Advertisement

ನಾಳೆ 54ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ

04:06 PM Nov 30, 2019 | Naveen |

ಚಿಕ್ಕಮಗಳೂರು: ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಡಿ.1ರಂದು 54ನೇ ರಾಜ್ಯ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆಯ ರಾಜ್ಯ ಹಿರಿಯ ಉಪಾಧ್ಯಕ್ಷ ಅಜಯ್‌ ಕುಮಾರ್‌ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷ, ಮಹಿಳೆ, ಬಾಲಕ, ಬಾಲಕಿಯರು ಸೇರಿ ಒಟ್ಟು 8 ವಿಭಾಗಗಳಿಂದ ತಲಾ 6 ಜನರಂತೆ
48 ಮಂದಿ ಸ್ಪರ್ಧಿಗಳು ಪ್ರತಿ ಜಿಲ್ಲೆಯಿಂದ ಆಗಮಿಸಲಿದ್ದಾರೆ. 14 ವರ್ಷದೊಳಗಿನವರಿಗೆ ಅವಕಾಶವಿಲ್ಲ. ಎಂಇಜಿ, ಪೊಲೀಸ್‌ ತಂಡ, ರೈಲ್ವೆ ಮತ್ತಿತರೆ ತಂಡಗಳು ಭಾಗವಹಿಸಲಿವೆ ಎಂದರು.

ರಾಜ್ಯ ಮಟ್ಟದ ಗುಡ್ಡಗಾಡು ಸ್ಪರ್ಧೆಯ ಪುರುಷ ಮತ್ತು ಮಹಿಳೆಯರ ತಂಡ ಡಿ.1 ರಂದು ಬೆ. 6.45 ಕ್ಕೆ ಮಳಲೂರಮ್ಮ ದೇವಸ್ಥಾನದಿಂದ ಹೊರಟು 10 ಕಿ.ಮೀ. ಕ್ರಮಿಸಿ ಸುಭಾಷ್‌ಚಂದ್ರ ಬೋಸ್‌ ಆಟದ ಮೈದಾನ ತಲುಪಲಿದೆ. 20 ವರ್ಷದ ಬಾಲಕರ ತಂಡ ಬೆ.7.30ಕ್ಕೆ ಸಿರಾಗಪುರ ಶಾಲೆಯಿಂದ ಹೊರಟು 8 ಕಿ.ಮೀ. ಕ್ರಮಿಸಿ ಆಟದ ಮೈದಾನ ಸೇರಲಿದೆ. ಬಾಲಕಿಯರ ತಂಡ ಬೆ.8ಕ್ಕೆ ಬೆಟ್ಟದ ಆಂಜನೇಯ ದೇವಸ್ಥಾನದಿಂದ ಹೊರಟು 6 ಕಿ.ಮೀ. ಸಾಗಿ ಆಟದ ಮೈದಾನ ತಲುಪಲಿದೆ ಎಂದು ತಿಳಿಸಿದರು.

18 ವರ್ಷ ವಯೋಮಾನದ ಬಾಲಕರ ತಂಡ ಬೆಳಗ್ಗೆ 8ಕ್ಕೆ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದಿಂದ, ಬಾಲಕಿಯರ ತಂಡ ಸ್ವರ್ಣಭೂಮಿ ಸಿಲ್ವರ್‌ ಪ್ಲಾಂಟೇಶನ್‌ನಿಂದ ಬೆ.6.45 ಕ್ಕೆ ಹೊರಟು ಗುರಿ ತಲುಪಲಿವೆ. 16ರ ವಯೋಮಾನದ ಬಾಲಕರ ತಂಡ ಬೆ.8 ಕ್ಕೆ ಮತ್ತು ಬಾಲಕಿಯರ ತಂಡ 7.30 ಕ್ಕೆ ಕೋಟೆಯ ಎಂ.ಎಲ್‌. ಮೂರ್ತಿ ಮನೆ ಆವರಣದಿಂದ 2 ಕಿ.ಮೀ. ಕ್ರಮಿಸಿ ಜಿಲ್ಲಾ ಆಟದ ಮೈದಾನ ತಲುಪಲಿದೆ ಎಂದರು.

ಗುಡ್ಡಗಾಡು ಓಟಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲೆಯ 14 ವಯೋಮಿತಿಯ ಬಾಲಕರ ತಂಡ ಬೆ.8.45ಕ್ಕೆ ಹಾಗೂ ಬಾಲಕಿಯರ ತಂಡಗಳಿಗೆ ಬೆ.9 ಕ್ಕೆ ನಗರದ ಹನುಮಂತಪ್ಪ ವೃತ್ತದಿಂದ ಜಿಲ್ಲಾ ಆಟದ ಮೈದಾನದವರೆಗೆ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

Advertisement

ರಾಜ್ಯ ಮಟ್ಟದ ಪುರುಷ ಮತ್ತು ಮಹಿಳಾ ವಿಭಾಗದ ವಿಜೇತರಿಗೆ ಪ್ರಥಮ 5 ಸಾವಿರ ರೂ., ದ್ವಿತೀಯ 3 ಸಾವಿರ, ತೃತೀಯ 2ಸಾವಿರ, 4, 5 ಮತ್ತು 6 ನೇ ಬಹುಮಾನವಾಗಿ ತಲಾ 1 ಸಾವಿರ ರೂ. ನೀಡಲಾಗುವುದು. 20 ವರ್ಷದ ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರಥಮ 5 ಸಾವಿರ ರೂ., ದ್ವಿತೀಯ 3 ಸಾವಿರ, ತೃತೀಯ 2 ಸಾವಿರ, 4, 5, 6 ನೇ ಬಹುಮಾನವಾಗಿ ತಲಾ 1 ಸಾವಿರ ರೂ. ನೀಡಲಾಗುವುದು. 18 ವರ್ಷದ ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರಥಮ 4 ಸಾವಿರ ರೂ., ದ್ವಿತೀಯ 3 ಸಾವಿರ, ತೃತೀಯ 2 ಸಾವಿರ, 4ನೇ ಬಹುಮಾನವಾಗಿ 1 ಸಾವಿರ, 16 ವರ್ಷ ವಯೋಮಾನದ ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರಥಮ 4 ಸಾವಿರ, ದ್ವಿತೀಯ 3ಸಾವಿರ, ತೃತೀಯ 2 ಸಾವಿರ ಹಾಗೂ 4 ನೇ ಬಹುಮಾನವಾಗಿ 1 ಸಾವಿರ ರೂ. ನೀಡಲಾಗುವುದು. ಜಿಲ್ಲಾ ಮಟ್ಟದ 14 ವರ್ಷದ ಬಾಲಕ, ಬಾಲಕಿಯರ ಸ್ಪರ್ಧೆಯಲ್ಲಿ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ, ತೃತೀಯ 1 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.

ಈಗಾಗಲೇ ಆನ್‌ ಲೈನ್‌ನಲ್ಲಿ ನೋಂದಣಿ ನಡೆಯುತ್ತಿದೆ. ಜಿಲ್ಲೆಯವರಿಗೆ 30 ರವರೆಗೆ ಅವಕಾಶವಿದೆ. ಬಹುಮಾನ ನೀಡಲು ಜಿಆರ್‌ಬಿ ಮತ್ತು ಸಿರಿ ಕೆಫೆ ಉದ್ದಿಮೆಗಳು ಹಣಕಾಸಿನ ನೆರವು ನೀಡಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆ ಅಧ್ಯಕ್ಷ ಉದಯ್‌ ಪೈ, ಕಾರ್ಯದರ್ಶಿ ಮಂಜುನಾಥ್‌, ಉಪಾಧ್ಯಕ್ಷರಾದ ಯಶೋಧಾ, ಲಕ್ಷ¾ಣಕುಮಾರ, ತರಬೇತುದಾರ ಫ್ರಾನ್ಸಿಸ್‌ ಹಾಜರಿದ್ದರು.

ಈಗಾಗಲೇ ಆನ್‌ ಲೈನ್‌ನಲ್ಲಿ ನೋಂದಣಿ ನಡೆಯುತ್ತಿದೆ. ಜಿಲ್ಲೆಯ ವರಿಗೆ 30 ರವರೆಗೆ ಅವಕಾಶವಿದೆ. ಬಹುಮಾನ ನೀಡಲು ಜಿಆರ್‌ಬಿ ಮತ್ತು ಸಿರಿ ಕೆಫೆ ಉದ್ದಿಮೆಗಳು ಹಣಕಾಸಿನ ನೆರವು ನೀಡಿವೆ.
ಅಜಯ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next