Advertisement
ಕಳೆದ ಬಾರಿ ಶೇ.72.47 ರಷ್ಟು ಫಲಿತಾಂಶ ಗಳಿಸಿದ್ದ ಜಿಲ್ಲೆ ಈ ಬಾರಿ 82.76ರಷ್ಟು ಫಲಿತಾಂಶ ದಾಖಲಿಸಿದೆ. ಜಿಲ್ಲೆಯಲ್ಲಿ 5993 ಬಾಲಕರು, 6112 ಬಾಲಕಿಯರು ಸೇರಿ ಒಟ್ಟಾರೆ 12,105 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇವರಲ್ಲಿ 4895 ಬಾಲಕರು (ಶೇ.81.67) 5238 ಬಾಲಕಿಯರು (ಶೇ.85.70) ಸೇರಿ ಒಟ್ಟಾರೆ 10,133 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
Related Articles
Advertisement
ಜಿಲ್ಲೆಗೆ ಮೊದಲ ಸ್ಥಾನ: ನಗರದ ಸಂತ ಮೇರಿಸ್ ಪ್ರೌಢಶಾಲೆ ವಿದ್ಯಾರ್ಥಿನಿ ಯುಕ್ತ ಜಿ.ಸ್ವಾಮಿ 622 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. 2ನೇ ಸ್ಥಾನವನ್ನು ಇಬ್ಬರು ವಿದ್ಯಾರ್ಥಿನಿಯರು ಹಂಚಿಕೊಂಡಿದ್ದು, ಸಂತ ಮೇರಿಸ್ ಪ್ರೌಢಶಾಲೆಯ ಭೂಮಿಕಾ ನಾಯ್ಡು ಹಾಗೂ ನರಸಿಂಹರಾಜಪುರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ತನುಶ್ರೀ 621 ಅಂಕಗಳಿಸಿದ್ದಾರೆ.
ಅನುದಾನ ರಹಿತ ಶಾಲೆಗಳ ಮೇಲುಗೈ: 5471 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ 4468 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.81.67 ಫಲಿತಾಂಶ ಪಡೆದಿದ್ದಾರೆ. 3852 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಲ್ಲಿ 3048 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.79.73 ಫಲಿತಾಂಶ, 2782 ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಲ್ಲಿ 2617ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 94.07 ಫಲಿತಾಂಶ ಪಡೆದಿದ್ದಾರೆ.
ಕನ್ನಡ ಮಾಧ್ಯಮದಲ್ಲಿ 6579 ವಿದ್ಯಾರ್ಥಿಗಳಲ್ಲಿ 5024 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.76.36 ಫಲಿತಾಂಶ ಪಡೆದಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 5466 ವಿದ್ಯಾರ್ಥಿಗಳಲ್ಲಿ 5078 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.92.90 ಫಲಿತಾಂಶ ಹಾಗೂ ಉರ್ದು ಮಾಧ್ಯಮದಲ್ಲಿ 60 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.51.67 ಫಲಿತಾಂಶ ಪಡೆದಿದ್ದಾರೆ.