Advertisement

Lok Sabha Election 2024; ಅತಿ ಹೆಚ್ಚು ಮತ ತರಲು ಶ್ರಮಿಸಿ: ಸಿ.ಟಿ. ರವಿ

06:30 PM Apr 12, 2024 | Team Udayavani |

ಚಿಕ್ಕಮಗಳೂರು: ಮುಖಂಡರು ಮತ್ತು ಕಾರ್ಯಕರ್ತರು ಮತದಾರರ ಮನವೊಲಿಸುವ ಮೂಲಕ ಪ್ರತಿಬೂತ್‌ನಲ್ಲಿ ಹೆಚ್ಚು ಮತ ಗಳಿಕೆಗೆ ಶ್ರಮಿಸಬೇಕೆಂದು ಮಾಜಿ ಶಾಸಕ ಸಿ.ಟಿ. ರವಿ ಹೇಳಿದರು.

Advertisement

ಗುರುವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಮಂಡಲ ವತಿಯಿಂದ ಆಯೋಜಿಸಿದ್ದ ಬೂತ್‌ ಅಧ್ಯಕ್ಷರು ಹಾಗೂ ಬಿಎಲ್‌ 2ಗಳ ಸಭೆಯಲ್ಲಿ ಅವರು ಮಾತನಾಡಿದರು.

ಪಕ್ಷ ಹಾಗೂ ಮೋದಿ ಅಭಿಮಾನಿಗಳ ಪರವಾಗಿ ಕೆಲಸ ಮಾಡುವವರ ಪಟ್ಟಿ ತಯಾರಿಸಿ ಅಭ್ಯರ್ಥಿ ಗೆಲುವಿಗೆ ನಿರಂತರ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ನಗರಸಭೆಯಲ್ಲಿ ಒಟ್ಟಾರೆ 12 ಮಂದಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಒಬ್ಬರು ಬದುಕಿದ್ದು ಸತ್ತಂತೆ ವರ್ತಿಸುತ್ತಿದ್ದಾರೆ. ಮತ್ತೋರ್ವ ಉಂಡು ಮನೆಗೆ ದ್ರೋಹವೆಸಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಹಾಲಿ ಹಾಗೂ ಮಾಜಿ ನಗರ ಸಭಾ ಸದಸ್ಯರು ಆಯಾ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಗೆಲುವಿಗೆ ಸಹಕರಿಸಬೇಕು ಎಂದರು.

ಉಡುಪಿ-ಚಿಕ್ಕಮಗಳೂರು ಬಿಜೆಪಿ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಮಾತನಾಡಿ, ಕ್ಷೇತ್ರದಲ್ಲಿ ಅಡಕೆ, ಕಾಫಿ, ತೆಂಗಿನ ಬೆಳೆಗಾರರ ಸಮಸ್ಯೆಗಳ ಬಗ್ಗೆ ತಿಳಿದಿದೆ. ಅಲ್ಲದೇ ಪಂಚಾಯತ್‌ ಹಾಗೂ ನಗರಸಭಾ ಆಡಳಿತದಲ್ಲಿರುವ ಸಮಸ್ಯೆಗಳು ಗೊತ್ತಿವೆ. ಹೀಗಾಗಿ ಮತದಾರರು ಒಮ್ಮೆ ಅವಕಾಶ ಕಲ್ಪಿಸಿದರೆ ಕ್ಷೇತ್ರದಲ್ಲಿ ಮಾದರಿ ಕೆಲಸ ಕೈಗೊಳ್ಳುವ ಗುರಿ ಹೊಂದಿದ್ದೇನೆ ಎಂದರು.

Advertisement

ಬಿಜೆಪಿ ನಗರಾಧ್ಯಕ್ಷ ಕೆ.ಎಸ್‌. ಪುಷ್ಪರಾಜ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್‌. ದೇವರಾಜ್‌ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಜಸಂತ್‌ ಅನಿಲ್‌ಕುಮಾರ್‌, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್‌, ಮುಖಂಡರಾದ ಸೀತರಾಮ ಭರಣ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next