಿಂಗ್‌ ಮಾಡಿದ್ದಾರೆ. ಆದರೆ ಇದುವರೆಗೂ ಬ್ಲಿಚಿಂಗ್‌ ಪೌಡರ್‌ ಸಿಂಪರಣೆಯನ್ನೂ ಮಾಡಿಲ್ಲ ಎಂಬುದು ಗ್ರಾಮಸ್ಥರು ಆರೋಪಿಸುತ್ತಾರೆ.

ಆರೋಗ್ಯ ಸಲಹೆ: ನೈರ್ಮಲ್ಯ ಕಾಪಾಡುವುದರಿಂದ ಕಾಯಿಲೆ ನಿಯಂತ್ರಿಸಬಹುದು. ಮನೆಯ ಸುತ್ತಮುತ್ತ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಆಗಾಗ ಸ್ವತ್ಛತಾ ಕಾರ್ಯ ಕೈಗೊಳ್ಳಬೇಕು. ಜ್ವರ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆ ಕಂಡುಬಂದರೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು ಎಂದು ಡಾ| ನೇತ್ರಾವತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next