Advertisement
ಸಾಯಿ ಮಧುವನ ಬಡಾವಣೆಯ ಶ್ರೀಸತ್ಯಸಾಯಿ ಸೇವಾಕ್ಷೇತ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿಬಾಬಾರ 94ನೆಯ ವರ್ದ್ಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ಶ್ರೀರಾಮ ಪಟ್ಟಾಭಿಷೇಕದ ನಂತರ ಮಾತನಾಡಿದ ಅವರು, ಶ್ರೀರಾಮಚಂದ್ರ ಪುರುಷೋತ್ತಮ, ಸದ್ವಿಚಾರಗಳ ಗಣಿ. ಅವನ ಕಥೆ ಮಾಯಣ, ಮಹಾಭಾರತ, ಭಾಗವತ ನಮ್ಮ ಅಸ್ಮಿತೆ. ವಾಲ್ಮೀಕಿ ಮಹರ್ಷಿಯ ರಾಮಾಯಣದ ನಂತರ ಅನೇಕ ಕವಿ, ಸಾಹಿತಿ, ಚಿಂತಕರು ಇದೇ ಕೃತಿಯನ್ನು ತಮ್ಮದೇ ದೃಷ್ಟಿಯಲ್ಲಿ ವಿಶ್ಲೇಷಿಸಿ ಬರೆದಿದ್ದಾರೆ. ಕಂಬರ, ತುಳಸಿ, ಸಾಕೇತ ಮತ್ತಿತರರ ರಾಮಾಯಣಗಳು ಜನಪ್ರಿಯ. ರಾಮನ ಹೆಸರಿಗೆ ದೊಡ್ಡಶಕ್ತಿ ಇದೆ. ಉಕ್ರೇನ್ ದೇಶ ಸೇರಿದಂತೆ ಅನೇಕ ದೇಶದ ಜನ ರಾಮ ತಮ್ಮ ದೇಶದವನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದರು.
Related Articles
Advertisement
ಶ್ರೀ ಸತ್ಯಸಾಯಿ ಸೇವಾಸಂಸ್ಥೆಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ಮಾತನಾಡಿ, ಪುಟಪರ್ತಿಯಲ್ಲಿ ಜನಿಸಿದ 14 ವರ್ಷದ ನಂತರ ಅವತಾರ ಘೋಷಿಸಿಕೊಂಡವರು ಬಾಬಾ. ನಂತರ ಲೀಲೆ ಮಹಿಮೆಗಳನ್ನು ಪ್ರಾರಂಭಿಸಿ ಜನರಿಗೆ ಸಂಸ್ಕಾರ ಕೊಡುವ ಕಾರ್ಯ ಮಾಡಿದವರು. ನಮ್ಮೊಳಗಿನ ದೈವತ್ವ ಉದ್ದೀಪನೆಗೆ ಕೊಟ್ಟ ಸಂಸ್ಥೆ ಇದು. ಪುಟಪರ್ತಿ ವಿಶ್ವದ ಪ್ರಮುಖ ಆಧ್ಯಾತ್ಮಿಕ ಕ್ಷೇತ್ರವಾಗಿ ವಿಕಾಸಗೊಂಡಿದೆ. ಎಲ್ಲ ಭಾಷೆ, ಧರ್ಮ ನಂಬಿಕೆಯ ಜನ ಇಲ್ಲಿಗೆ ಬರುತ್ತಾರೆ. ದೈವ ಪ್ರೀತಿ, ಪಾಪ ಭೀತಿ ನಮ್ಮಲ್ಲಿರಬೇಕು. ಆಧ್ಯಾತ್ಮಿಕ ಪಥದ ಮೂಲವೇ ಧರ್ಮ. ನಮ್ಮೆಲ್ಲರ ಅಂತಿಮ ಗುರಿ ಮೋಕ್ಷಪ್ರಾಪ್ತಿ ಹಾಗೂ ಆನಂದ.ಸಂತೋಷ ಅಷ್ಟೇ ಅಲ್ಲ ಆನಂದ ಅನುಭವಿಸಲು ಮಂದಿರಕ್ಕೆ ಬರಬೇಕು. ಪ್ರೀತಿ, ಧರ್ಮ, ನಮ್ಮ ಆದ್ಯತೆಯಾಗಬೇಕು ಎಂದರು. ಸಮಿತಿಯ ಮುಖಂಡರಾದ ಎಂ.ಆರ್ .ನಾಗರಾಜ್, ಎಲ್.ಎನ್.ಅಂಕೋಲೇಕರ್, ಶ್ರೀನಿವಾಸ, ಭೋಜೇಗೌಡ, ವಾಸು, ರವಿ, ಮಲ್ಲಿಕಾರ್ಜುನ ಮತ್ತಿತರರು ಪಾಲ್ಗೊಂಡಿದ್ದರು. ವಿದ್ವಾನ್ ವೈಷ್ಣವಸಿಂಹ ನೇತೃತ್ವದಲ್ಲಿ ಶ್ರೀಮದ್ ರಾಮಾಯಣ ಪಾರಾಯಣ, ವಿವರಣೆ ಪುಷ್ಪಾಭಿಷೇಕ, ಮಂಗಲ ನೀಲಾಂಜನ ನೆರವೇರಿತು.