Advertisement

ರಾಮಮಂದಿರದೊಂದಿಗೆ ಶಿವಾಲಯವೂ ನಿರ್ಮಾಣವಾಗಲಿ

04:44 PM Jan 31, 2021 | Team Udayavani |

ಬಾಳೆಹೊನ್ನೂರು: ಅಯೋಧ್ಯೆಯಲ್ಲಿ·ನಿರ್ಮಾಣವಾಗುತ್ತಿರುವ ಶ್ರೀರಾಮ·ಮಂದಿರದ ಆವರಣದಲ್ಲಿ ಶ್ರೀರಾಮ·ಪೂಜಿಸಿದ ಶಿವಲಿಂಗವನ್ನು ಪ್ರತಿಷ್ಠಾಪಿಸಿ·ಶಿವಾಲಯ ನಿರ್ಮಾಣ ಮಾಡಬೇಕು·ಎಂದು ರಂಭಾಪುರಿ ಜಗದ್ಗುರು ಡಾ|·ವೀರಸೋಮೇಶ್ವರ ಶಿವಾಚಾರ್ಯ
ಸ್ವಾಮೀಜಿ ಹೇಳಿದ್ದಾರೆ.

Advertisement

ರಂಭಾಪುರಿ ಪೀಠದಲ್ಲಿ ಶನಿವಾರ·ವಿಶ್ವ ಹಿಂದೂ ಪರಿಷತ್‌ ಸದಸ್ಯರಿಗೆ·ಶ್ರೀರಾಮ ಮಂದಿರ ನಿರ್ಮಾಣಕ್ಕೆ·ದೇಣಿಗೆ ನಿಧಿ ಯ ಚೆಕ್‌ ಹಸ್ತಾಂತರಿಸಿದ·ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ·ಅವರು, ಆಯೋಧ್ಯೆಯಲ್ಲಿ ಶ್ರೀರಾಮ·ಮಂದಿರ ನಿರ್ಮಾಣಗೊಳ್ಳುತ್ತಿರುವುದು
ಸಮಸ್ತ ಹಿಂದೂ ಬಾಂಧವರ ಬಹುದಿನಗಳ·ಕನಸು ನನಸಾದ ಸಂದರ್ಭವಾಗಿದೆ .

·ಶ್ರೀರಾಮನ ಆದರ್ಶ ಗುಣಗಳು ನಾಡಿನ·ಜನಮನದಲ್ಲಿ ಬೆಳೆದು ಬರಬೇಕು·ಎಂಬುದು ನಮ್ಮ ಸದಾಶಯವಾಗಿದ್ದು,·ರಾಮಮಂದಿರ ನಿರ್ಮಾಣಕ್ಕಾಗಿ ನಾಡಿನ·ನಾನಾ ಭಾಗಗಳಿಂದ ಎಲ್ಲ ವರ್ಗ,ಸಮುದಾಯಗಳ ಜನರು ಸಹಕರಿಸಿ·ಉದಾತ್ತವಾದ ಕೊಡುಗೆ ನೀಡುತ್ತಿರುವುದು·ಸಂತಸದ ವಿಷಯವಾಗಿದೆ. ಈ·ಹಿಂದೆ ಅಯೋಧ್ಯೆಯ ಶ್ರೀರಾಮ·ಮಂದಿರದ ಆವರಣದಲ್ಲಿ ಶ್ರೀರಾಮ·ಪೂಜಿಸಿದ ಶಿವಲಿಂಗವೂ ಸಹ·ದೊರೆತಿರುವುದು ಐತಿಹಾಸಿಕ ಮತ್ತು·ಪೌರಾಣಿಕ ಘಟನೆಗೆ ಒತ್ತು ನೀಡಿದೆ.·ಜಗತ್ತಿನಲ್ಲಿ ಶಿವನೇ ಸರ್ವಸ್ವ. ಶಿವನಿಲ್ಲದೇ·ಜಗತ್ತಿಲ್ಲ. ಜಗತ್ತಿನ ಬಹುಸಂಖ್ಯಾತ·ಜನರು ಶಿವನ ಆರಾಧಕರಾಗಿದ್ದಾರೆ.·ಎಲ್ಲ ಜೀವ ಜಂತುಗಳಿಗೂ·ಶಿವನೇ ಮೂಲವಾಗಿದ್ದಾನೆ. ಶ್ರೀರಾಮನೂ·ಸಹ ರಾಮಾಯಣ ಕಾಲದಲ್ಲಿ ಇದನ್ನು·ಅರಿತು ಶಿವನನ್ನು ಆರಾ ಧಿಸಿ, ಪೂಜಿಸಿ·ಒಲಿಸಿಕೊಂಡ ವ್ಯಕ್ತಿಯಾಗಿದ್ದಾನೆ. ಶಿವ·ಜಗತ್ತಿನ ಎಲ್ಲ ಜೀವಿಗಳ ಆತ್ಮವಾಗಿದ್ದಾನೆ.

ಈ ಹಿನ್ನೆಲೆಯಲ್ಲಿ ಮಂದಿರ ನಿರ್ಮಾಣದ·ಸಮಿತಿಯ ಸದಸ್ಯರು ಈ ಹಿಂದೆ  ದೊರತಿರುವ ಶ್ರೀರಾಮಚಂದ್ರ·ಪೂಜೆ ಮಾಡಿದ ಶಿವಲಿಂಗವನ್ನು
ರಾಮಮಂದಿರದ ಆವರಣದಲ್ಲಿಯೇ·ಸುಂದರವಾದ ದೇವಾಲಯ ನಿರ್ಮಾಣ·ಮಾಡಿ ಪ್ರತಿಷ್ಠಾಪನೆ ಮಾಡಿದರೆ·ಶ್ರೀರಾಮ ಶಿವನನ್ನು ಪೂಜೆ ಮಾಡಿದ್ದ·ಸಾರ್ಥಕವಾಗಲಿದೆ ಎಂದರು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ·ಕಾರ್ಯದರ್ಶಿ ಆರ್‌.ಡಿ. ಮಹೇಂದ್ರ,·ಬಿ. ಜಗದೀಶ್ಚಂದ್ರ, ಶ್ರೀಪೀಠದ ಬನದ ಹುಣಿ ಲೆಕ್ಕಾ ಧಿಕಾರಿ ಸಂಕಪ್ಪ ಮತ್ತಿತರರಿದ್ದರು.

Advertisement

ಓದಿ :·ಗೋಹತ್ಯೆ ನಿಷೇಧ ಕಾಯ್ದೆ ಜಾಗೃತಿ ಮೂಡಿಸಿ

Advertisement

Udayavani is now on Telegram. Click here to join our channel and stay updated with the latest news.

Next