Advertisement

ಚಿಕ್ಕಮಗಳೂರು: ರಾತ್ರೋರಾತ್ರಿ ಮೂರು ಕಡೆ ನುಗ್ಗಿದ ಕಳ್ಳ; ಸಿಸಿಟಿವಿಯಲ್ಲಿ ದ್ರಶ್ಯಗಳು ಸೆರೆ

03:52 PM Sep 29, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮ ಪಂಚಾಯತ್ , ಅಂಗನವಾಡಿ, ಹಾಗೂ ಲೈಬ್ರರಿಗಳ ಬೀಗ ಹೊಡೆದು ಕಳ್ಳನೊಬ್ಬ ನುಗ್ಗಿದ ಘಟನೆ ನಡೆದಿದೆ.

Advertisement

ಶುಕ್ರವಾರ ನಸುಕಿನ  1ಗಂಟೆ 20 ನಿಮಿಷ ಕ್ಕೆ ತರುವೆ ಗ್ರಾಮ ಪಂಚಾಯತ್ ನ ಒಳ ನುಗ್ಗಿದ ಕಳ್ಳ ಎರಡು ಗಂಟೆಗಳ ಕಾಲ ಒಳಗೆ ಹುಡುಕಾಟ ಮಾಡಿದ್ದಾನೆ. ಪಂಚಾಯತ್ ನಲಿದ್ದ ಪ್ರತಿಯೊಂದು ಕಪಾಟು ಓಪನ್ ಮಾಡಿ ಹುಡುಕಾಡಿದ್ದಾನೆ. ಯಾವುದೋ ಒಂದು ಫೈಲ್ ದೋಚಿಕೊಂಡು ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದು ಲ್ಯಾಪ್ ಟಾಪ್ ಸಹ ಕಳವು ಆಗಿದೆ ಎಂಬ ಮಾಹಿತಿ ಬಂದಿದೆ.

ಬಣಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಶ್ವಾನದಳ ಮತ್ತು ಬೆರಳಚ್ಚು ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next