Advertisement

ಅಣ್ಣಾಸಾಹೇಬಗಿಂತ ಪತ್ನಿಯೇ ಸಿರಿವಂತೆ

03:06 AM Apr 04, 2019 | Sriram |

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅವರ ಪತ್ನಿ ಶಾಸಕಿ ಶಶಿಕಲಾ ಜೊಲ್ಲೆ ಕೋಟ್ಯಧಿಪತಿಗಳು. ಅವರ ಮಕ್ಕಳು ಲಕ್ಷಾಧೀಶ್ವರರು. ಪತಿ ಅಣ್ಣಾಸಾಹೇಬ ಜೊಲ್ಲೆ ಅವರಿಗಿಂತ ಶಾಸಕಿ ಪತ್ನಿ ಶಶಿಕಲಾ ಅವರೇ ಶ್ರೀಮಂತರು.

Advertisement

ಬುಧವಾರ ನಾಮಪತ್ರ ಸಲ್ಲಿಸಿದ ಅಣ್ಣಾಸಾಹೇಬ ಜೊಲ್ಲೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ ಪ್ರಕಾರ 2.44ಕೋಟಿ ರೂ. ಚರಾಸ್ತಿ ಹಾಗೂ 11. 96 ಕೋಟಿ ಸ್ಥಿರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಅವರ ಪತ್ನಿ ಶಶಿಕಲಾ ಜೊಲ್ಲೆ ಹೆಸರಿನಲ್ಲಿ 1 ಕೋಟಿ 50 ಲಕ್ಷ ಚರಾಸ್ತಿ ಹಾಗೂ 17 ಕೋಟಿ 92 ಲಕ್ಷ 80 ಸಾವಿರ ಸ್ಥಿರಾಸ್ತಿ ಇದೆ. ಮೊದಲ ಅವಲಂಬಿತರ ಹೆಸರಿನಲ್ಲಿ 30,62,861 ರೂ. ಚರಾಸ್ತಿ, ಎರಡನೇ ಅವಲಂಬಿತರ ಹೆಸರಲ್ಲಿ 29,03,663 ರೂ ಮೂರನೇಯವರ ಹೆಸರಲ್ಲಿ 4,65,974 ಲಕ್ಷ ರೂ ಚರಾಸ್ತಿ ಇದೆ.

ಅಣ್ಣಾಸಾಹೇಬ ಜೊಲ್ಲೆ ಒಟ್ಟು 7,46,68,273 ರೂ ಸ್ವಂತ ಆಸ್ತಿ ಹಾಗೂ 6,94,691,90 ರೂ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ಅವರ ಪತ್ನಿ ಶಶಿಕಲಾ ಅವರು 16,66,75,370 ಮೌಲ್ಯದ ಸ್ವಂತ ಆಸ್ತಿ ಹಾಗೂ 2,76,77,500 ರೂ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‌ದಲ್ಲಿ ತೋರಿಸಲಾಗಿದೆ. ಅಣ್ಣಾಸಾಹೇಬ ಜೊಲ್ಲೆ ಅವರ ಹೆಸರಿನಲ್ಲಿ 9,66,30,171 ರೂ ಸಾಲ ಇದ್ದರೆ ಶಶಿಕಲಾ ಜೊಲ್ಲೆ ಹೆಸರಲ್ಲಿ 9,73,80,698 ರೂ ಸಾಲ ಇದೆ.

Advertisement

Udayavani is now on Telegram. Click here to join our channel and stay updated with the latest news.

Next