Advertisement
ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಪ್ರಧಾನಮಂತ್ರಿ ನರೇಂದ್ರ ಮೋದಿ, ನನನ್ನು ಬಿಜೆಪಿ ಜಪ ಮಾಡುವುದೇ ಹೊರತು ಗ್ಯಾರೆಂಟಿ ಬಗ್ಗೆ ಹೇಳಿದ್ದು ಕಡಿಮೆ ಎಂದು ಜರಿದರು.
Related Articles
Advertisement
ದಲಿತರಿಗೆ ದೋಖ ಮಾಡಿದ್ದೇ ಇವರ ಗ್ಯಾರೆಂಟಿನಾ? ವಿದ್ಯುತ್ ಕಡಿತ, ಬರಗಾಲ ಎದುರಿಸಲು ಸಾಧ್ಯವಾಗದೆ ಅಸಹಾಯಕತೆ ತೋರಿಸುತ್ತಿರುವುದೇ ಇವರ ಗ್ಯಾರೆಂಟಿನಾ? ಬೆಲೆ ಏರಿಕೆ ಮೂಲಕ ಬರೆ ಎಳೆದಿರುವುದೇ ಗ್ಯಾರೆಂಟಿನಾ ಎಂದರು.
ಮುದ್ರಕಾ ಶುಲ್ಕ ಜಾಸ್ತಿ ಮಾಡಿದರು. ವಾಹನ ನೋಂದಣಿ ಶುಲ್ಕ ಜಾಸ್ತಿ, ಲಿಕ್ಕರ್ ಬೆಲೆ ಜಾಸ್ತಿ, ಪಹಣ, ಜಾತಿ ಪ್ರಮಾಣಪತ್ರ, ಛಾಪಾ ಕಾಗದ ಶುಲ್ಕ ಜಾಸ್ತಿ ಮಾಡಲಾಗಿದೆ. ಇದೆಲ್ಲದಕ್ಕೂ ಉತ್ತರಿಸಲು ಜನರು ಕಾಯುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ರಾಜ್ಯದ 28 ಸ್ಥಾನ ಗೆಲ್ಲುತ್ತೇವೆ ಎಂದರು.
ಸರ್ಕಾರಿ ದುಡ್ಡು ಖರ್ಚು ಮಾಡಿ ನಮ್ಮನ್ನೂ ಬೈದರು. ಇದೆ ಜನಪರ ಕಾಳಜಿ, ಸಮಾಜವಾದಿ ನೀತಿನಾ? ಸಮಾಜವಾದಿ ಮುಖ್ಯಮಂತ್ರಿ ಇವರ ಮನೆಗೆ 19 ಕೋಟಿ ಸರ್ಕಾರಿ ದುಡ್ಡು ಖರ್ಚು ಮಾಡಿಕೊಂಡರು. ಈಗ ಸರ್ಕಾರಿ ದುಡ್ಡಲ್ಲಿ ಬಿಜೆಪಿ ಬೈಯುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸುವುದು ಇದೇ ಉದ್ದೇಶವೇ? ಸಮಾಜವಾದಿ ನೀತಿಯೇ, ಇದೆಲ್ಲದಕ್ಕೂ ಉತ್ತರ ಸಿಗುತ್ತದೆ ಎಂದರು.
ಭಾರತ ಉಪಖಂಡ, ರಾಮ ದೇವರಲ್ಲ ಎಂಬ ತಮಿಳು ನಾಡಿನ ಸಂಸದನ ಹೇಳಿಕೆಗೆ ಪ್ರತಿಕ್ರಿಯಿಸಿ, ಭಾರತದ ಜನರ ಶ್ರದ್ದೆಯನ್ನು ನಾಶ ಮಾಡಬೇಕೆಂದು ಬಯಸುವವರು. ಹೀಗೆ ಬಯಸುವವರು ನಾಶವಾಗಿ ಹೋಗಿದ್ದಾರೆ. ಎ.ರಾಜನ ಮನೆಯಲ್ಲೇ ರಾಜಭಕ್ತ ಹಿಟ್ಟುತ್ತಾನೆ. ತಮಿಳುನಾಡಿನಲ್ಲಿ ಸಾವಿರಾರು ರಾಮನ ದೇವಸ್ಥಾನಗಳಿವೆ. ತಾಕತ್ತಿದ್ದರೆ ಮುಟ್ಟಿ ನೋಡಲಿ, ಇವರಿಗೆ ರಾಮ ದೇವಸ್ಥಾನದ ಹುಂಡಿಬೇಕು ರಾಮಬೇಡ ಹುಂಡಿ ದುಡ್ಡು ಹೊಡೆಯುತ್ತಾರಲ್ಲ. ನಾಚಿಕೆಯಾಗಲ್ವಾ ರಾಮನ ಟೀಕೆ ಮಾಡುವುದು ಆಕಾಶಕ್ಕೆ ಉಗಿದಂತೆ ಅವರ ಮುಖಕ್ಕೆ ವಾಪಾಸ್ ಬೀಳುವುದು ಎಂದು ಹೇಳಿದರು.
ಜನರ ಬದಲಿಸುವ ಯಾವ ಯೋಜನೆಗಳು ಕಾಂಗ್ರೆಸ್ ಬಳಿ ಇಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಜನರ ಬದುಕಿಗೆ ಬಲ ಕೊಡುವ ಯೋಜನೆ. ಆಯುಷ್ಮಾನ್ ಕಾರ್ಡ್ ಯೋಜನೆ ಐದು ಗ್ಯಾರೆಂಟಿಗಳು ಸೇರಿದರೇ ಅದರ ಅರ್ಧಕ್ಕೆ ಬರಲ್ಲ. ಮನೆ ಮನೆಗೆ ಜಲಜೀವನ್ ಮಿಷನ್, ಕೋವಿಡ್ ಇಂಜಕ್ಷನ್ ಉಚಿತವಾಗಿ ನೀಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬದುಕುವ ಭರವಸೆ ಇಲ್ಲ. ಪ್ರಜಾಪ್ರಭುತ್ವ ಎನ್ನುತ್ತಾರೆ ಯಾರೋ ಒಬ್ಬ ಆರನೇ ಗ್ಯಾರೆಂಟಿ ಬಾಂಬ್ ಗ್ಯಾರೆಂಟಿ ಎಂದು ಕಾಮೆಂಟ್ ಹಾಕಿದ್ದಕ್ಕೆ ಕೇಸ್ ಹಾಕಿದ್ದಾರೆ ನಾಚಿಕೆಯಾಗುದಿಲ್ಲವೇ? ಟೀಕಿಸುವ ಹಾಗಿಲ್ಲವೇ ಇದೇ ಸರ್ವಾಧಿಕಾರಿ ಮನೋಸ್ಥಿತಿ. ಇವರು ಮುಂದುವರಿದರೇ ಜನರಿಗೆ ಬದುಕುವ ವಿಶ್ವಾಸವೂ ಉಳಿಯಲ್ಲ ಎಂದರು.
ಪಾರ್ಲಿಮೆಂಟರಿ ಬೋರ್ಡ್ 195 ಜನರ ಲಿಸ್ಟ್ ಬಿಡುಗಡೆ ಮಾಡಿದೆ. ನಾಳೆ ಅಥವಾ ನಾಡಿದ್ದೋ ಮತ್ತೊಮ್ಮೆ ಸಭೆ ಸೇರಿ ಉಳಿದ ಕ್ಷೇತ್ರ ಘೋಷಣೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ವೈಯಕ್ತಿಕ ರಾಜಕಾರಣಕ್ಕಿಂತ ಪಕ್ಷದ ಹಿತ, ರಾಷ್ಟ್ರ ಹಿತದ ರಾಜಕಾರಣದ ಮೇಲೆ ನಂಬಿಕೆ ಇಟ್ಟಿದ್ದೇವೆ. ನಮ್ಮ ಗುರಿ ಮೋದಿ ಮತ್ತೊಮ್ಮೆ ಎನ್ನುವುದು ಎಂದರು.