ಚಿಕ್ಕಮಗಳೂರು : ಭಾರಿ ಮಳೆಯ ಸುರಿದ ಕಾರಣದಿಂದಾಗಿ ದುರ್ಗದ ಹಳ್ಳಿಯಲ್ಲಿ ಮನೆ ಕುಸಿತ ಕೂದಲೆಳೆ ಅಂತರದಲ್ಲಿ ಕುಟುಂಬ ಪಾರಾದ ಘಟನೆ ನಡೆದಿದೆ.
ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದುರ್ಗದ ಹಳ್ಳಿಯ ದೇವನ ಗದ್ದೆ ರಮೇಶ್ ಗೌಡ ಅವರ ಮನೆ ಭಾನುವಾರ(ಆಗಸ್ಟ್ 8) ತಡರಾತ್ರಿ ಕುಸಿದುಬಿದ್ದರಿಂದ ರಮೇಶ್ ಗೌಡ ಕುಟುಂಬ ಕೂದಲೆಳೆ ಅಂತರದಲ್ಲಿ ಪಾರಾಗಿದೆ.
ಇದನ್ನೂ ಓದಿ : 13 ತಿಂಗಳುಗಳ ನಂತರ ಆಸ್ಪತ್ರೆಯಿಂದ ಮನೆ ತಲುಪಿದ ಆ್ಯಪಲ್ ತೂಕದ ಮಗು..!
ರಾತ್ರಿ ಸುರಿದ ಮಳೆಗೆ ಮನೆಯ ಹಿಂಬದಿ ಗೋಡೆ ಕುಸಿದಿದೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಶಬ್ದ ಬಂದಿದ್ದರಿಂದ ನೋಡಿದಾಗ ಮನೆ ಗೋಡೆ ಕುಸಿದಿರುವುದು ತಿಳಿದು ಕುಟುಂಬ ಸುರಕ್ಷಿತವಾಗಿ ಪಾರಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕಂದಾಯಾಧಿಕಾರಿಗಳು ಭೇಟಿ ಕೊಟ್ಟಿದ್ದಾರೆ 2019ರಲ್ಲಿ ಮಹಾಮಳೆಗೆ ದುರ್ಗದಹಳ್ಳಿ ಮಲೆಮನೆ ಮಧುಗುಂಡಿ ಗ್ರಾಮಗಳಲ್ಲಿ ನೂರಾರು ಮನೆಗಳು ನೆಲಸಮವಾಗಿದ್ದವು. ಇದೀಗ ಮತ್ತೆ ಮನೆ ಕುಸಿದಿರುವುದು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಇದನ್ನೂ ಓದಿ : ನೆಗೆಟಿವ್ ಟ್ರೆಂಡ್ ನಡುವೆ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 257 ಅಂಕ ಜಿಗಿತ, ನಿಫ್ಟಿ ಏರಿಕೆ