Advertisement
ಕಣದಲ್ಲಿ 18 ಜನ ಅಭ್ಯರ್ಥಿಗಳಿದ್ದಾರೆ. 2019ರಲ್ಲಿ ಎಂಟು ಕ್ಷೇತ್ರಗಳ ಪೈಕಿ ಬಿಜೆಪಿಯ ಆರು, ಕಾಂಗ್ರೆಸ್‌ನ ಇಬ್ಬರು ಶಾಸಕರಿದ್ದರು. 2023ರಲ್ಲಿ ಕಾಂಗ್ರೆಸ್‌ನ ಐದು, ಬಿಜೆಪಿ ಮೂವರು ಶಾಸಕರಿದ್ದಾರೆ. ಒಂದು ಕಾಲದಲ್ಲಿ ಬಿ.ಶಂಕರಾನಂದರ ಮೂಲಕ ಕಾಂಗ್ರೆಸ್ ಕಪಿಮುಷ್ಟಿಯಲ್ಲಿದ್ದ ಈ ಕ್ಷೇತ್ರ ಅನಂತರ ಯಾರಿಗೂ ಭದ್ರವಾದ ನೆಲೆ ಕೊಟ್ಟಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈ ಕೋಟೆಯ ವಶಕ್ಕೆ ಆಗಾಗ ಪೈಪೋಟಿ ನಡೆದೇ ಇದೆ.
Related Articles
Advertisement
ಬಿಜೆಪಿ ಟಿಕೆಟ್ ಮೇಲೆ ಬಹಳ ಆಸೆ ಇಟ್ಟುಕೊಂಡಿದ್ದ ಮಾಜಿ ಸಂಸದ ರಮೇಶ ಕತ್ತಿ ಅವರಿಂದ ಬಂಡಾಯದ ಸೂಚನೆ ಸಹ ಬಂದಿತ್ತು. ಕಾಂಗ್ರೆಸ್‌ಗೆ ಸೇರುವ ಮಾತುಗಳು ಕೇಳಿಬಂದಿದ್ದು. ಬಂಡಾಯ ಶಮನವಾಗಿದೆ. ಕತ್ತಿ ಅಸಮಾಧಾನ ಚುನಾವಣೆ ಯಲ್ಲಿ ಬಿಜೆಪಿಗೆ ಸಮಸ್ಯೆ ಉಂಟು ಮಾಡಿದರೂ ಅಚ್ಚರಿ ಇಲ್ಲ.
ಇನ್ನು ಕಾಂಗ್ರೆಸ್‌ನಲ್ಲಿ ಸಹ ಜಾರಕಿಹೊಳಿ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎಂದು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಸತೀಶ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಈ ಅಭಿಪ್ರಾಯಗಳಿಗೆ ಮನ್ನಣೆ ಸಿಗಲಿಲ್ಲ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಕಾಂಗ್ರೆಸ್‌ಗೆ ಸಮಸ್ಯೆ ಉಂಟು ಮಾಡಬಹುದು ಎಂಬ ಆತಂಕವಿದೆ.
ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಪ್ರಧಾನಿ ಮೋದಿ ಅವರನ್ನೇ ನೆಚ್ಚಿಕೊಂಡಿದ್ದಾರೆ. ತಮ್ಮ ಸಾಧನೆ ಹೊರತಾಗಿ ಮೋದಿ ಅಲೆಯನ್ನೇ ಹೇಳಿಕೊಳ್ಳುವ ಅನಿವಾರ್ಯತೆ ಇದೆ. ಆದರೆ ಕಾಂಗ್ರೆಸ್ ಪ್ರಚಾರದಲ್ಲಿ ಒಗ್ಗಟ್ಟಿನ ಕೊರತೆ ಕಂಡುಬಂದಿಲ್ಲ. ಎಲ್ಲ ನಾಯಕರು ಪ್ರಚಾರಕ್ಕೆ ಇಳಿದಿರುವುದು ಜಾರಕಿಹೊಳಿ ಕುಟುಂಬದ ಮುಖದಲ್ಲಿ ಹೊಸ ವಿಶ್ವಾಸ ಮೂಡಿಸಿದೆ.
ಪ್ರಮುಖ ಸಮಸ್ಯೆಗಳೇನು?: ಚಿಕ್ಕೋಡಿ ಜಿಲ್ಲಾ ರಚನೆ ಬೇಡಿಕೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಜಿಲ್ಲೆಯಾಗಲು ಎಲ್ಲ ಆರ್ಹತೆ ಇದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ ಎಂಬ ಆರೋಪ ವ್ಯಾಪಕವಾಗಿದೆ. ಇದೇ ಕಾರಣದಿಂದ ಸಾಕಷ್ಟು ಹೋರಾಟಗಳು ನಡೆದಿದ್ದರೂ ಅವು ಫಲಕಾರಿಯಾಗಿಲ್ಲ. ಇದು ಎರಡೂ ರಾಜಕೀಯ ಪಕ್ಷಗಳಿಗೆ ಬಹು ದೊಡ್ಡ ಸವಾಲಾಗಿ ಕಾಣುತ್ತಿದೆ. ಸವಳು-ಜವಳು ಈ ಭಾಗದ ಎರಡನೇ ದೊಡ್ಡ ಸಮಸ್ಯೆ. ಅತಿಯಾದ ನೀರಿನ ಬಳಕೆಯಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶ ಸವಳು-ಜವಳು ಸುಳಿಗೆ ಸಿಲುಕಿದೆ. ಇದರ ನಿವಾರಣೆಗೆ ಸಾವಿರಾರು ಕೋಟಿ ರೂ. ಅಗತ್ಯವಿದ್ದು ಸರಕಾರಗಳಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂಬ ನೋವು ರೈತರಲ್ಲಿದೆ.
ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಅಧಿಕವಾಗಿದ್ದಾರೆ. ಜತೆಗೆ ಕುರುಬರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಚುನಾವಣೆಯ ಫಲಿತಾಂಶ ಅದಲು-ಬದಲು ಮಾಡುವ ಶಕ್ತಿ ಹೊಂದಿದ್ದಾರೆ.
ಸಾಮರ್ಥ್ಯ:
ಪಕ್ಷದ ಉನ್ನತ ನಾಯಕರ ಜತೆ ಉತ್ತಮ ಸಂಪರ್ಕ
ಕ್ಷೇತ್ರದಲ್ಲಿ ತಮ್ಮ ಪತ್ನಿ ಸೇರಿ ಮೂವರು ಶಾಸಕರ ಬಲ
ಕೇಂದ್ರದ ಜನಪರ ಕಾರ್ಯಕ್ರಮ, ಪ್ರಧಾನಿ ಮೋದಿ ಅಲೆ
ಸಾಮರ್ಥ್ಯ:
ಜಾರಕಿಹೊಳಿ ಕುಟುಂಬದ ಕುಡಿ ಎಂಬ ಬಲ
ಕ್ಷೇತ್ರದಲ್ಲಿ ಐವರು
ಶಾಸಕರ ಶಕ್ತಿ
ಐದು ಗ್ಯಾರಂಟಿ ಯೋಜನೆಗಳ ಬಲ
ಪ್ರಧಾನಿ ಮೋದಿ ಜನಪರ ಅಲೆ, ಅಭಿವೃದ್ಧಿ ಕಾರ್ಯಗಳು ಜನರಿಗೆ ಹಿಡಿಸಿವೆ. ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ಬೆಂಬಲ ನೀಡಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ 8,000 ಕೋಟಿ ರೂ.ತಂದಿರುವುದು ಲಾಭವಾಗಲಿದೆ.-ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ಅಭ್ಯರ್ಥಿ
ಕ್ಷೇತ್ರದಲ್ಲಿ ಒಳ್ಳೆಯ
ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸಹ ಬದಲಾವಣೆ ಬಯಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಸರಕಾ ರದ ಗ್ಯಾರಂಟಿ ಯೋಜನೆಗಳು ಮತ್ತು ತಂದೆಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ನೆರವಿಗೆ ಬರಲಿವೆ.-ಪ್ರಿಯಾಂಕಾ ಜಾರಕಿಹೊಳಿ, ಕಾಂಗ್ರೆಸ್ ಅಭ್ಯರ್ಥಿ
– ಕೇಶವ ಆದಿ