Advertisement

ಚಿಕ್ಕಮಗಳೂರು: ಅಂಗಡಿಯಲ್ಲಿದ್ದ 40 ಕೆ.ಜಿ. ಟೊಮ್ಯಾಟೊ ಕಳ್ಳತನ

08:39 AM Jul 12, 2023 | Team Udayavani |

ಚಿಕ್ಕಮಗಳೂರು: ತರಕಾರಿ ಅಂಗಡಿಯಲ್ಲಿದ್ದ 3000 ಸಾವಿರ ಮೌಲ್ಯದ 40 ಕೆ.ಜಿ. ಟೊಮ್ಯಾಟೊ ಇದ್ದ ಎರಡು ಟ್ರೇ ಕಳ್ಳತನವಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ.

Advertisement

ಆಲ್ದೂರು ಪಟ್ಟಣದ ನದೀಂ ಎಂಬುವರ ಅಂಗಡಿಯಲ್ಲಿ ಎರಡು ಟ್ರೇ ಟೊಮ್ಯಾಟೊ ಕಳ್ಳತನವಾಗಿದೆ. ಸೋಮವಾರ ರಾತ್ರಿ ಎಂದಿನಂತೆ ತರಕಾರಿಯನ್ನ ಅಂಗಡಿಯಲ್ಲಿ ಇಟ್ಟು ಟಾರ್ಪಲ್ ಎಳೆದು ಹೋಗಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಅಂಗಡಿಗೆ ಬಂದಾಗ ಟೊಮ್ಯಾಟೊ ಇರಲಿಲ್ಲ. ಆಗ ಅಂಗಡಿಯ ಟಾರ್ಪಲ್ ಸರಿಸಿರುವುದು ಬೆಳಕಿಗೆ ಬಂದಿದೆ. ಆಲ್ದೂರು ಠಾಣೆಯ ಕಾಂಪೌಂಡ್‍ಗೆ ಹೊಂದಿಕೊಂಡಂತಿರುವ ತರಕಾರಿ ಅಂಗಡಿಯಲ್ಲಿ ಟೊಮ್ಯಾಟೊ ಕಳ್ಳತನವಾಗಿದ್ದು ಸಾಲ ಮಾಡಿ ತರಕಾರಿ ವ್ಯಾಪಾರ ಮಾಡಿಕೊಂಡು ಬದುಕು ದೂಡುತ್ತಿದ್ದ ನದೀಂ ಅವರು ಅತಂತ್ರಕ್ಕೀಡಾಗಿದ್ದಾರೆ. ಆದರೆ, ನದೀಂ ಅವರ ತರಾಕಾರಿ ಅಂಗಡಿಗೆ ಬಾಗಿಲು ಇರಲಿಲ್ಲ. ಟಾರ್ಪಲ್ ಕಟ್ಟಿ ಹೋಗುತ್ತಿದ್ದರು. ಹೀಗೆ ಟಾರ್ಪಲ್ ಕಟ್ಟಿ ಹೋದಾಗ ಬರುವಷ್ಟರಲ್ಲಿ ರಾತ್ರೋರಾತ್ರಿ ಕಳ್ಳತನವಾಗಿದ್ದು ನದೀಂ ಟೊಮ್ಯಾಟೊ ಕಳ್ಳತನವಾಗಿರುವ ಬಗ್ಗೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Vladimir Putin;ರೈಲಿನಂಥ ಘೋಸ್ಟ್‌ ಕಾರ್‌ನಲ್ಲಿ ವ್ಲಾದಿಮಿರ್‌ ಪುತಿನ್‌ ಪುಟ್ಟಮನೆ

Advertisement

Udayavani is now on Telegram. Click here to join our channel and stay updated with the latest news.

Next