ಚಿಕ್ಕೋಡಿ: ಶಿರಗಾಂವ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ ಅಂಗವಾಗಿ ನಡೆದ ಅಂತರಾಷ್ಟ್ರೀಯ ಹೆಸರಾಂತ ಮಲ್ಲರ ಜಂಗೀ ನಿಕಾಲಿ ಕುಸ್ತಿಗಳು ಪ್ರೇಕ್ಷಕರ ಗಮನ ಸೆಳೆದವು. ಕರ್ನಾಟಕ – ಮಹಾರಾಷ್ಟ್ರ ಗಡಿ ಭಾಗದ ಸಾವಿರಾರು ಕುಸ್ತಿ ಅಭಿಮಾನಿಗಳು ಜಗಜಟ್ಟಿಗಳ ಕುಸ್ತಿ ನೋಡಿ ಚಪ್ಪಾಳೆ, ಸಿಳ್ಳೆ, ಕೇಕೇ ಹಾಕುತ್ತಾ ಹುರಿದುಂಬಿಸಿದರು.
ಪ್ರಥಮ ಕುಸ್ತಿಯಲ್ಲಿ ಕೊಲ್ಲಾಪೂರದ ಸಿಕಂದರ ಶೇಖ ಮತ್ತು ಉತ್ತರ ಪ್ರದೇಶ ಮಥುರಾದ ಪಾಲೇಂದರ ನಡುವೆ ನಡೆದ ತೀವ್ರ
ಹಣಾಹಣಿಯಲ್ಲಿ ಸಿಕಂದರ ಶೇಖ ಜಯಗಳಿಸಿ ಸುಮಾರು 3.50 ಲಕ್ಷ ರೂ. ಬಹುಮಾನ ಮತ್ತು ಢಾಲ್ ತಮ್ಮದಾಗಿಸಿಕೊಂಡರು.
ಎರಡನೆ ಕುಸ್ತಿ ದೆಹಲಿಯ ಅಶಿಶ್ ಹುಡ್ಡಾ ಮತ್ತು ಹರಿಯಾಣದ ಜೋಗಿಂದರತಿ ನಡುವೆ ಭಾರಿ ತುರುಸಿನಿಂದ ನಡೆಯಿತು. ಅರ್ಧ ಗಂಟೆಗಳ ಕಾಲ ನಡೆದ ಕುಸ್ತಿಯಲ್ಲಿ ಯಾರೂ ಗೆಲ್ಲದೇ ಇರುವ ಕಾರಣ ನಿರ್ಣಾಯಕರು ಸಮಬಲದ ಕುಸ್ತಿ ಎಂದು ಘೋಷಿಸಿದರು.
ಮೂರನೆ ಕುಸ್ತಿ ಹರಿಯಾಣದ ಜಿತು ಪೂಜೇರ ಚಿಕ್ಕೋಡಿ: ಶಿರಗಾಂವ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ನೋಡಲು ಸಾವಿರಾರು ಜನ ಸೇರಿದ್ದರು. ಮತ್ತು ಪುಣೆಯ ಮಾಚುಲಿ ಕೊಕಾಟೆ ನಡುವೆ ನಡೆದು, ಮಾಚುಲಿ ಕೊಕಾಟೆ ವಿಜಯಶಾಲಿಯಾದರು.
ಪ್ರೇಕ್ಷಕರ ಮನಗೆದ್ದ ಥಾಪಾ: ನೇಪಾಳದ ಪೈಲ್ವಾನ್ ದೇವ ಥಾಪಾ ಮತ್ತು ಹಿಮಾಚಲ ಪ್ರದೇಶದ ನವೀನ್ ನಡುವೆ ಭಾರಿ ತುರಿಸಿನಿಂದ ಕುಸ್ತಿ ನಡೆಯಿತು. 10 ನಿಮಿಷಗಳ ಕಾಲ ಇಬ್ಬರ ನಡುವೆ ನಡೆದ ಕುಸ್ತಿಯಲ್ಲಿ ಕುಳ್ಳನಾದ ದೇವ ಥಾಪಾ ಎದುರಾಳಿ ನವೀನ್ ಪೈಲ್ವಾನ್‌ನನ್ನು ಮೈದಾನದ ತುಂಬೆಲ್ಲ ಓಡಾಡಿಸಿದ್ದು, ಜನರ ಮನರಂಜಿಸಿತು.
ಪ್ರತಿ ವರ್ಷ ನಡೆಯುವ ಈ ಕುಸ್ತಿ ಪಂದ್ಯಾವಳಿ ನೋಡಲು ಸಾವಿರಾರು ಜನರು ಆಗಮಿಸುತ್ತಾರೆ. ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಜಿಪಂ ಮಾಜಿ ಸದಸ್ಯ ಪವನ ಕತ್ತಿ ಆಗಮಿಸಿ, ಕೆಲವು ಕುಸ್ತಿಗಳಿಗೆ ಚಾಲನೆ ನೀಡಿದರು.
ರತನಕುಮಾರ ಮಠಪತಿ, ಶ್ರೀಮಂತಗೌರವಜಿ ಸರಕಾರ, ಈಶ್ವರ ಫರಾಳೆ, ರಾಮಗೌಡ ಪಾಟೀಲ, ಅಶೋಕ ಹರಗಾಪೂರೆ, ನಿಶಕಾಂತ ಫರಾಳೆ, ಮಹಾದೇವ ಉದಗಟ್ಟಿ, ಭೀಮಾ ಉದಗಟ್ಟಿ, ಬಸವರಾಜ ಕಡೋಲೆ, ಮಹೇಶ ಫರಾಳೆ, ಗೋಪಾಲ ಕುದುರೆ ಮುಂತಾದವರು ಇದ್ದರು.