Advertisement

ಪುರಸಭೆ ವ್ಯಾಪ್ತಿಯ ಬೀದಿಗಳಿಗೆ ಸೂಚನ ಫ‌ಲಕವೇ ಇಲ್ಲ!

03:48 PM Jul 18, 2019 | Team Udayavani |

ಚಿಕ್ಕನಾಯಕನಹಳ್ಳಿ: ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ನೂರಾರು ಬೀದಿಗಳು ಇವೆ. ಆದರೆ ಬೀದಿಯ ಹೆಸರು ಸೂಚಿಸುವ ಮಾರ್ಗ ಸೂಚಕ ಫ‌ಲಕಗಳು ಇಲ್ಲದೇ ಹೊಸದಾಗಿ ಊರಿಗೆ ಬರುವವರು ಬೀದಿ ಹುಡುಕುವುದೇ ದೊಡ್ಡ ತಲೆನೋವಾಗಿದೆ.

Advertisement

ಮಹಾಲಕ್ಷ್ಮೀ ಬಡಾವಣೆ, ವಿದ್ಯಾನಗರ, ಬನಶಂಕರಿ ಬಡಾವಣೆ, ಬ್ರಾಹ್ಮಣರ ಬೀದಿ, ಮಾರುತಿ ನಗರ, ಕುಂಬಾರ ಬೀದಿ, ದೇವಾಂಗ ಬೀದಿ, ಹರಳೆಪೇಟೆ, ಮಾರುತಿ ನಗರ, ತೇರು ಬೀದಿ, ಹೊಸಬೀದಿ, ತಾಲೂಕು ಕಚೇರಿ ಹಿಂಭಾಗ, ಕಾಲೇಜ್‌ ಹಿಂಭಾಗ ಎಂಬ ಹಲವಾರು ಏರಿಯಾ ಗಳು ಪಟ್ಟಣದಲ್ಲಿದ್ದು, ಬಹುತೇಕ ಸ್ಥಳಗಳಿಗೆ ಹೋಗಲು ಅನು ಕೂಲವಾಗುವಂತೆ ನಾಮಫ‌ಲಕವಾಗಲಿ, ಸೂಚನಾ ಚಿಹ್ನೆಯಾಗಲಿ ಇಲ್ಲ. ಅಲ್ಲದೇ 23 ವಾರ್ಡ್‌ಗಳ ಬೌಂಡರಿಯೂ ನಿಗದಿತವಾಗಿ ಸೂಚಿಸಲಾಗಿಲ್ಲ. ಬಹುತೇಕ ಸ್ಥಳೀಯರಿಗೆ ತಮ್ಮ ಮನೆ ಯಾವ ವಾರ್ಡ್‌ಗೆ ಬರುತ್ತದೆ ಎಂಬುದು ಗೊತ್ತಿಲ್ಲ. ಇದರಿಂದ ಪಟ್ಟಣಕ್ಕೆ ಹೊಸದಾಗಿ ಬರುವವರು ಹೋಗಬೇಕಾದ ಸ್ಥಳ ಹುಡುಕುವ ತಲೆನೋವು ಎದುರಾಗಿದೆ.

ಬೌಂಡರಿ ನಿಗದಿಪಡಿಸಿ: 23 ವಾರ್ಡ್‌ಗಳ ಸ್ಥಳ ನಿಗದಿಪಡಿಸಿ ವಾರ್ಡ್‌ಗಳ ಬೀದಿಗಳ ಹೆಸರು ಹಾಗೂ ಬೀದಿಗಳಿಗೆ ಹೋಗಲು ದಾರಿ ಸೂಚಿಸುವ ಸೂಚನ ಫ‌ಲಕ, ಒಂದೊಂದು ವಾರ್ಡ್‌ಗಳ ಜನಸಂಖ್ಯೆ ವಿಸ್ತೀರ್ಣ ನಮೂದಿಸಿರುವ ಫ‌ಲಕ ಹಾಕಲು ನಗರಸಭೆ ಕ್ರಮ ಕೈಗೊಳ್ಳಬೇಕಿದೆ.

ಫ‌ಲಕ ನೀಡದ ಪುರಸಭೆ: ಪಟ್ಟಣ ಪುರಸಭೆ ವ್ಯಾಪ್ತಿಗೆ ಒಳಪಟ್ಟು ಹಲವಾರು ವರ್ಷ ಕಳೆದರು ಸಹ ಇನ್ನೂ ಬಹುತೇಕ ಏರಿಯಾಗಳಿಗೆ ನಾಮ ಪಲಕವೇ ಇಲ್ಲವಾಗಿದೆ. ವಾರ್ಡ್‌ಗಳ ಒಳ ಭಾಗದಲ್ಲಿನ ಬೀದಿಗಳನ್ನು ಗುರುತಿಸಲು ಊರಿನ ಚಿರಪರಿಚಿತ ವ್ಯಕ್ತಿಗಳ ಮನೆ ಹೆಸರು ಹೇಳಿಕೊಂಡು ಹುಡುಕಬೇಕಾದ ಪರಿಸ್ಥಿತಿ ಇದೆ. ಪುರಸಭ ವ್ಯಾಪ್ತಿಯಲ್ಲಿನ ವಾರ್ಡ್‌ ಹಾಗೂ ವಾರ್ಡ್‌ಗಳ ಒಳಭಾಗದಲ್ಲಿನ ಬೀದಿಗಳಿಗೆ ನಾಮಪಲಕ ಹಾಕಲು ಪುರಸಭೆ ಮುಂದಾಗಬೇಕು ಎಂದು ಸಾರ್ವ ಜನಿಕರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next