Advertisement

ತರೀಕೆರೆ ಮಹಿಳೆಯ ಗಂಟಲು ದ್ರವ ಮರು ಪರೀಕ್ಷೆ : ರವಿ

06:54 PM May 28, 2020 | Naveen |

ಚಿಕ್ಕಮಗಳೂರು: ಕೋವಿಡ್ ಸೋಂಕಿತ ತರೀಕೆರೆ ಮಹಿಳೆಯ ಗಂಟಲು ದ್ರವ ಹಾಗೂ ರಕ್ತದ ಮಾದರಿ ಮರು ಪರೀಕ್ಷೆಗೆ ಬೆಂಗಳೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಲ್ಯಾಬ್‌ಗ ಕಳಿಸಲಾಗಿದ್ದು, ಸದ್ಯದಲ್ಲೇ ವರದಿ ಬರಲಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಿಗೆರೆ ಸರ್ಕಾರಿ ವೈದ್ಯರಿಗೆ ಸೋಂಕು ಹೇಗೆ ತಗುಲಿದೆ ಎಂಬ ಮಾಹಿತಿ ಇರಲಿಲ್ಲ, ಪ್ರಾಥಮಿಕ ಸಂಪರ್ಕದಲ್ಲೂ ಯಾರಿಗೂ ಸೋಂಕು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಖಾತ್ರಿಪಡಿಸಿಕೊಳ್ಳಲು ಮರುಪರೀಕ್ಷೆಗೆ ಒಳಪಡಿಸಲಾಗಿತ್ತು. ಮರುಪರೀಕ್ಷೆಯಲ್ಲಿ ನೆಗೆಟಿವ್‌ ಕಂಡು ಬಂದಿದೆ. ತರೀಕೆರೆ ಮಹಿಳೆಗೆ ಸೋಂಕು ಹೇಗೆ ಹರಡಿದೆ ಎಂಬುದರ ಮೂಲ ಸಿಕ್ಕಿಲ್ಲ. ಪ್ರಾಥಮಿಕ ಸಂಪರ್ಕ ಹಾಗೂ ಕುಟುಂಬದವರನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾರಲ್ಲೂ ಸೋಂಕು ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಖಾತ್ರಿಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಮರುಪರೀಕ್ಷೆಗೆ ಕಳಿಸಲಾಗಿದೆ. ಇಂದು ಅಥವಾ ನಾಳೆ ವರದಿ ಬರಲಿದೆ ಎಂದರು.

ತರೀಕೆರೆ ಮಹಿಳೆಯ ವರದಿ ಬಂದ ನಂತರ ಸ್ಪಷ್ಟತೆ ಸಿಗಲಿದೆ. ಮಹಿಳೆಯ ವರದಿ ನೆಗೆಟಿವ್‌ ಬಂದರೆ ಸ್ಥಳೀಯವಾಗಿ ಯಾವುದೇ ಪ್ರಕರಣ ಇಲ್ಲದಿರುವುದು ದೃಢವಾಗುತ್ತದೆ. ಮುಂಬೈನಿಂದ ಎನ್‌.ಆರ್‌.ಪುರ ಪಟ್ಟಣಕ್ಕೆ ಬಂದರವರಿಗೆ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದರು. ಸದ್ಯದಲ್ಲೇ ನಗರದಲ್ಲಿ 1.75ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ನಿರ್ಮಾಣ ವಾಗಲಿದೆ. ಈಗಾಗಲೇ ಜಿಲ್ಲೆಯಲ್ಲಿರುವ ಪ್ರಯೋಗಾಲಯ 40 ರಿಂದ 45 ಪ್ರಕರಣಗಳ ಪರೀಕ್ಷೆ ಸಾಮರ್ಥ್ಯ ಹೊಂದಿದೆ. ಪ್ರಯೋಗಾಲಯ ಮಂಜೂರಾಗಿದೆ. ಟೆಕ್ನಿಷಿಯನ್‌ಗೆ ತರಬೇತಿ ಕೊಡಬೇಕಾದ ಅವಶ್ಯಕತೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next