Advertisement

ಸಂಗೀತ ಸುಧೆಯಲ್ಲಿ ಮಿಂದೆದ್ದ ಜನ

01:00 PM Mar 02, 2020 | Naveen |

ಚಿಕ್ಕಮಗಳೂರು: ಜಿಲ್ಲಾ ಉತ್ಸವದ ಎರಡನೇ ದಿನವಾದ ಶನಿವಾರ ಖ್ಯಾತ ಗಾಯಕರ ಕಂಠಸಿರಿಯಲ್ಲಿ ಮೂಡಿಬಂದ ಗೀತೆಗಳು ಕಾಫಿನಾಡಿನ ಜನರನ್ನು ಸಂಗೀತ ಸುಧೆಯಲ್ಲಿ ಮುಳುಗಿಸುವಲ್ಲಿ ಯಶಸ್ವಿಯಾಯಿತು.

Advertisement

ನಗರದ ಸುಭಾಷ್‌ ಚಂದ್ರಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿದ್ದ ಸಂಗೀತ ಸಂಭ್ರಮದಲ್ಲಿ ಖ್ಯಾತ ಗಾಯಕರಾದ ಹೇಮಂತ್‌, ಜೋಗಿ ಸುನಿತಾ, ಅಜಯ್‌ ವಾರಿಯರ್‌, ಶಮಿತಾ ಮಲ್ನಾಡ, ರಿಯಾಲಿಟಿ ಶೋ ಖ್ಯಾತಿಯ ಶ್ರೀಹರ್ಷ, ಖಾಸೀಂ ಕಂಠಸಿರಿಯಲ್ಲಿ ಮೂಡಿಬಂದ ಗೀತೆಗಳು ಸಂಗೀತ ಲೋಕವನ್ನೇ ಸೃಷ್ಟಿಸಿದವು.

ಖ್ಯಾತ ಗಾಯಕ ಹೇಮಂತ್‌ ಹಾಡಿದ ಪ್ರೀತ್ಸೆ ಚಿತ್ರದ ಪ್ರೀತ್ಸೆ ಪ್ರೀತ್ಸೆ, ರಿಯಾಲಿಟಿ ಶೋನಲ್ಲಿ ಹೆಸರು ಮಾಡಿರುವ ಖಾಸೀಂ ಧ್ವನಿಯಲ್ಲಿ ಮೂಡಿಬಂದ ಮಂಜುನಾಥ ಚಿತ್ರದ ಮಹಾಪ್ರಾಣ ಲಿಂಗಂ…., ಹೇಮಂತ್‌ ಜೋಗಿ ಸುನೀತ ಧ್ವನಿಯಲ್ಲಿ ಮೂಡಿಬಂದ ಜೀವ ಹೂವಾಗಿದೆ…. ಭಾವ ಜೇನಾಗಿದೆ… ಅಜಯ್‌ ವಾರಿಯರ್‌ ಧ್ವನಿಯಲ್ಲಿ ಮೂಡಿಬಂದ ಚಿಕ್ಕಮಗಳೂರು ಚಿಕ್ಕಮಲ್ಲಿಗೆ ಗೀತೆಗಳು ನೆರೆದಿದ್ದ ಪ್ರೇಕ್ಷಕರನ್ನು ಹುರಿದುಂಬಿಸುವಂತೆ ಮಾಡಿದವು.

ಸಂಗೀತ ಸುಧೆ ಮಧ್ಯದಲ್ಲಿ ಉಡುಪಿ ಜಿಲ್ಲೆಯ ಭಾರ್ಗವಿ ತಂಡದಿಂದ ಮೂಡಿಬಂದ ಭಾವ ಯೋಗ ನೃತ್ಯ, ಹಾಸ್ಯ ಕಲಾವಿದ ಮಿಮಿಕ್ರಿ ದಯಾನಂದ್‌ರವರ ಧ್ವನಿಯಲ್ಲಿ ಮೂಡಿಬಂದ ಖ್ಯಾತನಟರಾದ ಡಾ| ರಾಜ್‌ಕುಮಾರ್‌, ಡಾ| ವಿಷ್ಣುವರ್ಧನ್‌, ಶಂಕರ್‌ನಾಗ್‌ ಅಂಬರೀಶ್‌ರವರ ಸೇರಿದಂತೆ ಅನೇಕರ ಧ್ವನಿಗೆ ಕಾμನಾಡಿನ ಜನತೆಗೆ ರಸದೌತಣ ನೀಡಿದವು.

ಹಾಡು ಕೋಗಿಲೆ ಕಾರ್ಯಕ್ರಮದ ಖ್ಯಾತ ಗಾಯಕಿ ಕಲಾವತಿಯವರ ಏರುಧ್ವನಿಯಲ್ಲಿ ಮೂಡಿಬಂದ ನಾ ಕೋ… ಕೋ… ಕೋಳಿಗೆ ರಂಗ ಗೀತೆಯಂತು ಪ್ರೇಕ್ಷಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಜೋಗಿ ಚಿತ್ರದ ಎಲ್ಲೋ ಜೋಗಪ್ಪ ನಿನ್‌ ಅರಮನೆ……ಪ್ರೇಕ್ಷಕರ ತುಟಿಯಲ್ಲಿ ಮತ್ತೇ ಮತ್ತೇ ಗುನುಗುವಂತೆ ಮಾಡಿತು. ಗಾಯನಕ್ಕೆ ತಕ್ಕಂತೆ ಹಿಮ್ಮೇಳದ ಸಂಗೀತ ವಾದ್ಯಗಳು ಕಾಫಿನಾಡಿನ ಜನರನ್ನು ಕೊನೆಯವರೆಗೂ ಹಿಡಿದಿಡುವಂತೆ ಮಾಡಿತು.

Advertisement

ಖ್ಯಾತ ಚಲನಚಿತ್ರ ನಟರಾದ ಡಾ| ರಾಜ್‌ಕುಮಾರ್‌, ಡಾ| ವಿಷ್ಣುವರ್ಧನ್‌, ಶಂಕರ್‌ನಾಗ್‌, ಶಿವರಾಜ್‌ ಕುಮಾರ್‌, ಕಿಚ್ಚ ಸುದಿಧೀಪ್‌ ಸೇರಿದಂತೆ ಖ್ಯಾತನಾಮರು ಅಭಿನಯಿಸಿದ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ವೇದಿಕೆ ಮೇಲೆ ಕಲಾವಿದರು ಹಾಡುತ್ತಿದ್ದರೇ ಆಸನಗಳಲ್ಲಿ ಕುಳಿತ್ತಿದ್ದ ಪ್ರೇಕ್ಷಕರು ಎದ್ದು ಹೆಜ್ಜೆ ಹಾಕುತ್ತಿದ್ದ ದೃಶ್ಯಗಳು ಸಮಾನ್ಯವಾಗಿತ್ತು.

ಸಂಗೀತ ಸಂಭ್ರಮದಲ್ಲಿ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರು ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಬಾಲಕಲಾವಿದರು ಪ್ರೇಕ್ಷಕರನ್ನು ರಂಜಿಸಿದರು. ಖ್ಯಾತ ನಿರೂಪಕಿ ಅನುಪಮಾ ಅವರ ನಿರೂಪಣೆ ಸಂಗೀತ ಸಂಭ್ರಮ ಕಾರ್ಯಕ್ರಮದ ಆಕರ್ಷಣೀಯ ಕೇಂದ್ರಬಿಂದುವಾಗಿತ್ತು.

ಕೇವಲ ಟಿ.ವಿ ಶೋಗಳಲ್ಲಿ ಮಾತ್ರ ನೋಡುತ್ತಿದ್ದ ಹೇಮಂತ್‌, ಅಜಯ್‌ ವಾರಿಯರ್‌, ಶಮಿತಾ ಮಲ್ನಾಡ್‌, ಜೋಗಿ ಸುನೀತ, ಕಲಾವತಿ, ದಯಾನಂದ, ಶ್ರೀಹರ್ಷ, ಚಿಂತನ್‌ ವಿಕಾಸ್‌, ನಿತಿನ್‌, ಖಾಸೀಂ ಅವರನ್ನು ನೇರವಾಗಿ ನೋಡುವ ಮೂಲಕ ಜನತೆ ಸಂತಸಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next