Advertisement

Chikkamagaluru ಗಮನಿಸಿ… ಆರು ದಿನಗಳ ಕಾಲ ಪ್ರವಾಸಿ ತಾಣಗಳು ಬಂದ್

09:47 AM Dec 14, 2023 | Team Udayavani |

ಚಿಕ್ಕಮಗಳೂರು: ವರ್ಷಾಂತ್ಯಕ್ಕೆ ಕಾಫಿ ನಾಡು ಚಿಕ್ಕಮಗಳೂರಿನ ಗಿರಿ ತಾಣಗಳಿಗೆ ಪ್ರವಾಸ ಮಾಡಲು ಸಿದ್ದತೆ ನಡೆಸುತ್ತಿರುವವರು ಈ ಸುದ್ದಿ ಓದಲೇಬೇಕು. ಯಾಕೆಂದರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಆರು ದಿನಗಳ ಕಾಲ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Advertisement

ಡಿ. 24, 25, 26ರಂದು ದತ್ತಪೀಠದಲ್ಲಿ ದತ್ತಜಯಂತಿ ನಡೆಯಲಿದೆ. ಡಿ.26ರಂದು 20ಸಾವಿರಕ್ಕೂ ಅಧಿಕ ಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಲಿದ್ದಾರೆ. ಟೂರಿಸ್ಟ್ ವಾಹನಗಳು, ಮಾಲಾಧಾರಿಗಳ ವಾಹನಗಳಿಂದ ಟ್ರಾಫಿಕ್ ಜಾಮ್ ಸಮಸ್ಯೆ ಆಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಕ್ಕೆ ನಿರ್ಬಂಧ ಹೇರಿದೆ.

ಇದನ್ನೂ ಓದಿ:Bangalore: ವೈಫ್ ಸ್ವಾಪಿಂಗ್‌ಗೆ ಒಪ್ಪದಿದ್ದಕ್ಕೆ ಬೆಲ್ಟ್ ನಿಂದ ಪತ್ನಿ ಮೇಲೆ ಹಲ್ಲೆ

ಡಿ.22 ರಿಂದ 27ರವರೆಗೆ ಆರು ದಿನಗಳ ಕಾಲ ಗಿರಿಭಾಗಕ್ಕೆ ಪ್ರವಾಸ ನಿಷೇಧ ಮಾಡಲಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಾ ಸೇರಿದಂತೆ ಎಲ್ಲವೂ ಪ್ರವಾಸಿಗರಿಗೆ ಬಂದ್ ಆಗಿರಲಿದೆ.

ಆರು ದಿನಗಳ ಕಾಲ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಿಗೆ ಟೂರಿಸ್ಟ್ ಬ್ಯಾನ್ ಇರುವುದರಿಂದ ಗಿರಿ ಭಾಗದಲ್ಲಿ ಕ್ರಿಸ್ ಮಸ್ ಆಚರಿಸಲು ಉದ್ದೇಶಿಸಿರುವವರಿಗೆ ನಿರಾಶೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next