Advertisement

ಸೋರುತಿಹುದು ಸರ್ಕಾರಿ ಕಟ್ಟಡ!

08:00 PM Sep 26, 2019 | Naveen |

ಚೇತನ್‌
ಚಿಕ್ಕನಾಯಕನಹಳ್ಳಿ:
ಕಳೆದ ಮೂರು ದಿನ ಗಳಿಂದ ಸುರಿಯುತ್ತಿರುವ ಉತ್ತರೆ ಮಳೆಗೆ ಸರ್ಕಾರಿ ಕಟ್ಟಡಗಳ ಪರಿಸ್ಥಿತಿ ಯಾವ ರೀತಿ ಹದಗೆಟ್ಟಿದೆ ಎಂಬುದು ಬಟಾಬಯಲಾಗಿದೆ.

Advertisement

ಹೌದು… ಪಟ್ಟಣದ ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು, ವಿಲೇಜ್‌ ಅಕೌಂಟೆಂಟ್‌ ಕಚೇರಿ ಹಾಗೂ ತಾಲೂಕು ಕಚೇರಿ ಉತ್ತರೆ ಮಳೆ ರಭಸಕ್ಕೆ ಸೋರುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಂಕಷ್ಟ ಪಡುವಂತಾಗಿದೆ.

ತಾಲೂಕು ಕಚೇರಿಯಲ್ಲಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಆಹಾರ ಶಾಖೆ ಕಚೇರಿಗಳ ಛಾವಣಿ ಸಿಮೆಂಟ್‌ ಚೂರುಗಳು ಬೀಳುತ್ತಿವೆ. ಹಲವು ದಾಖಲೆಗಳನ್ನು ರಕ್ಷಿಸಿಡುವುದೇ ಸವಾಲಾ ಗಿದೆ. ಸಿಬ್ಬಂದಿ ಛಾವಣಿ ಬೀಳುವ ಆತಂಕದಲ್ಲಿ ದಿನದೂಡುತ್ತಿದ್ದಾರೆ.

ಬೀಳುವ ಹಂತ ತಲುಪಿದೆ: ಸಾವಿರಾರು ರೈತರ ಕೃಷಿ ಭೂಮಿಗಳ ದಾಖಲೆ ಹೊಂದಿರುವ ಭೂದಾಖಲೆಗಳ ಕಚೇರಿಯಂತೂ ಬೀಳುವ ಹಂತ ತಲುಪಿದ್ದು, ಕೈ ಬರಹಗಳ ಪಹಣಿಗಳು, ಭೂಮಿ ವಿಸ್ತೀರ್ಣಗಳು, ತಿದ್ದುಪಡಿ ದಾಖಲೆ ಗಳು ಸೇರಿ ಕಂದಾಯ ಇಲಾಖೆಗೆ ಒದಗಿಸುವ ಹತ್ತಾರು ದಾಖಲೆ ನಾಶವಾಗುವ ಭೀತಿ ಎದುರಾಗಿದೆ. ಪೊಲೀಸ್‌ ಠಾಣೆ ಪಕ್ಕದಲ್ಲಿರುವ ಹಳೇ ಕೋರ್ಟ್‌ ಕಟ್ಟಡದಲ್ಲಿನ ಕಸಬಾ, ಹಂದಿನಕೆರೆ, ಕಂದಿಕೆರೆ ಸೇರಿ ಗ್ರಾಮ ಲೆಕ್ಕಿಗರ ಕಚೇರಿಗಳೂ ಸೋರುತ್ತಿದ್ದು, ರೈತರ ಖಾತೆ ವರ್ಗವಣೆ ದಾಖಲೆ, ಸರ್ಕಾರ ಯೋಜನೆಗಳ ಫ‌ಲಾನು ಭವಿಗಳ ದಾಖಲೆಗಳು ನಷ್ಟವಾಗುವ ಸಂಭವ ವಿದೆ.

ಕೆಲ ಕಚೇರಿಗಳ ಗೋಡೆಗಳು ಬೀಳುವ ಹಂತ ತಲುಪಿದೆ. 1972ರಲ್ಲಿ ಪ್ರಾರಂಭವಾಗಿರುವ ಪಟ್ಟಣದ
ಸರ್ಕಾರಿ ಸ್ವಾತಂತ್ರ ಪದವಿ ಪೂರ್ವ ಕಾಲೇಜಿನ ಬಹುತೇಕ ಕೊಠಡಿಗಳು ಸೋರುತ್ತಿದ್ದು, ಗೋಡೆಗಳು ಹಾಗೂ ಛಾವಣಿ ಸಂಪೂರ್ಣ ಶಿಥಲಗೊಂಡಿವೆ. ಸೋಮವಾರ ಹಾಗೂ ಮಂಗಳವಾರ ಬಂದ ಬಾರೀ ಮಳೆಗೆ ಕಾಲೇಜಿನ ಆವರಣ ಕೆರೆಯಂತಾಗಿತ್ತು.

Advertisement

ಕೊಠಡಿಗಳು ಸೋರುತ್ತಿರುವುದರಿಂದ ವಿದ್ಯಾರ್ಥಿಗಳು ಪಾಠ ಕೇಳದ ಸ್ಥಿತಿ ನಿರ್ಮಾಣ ವಾಗಿದೆ. ತಾಲೂಕಿನ ಮತಿಘಟ್ಟ ಕ್ಲಸ್ಟರ್‌ನ ಕೆಲ ಶಾಲೆಗಳೂ ಇದಕ್ಕೆ ಹೊರತಾಗಿಲ್ಲ. ಅನಾಹುತ ಸಂಭವಿಸುವ ಮುನ್ನ ತಾಲೂಕು ಕಚೇರಿ, ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ದುರಸ್ತಿಗೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಗಮನ ಕೊಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next