Advertisement
ಚಾಕುವಿನಿಂದ ಇರಿದು ಹತ್ಯೆಗೈದಿದ್ದ ತೃಪ್ತಿ (25 ವರ್ಷ)ಯ ಶವವನ್ನು ಪ್ರಿಯಕರ ಚಿರಂಜೀವಿ ಕೃಷಿ ಹೊಂಡಕ್ಕೆ ಎಸೆದು ಪರಾರಿಯಾಗಿದ್ದ. ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸಿದ ಬಾಳೆಹೊನ್ನೂರು ಪೊಲೀಸರು ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದಾಗ ಆರೋಪಿ ಚಿರಂಜೀವಿ ಕಾಡಿನೊಳಗೆ ಅವಿತಿರುವ ಮಾಹಿತಿ ಆಧಾರದಲ್ಲಿ ಘಟನೆ ನಡೆದ ಸ್ಥಳದಿಂದ 6 ಕಿ.ಮೀ. ದೂರದಲ್ಲಿನ ಬಾಳೆಹೊನ್ನೂರಿನ ಗಡಿಗೇಶ್ವರ ಬಳಿ ಆರೋಪಿ ಚಿರಂಜೀವಿಯ ಪೊಲೀಸರು ಬಂಧಿಸಿದ್ದಾರೆ.ಘಟನೆ ಹಿನ್ನೆಲೆ:
ತೃಪ್ತಿ ಮತ್ತು ಚಿರಂಜೀವಿ ಫೇಸ್ಬುಕ್ ಮೂಲಕ ಪರಿಚಯವಾಗಿ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಒಂದು ತಿಂಗಳ ಹಿಂದೆ ಪತಿ ರಾಜು ಬಿಟ್ಟು ಪ್ರಿಯಕರನ ಜೊತೆ ತೃಪ್ತಿ ನಾಪತ್ತೆಯಾಗಿದ್ದರು. ಈ ಬಗ್ಗೆ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ವಿಜಯಪುರದಲ್ಲಿ ತಲೆಮರೆಸಿಕೊಂಡಿದ್ದ ತೃಪ್ತಿ ಮತ್ತು ಪ್ರಿಯಕರ ಚಿರಂಜೀವಿಯ ಪೊಲೀಸರು ಹುಡುಕಿ ಕರೆತಂದಿದ್ದರು. ಪೋಷಕರ ಸಂಧಾನದ ಬಳಿಕ ಪತಿ ರಾಜುವಿನ ಜೊತೆ ತೃಪ್ತಿ ತೆರಳಿದ್ದಾರೆ. ಇದರಿಂದ ಕುಪಿತಗೊಂಡ ಚಿರಂಜೀವಿ ತೃಪ್ತಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.