Advertisement

Chikkamagaluru; ನಾವು ಸಿದ್ದರಾಮಯ್ಯರ ತಲೆ ಮತ್ತು ಹೃದಯಕ್ಕೆ ಇಳಿದಿದ್ದೇವೆ: ಸಿ.ಟಿ.ರವಿ

06:37 PM Mar 07, 2024 | Team Udayavani |

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರೆಂಟಿ ಸಮಾವೇಶವನ್ನು ನಮ್ಮ ಜಪ ಮಾಡಲು ಬಳಿಸಿಕೊಂಡಿದ್ದಾರೆ. ನಾವು ಅವರ ತಲೆ ಮತ್ತು ಹೃದಯಕ್ಕೆ ಇಳಿದಿದ್ದೇವೆ ಎಂಬುದು ಅರ್ಥವಾಗುತ್ತದೆ ಎಂದು ಮಾಜಿ‌ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಪ್ರಧಾನಮಂತ್ರಿ ನರೇಂದ್ರ ಮೋದಿ, ನನನ್ನು ಬಿಜೆಪಿ ಜಪ ಮಾಡುವುದೇ ಹೊರತು ಗ್ಯಾರೆಂಟಿ ಬಗ್ಗೆ ಹೇಳಿದ್ದು ಕಡಿಮೆ ಎಂದು ಜರಿದರು.

ಈಗ ಪವರ್ ಕಟ್ ಆಗಿದೆ. ಅದು ಗ್ಯಾರೆಂಟಿ ಭಾಗನಾ? ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ, ಮುಖ್ಯಮಂತ್ರಿಗಳೇ ಟ್ಯಾಂಕರ್ ಮೂಲಕ ನೀರು ಹೊಡೆಸಿಕೊಳ್ಳುವ ಸ್ಥಿತಿ ಬಂದಿದೆ ಎಂದರೇ ಇದು ಅವರ‌ ದೌಭಾಗ್ಯ ಮಾತ್ರವಲ್ಲ ರಾಜ್ಯದ ದೌಭಾಗ್ಯ ಎಂದರು.

ಇದು ಅಸಮರ್ಪಕ ಸರ್ಕಾರ, ಅಸಾಹಯಕ ಸರ್ಕಾರ ಎಂದ ಅವರು ಜನರಿಗೆ ಕುಡಿಯುವ ನೀರು, ಕರೆಂಟ್ ಕೊಡಲು ಸಾಧ್ಯವಿಲ್ಲ. ಹಳ್ಳಿಹಳ್ಳಿಯಲ್ಲಿ ಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಕೊಡುವ ಅಕ್ಕಿಯನ್ನು ಕಡಿತಗೊಳಿಸಿದ್ದಾರೆ. ಎಷ್ಟೋ ಜನರ ಪಡಿತರ ಕಾರ್ಡ್ ಕ್ಲುಲಕ ಕಾರಣಕ್ಕೆ ರದ್ದು ಮಾಡಿದ್ದು ತಾಲೂಕು ಕಚೇರಿಗೆ ಅಲೆಯುತ್ತಿದ್ದಾರೆ. ಕೆಲವರಿಗೆ ದುಡ್ಡು ಹಾಕಿದ್ದಾರೆ. ಕೆಲವರಿಗೆ ದುಡ್ಡು ಹಾಕಿಲ್ಲ, ಎಸಿಪಿ, ಟಿಎಸ್ ಪಿ ಅನುದಾನ 2023-24ರಲ್ಲಿ 11 ಸಾವಿರ ಕೋಟಿ ಡೈವರ್ಟ್ ಮಾಡಿದ್ದಾರೆ. ಈ ಬಾರಿ 14 ಸಾವಿರ ಕೋಟಿ ಡೈವರ್ಟ್ ಮಾಡಿದ್ದಾರೆ. ಇದು ದಲಿತರ ಪರ ಕಾಳಜಿಯೇ ಎಂದು ಪ್ರಶ್ನಿಸಿದರು.

Advertisement

ದಲಿತರಿಗೆ ದೋಖ ಮಾಡಿದ್ದೇ ಇವರ ಗ್ಯಾರೆಂಟಿನಾ? ವಿದ್ಯುತ್ ಕಡಿತ, ಬರಗಾಲ ಎದುರಿಸಲು ಸಾಧ್ಯವಾಗದೆ ಅಸಹಾಯಕತೆ ತೋರಿಸುತ್ತಿರುವುದೇ ಇವರ ಗ್ಯಾರೆಂಟಿನಾ? ಬೆಲೆ ಏರಿಕೆ ಮೂಲಕ ಬರೆ ಎಳೆದಿರುವುದೇ ಗ್ಯಾರೆಂಟಿನಾ ಎಂದರು.

ಮುದ್ರಕಾ ಶುಲ್ಕ ಜಾಸ್ತಿ ಮಾಡಿದರು. ವಾಹನ ನೋಂದಣಿ ಶುಲ್ಕ ಜಾಸ್ತಿ, ಲಿಕ್ಕರ್ ಬೆಲೆ ಜಾಸ್ತಿ, ಪಹಣ, ಜಾತಿ ಪ್ರಮಾಣಪತ್ರ, ಛಾಪಾ ಕಾಗದ ಶುಲ್ಕ ಜಾಸ್ತಿ ಮಾಡಲಾಗಿದೆ. ಇದೆಲ್ಲದಕ್ಕೂ ಉತ್ತರಿಸಲು ಜನರು ಕಾಯುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ರಾಜ್ಯದ 28 ಸ್ಥಾನ ಗೆಲ್ಲುತ್ತೇವೆ ಎಂದರು.

ಸರ್ಕಾರಿ ದುಡ್ಡು ಖರ್ಚು ಮಾಡಿ ನಮ್ಮನ್ನೂ ಬೈದರು. ಇದೆ ಜನಪರ ಕಾಳಜಿ, ಸಮಾಜವಾದಿ ನೀತಿನಾ? ಸಮಾಜವಾದಿ ಮುಖ್ಯಮಂತ್ರಿ ಇವರ ಮನೆಗೆ 19 ಕೋಟಿ ಸರ್ಕಾರಿ ದುಡ್ಡು ಖರ್ಚು ಮಾಡಿಕೊಂಡರು. ಈಗ ಸರ್ಕಾರಿ ದುಡ್ಡಲ್ಲಿ ಬಿಜೆಪಿ ಬೈಯುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸುವುದು ಇದೇ ಉದ್ದೇಶವೇ? ಸಮಾಜವಾದಿ ನೀತಿಯೇ, ಇದೆಲ್ಲದಕ್ಕೂ ಉತ್ತರ ಸಿಗುತ್ತದೆ ಎಂದರು.

ಭಾರತ ಉಪಖಂಡ, ರಾಮ ದೇವರಲ್ಲ ಎಂಬ ತಮಿಳು ನಾಡಿನ ಸಂಸದನ ಹೇಳಿಕೆಗೆ ಪ್ರತಿಕ್ರಿಯಿಸಿ, ಭಾರತದ ಜನರ ಶ್ರದ್ದೆಯನ್ನು ನಾಶ ಮಾಡಬೇಕೆಂದು ಬಯಸುವವರು. ಹೀಗೆ ಬಯಸುವವರು ನಾಶವಾಗಿ ಹೋಗಿದ್ದಾರೆ. ಎ.ರಾಜನ‌ ಮನೆಯಲ್ಲೇ‌ ರಾಜಭಕ್ತ ಹಿಟ್ಟುತ್ತಾನೆ. ತಮಿಳುನಾಡಿನಲ್ಲಿ ಸಾವಿರಾರು ರಾಮನ ದೇವಸ್ಥಾನಗಳಿವೆ. ತಾಕತ್ತಿದ್ದರೆ ಮುಟ್ಟಿ ನೋಡಲಿ, ಇವರಿಗೆ ರಾಮ ದೇವಸ್ಥಾನದ ಹುಂಡಿಬೇಕು ರಾಮಬೇಡ ಹುಂಡಿ ದುಡ್ಡು ಹೊಡೆಯುತ್ತಾರಲ್ಲ. ನಾಚಿಕೆಯಾಗಲ್ವಾ ರಾಮನ ಟೀಕೆ ಮಾಡುವುದು ಆಕಾಶಕ್ಕೆ ಉಗಿದಂತೆ ಅವರ ಮುಖಕ್ಕೆ ವಾಪಾಸ್ ಬೀಳುವುದು ಎಂದು ಹೇಳಿದರು.

ಜನರ ಬದಲಿಸುವ ಯಾವ ಯೋಜನೆಗಳು ಕಾಂಗ್ರೆಸ್ ಬಳಿ ಇಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಜನರ ಬದುಕಿಗೆ ಬಲ ಕೊಡುವ ಯೋಜನೆ. ಆಯುಷ್ಮಾನ್ ಕಾರ್ಡ್ ಯೋಜನೆ ಐದು ಗ್ಯಾರೆಂಟಿಗಳು ಸೇರಿದರೇ ಅದರ ಅರ್ಧಕ್ಕೆ ಬರಲ್ಲ. ಮನೆ ಮನೆಗೆ ಜಲಜೀವನ್ ಮಿಷನ್, ಕೋವಿಡ್ ಇಂಜಕ್ಷನ್ ಉಚಿತವಾಗಿ ನೀಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬದುಕುವ ಭರವಸೆ ಇಲ್ಲ. ಪ್ರಜಾಪ್ರಭುತ್ವ ಎನ್ನುತ್ತಾರೆ ಯಾರೋ ಒಬ್ಬ ಆರನೇ ಗ್ಯಾರೆಂಟಿ ಬಾಂಬ್ ಗ್ಯಾರೆಂಟಿ ಎಂದು ಕಾಮೆಂಟ್ ಹಾಕಿದ್ದಕ್ಕೆ ಕೇಸ್ ಹಾಕಿದ್ದಾರೆ ನಾಚಿಕೆಯಾಗುದಿಲ್ಲವೇ? ಟೀಕಿಸುವ ಹಾಗಿಲ್ಲವೇ ಇದೇ ಸರ್ವಾಧಿಕಾರಿ ಮನೋಸ್ಥಿತಿ. ಇವರು ಮುಂದುವರಿದರೇ ಜನರಿಗೆ ಬದುಕುವ ವಿಶ್ವಾಸವೂ ಉಳಿಯಲ್ಲ ಎಂದರು.

ಪಾರ್ಲಿಮೆಂಟರಿ ಬೋರ್ಡ್ 195 ಜನರ ಲಿಸ್ಟ್ ಬಿಡುಗಡೆ ಮಾಡಿದೆ. ನಾಳೆ ಅಥವಾ ನಾಡಿದ್ದೋ ಮತ್ತೊಮ್ಮೆ ಸಭೆ ಸೇರಿ ಉಳಿದ ಕ್ಷೇತ್ರ ಘೋಷಣೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ವೈಯಕ್ತಿಕ ರಾಜಕಾರಣಕ್ಕಿಂತ ಪಕ್ಷದ ಹಿತ, ರಾಷ್ಟ್ರ ಹಿತದ ರಾಜಕಾರಣದ ಮೇಲೆ ನಂಬಿಕೆ ಇಟ್ಟಿದ್ದೇವೆ. ನಮ್ಮ ಗುರಿ ಮೋದಿ ಮತ್ತೊಮ್ಮೆ ಎನ್ನುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next