ಚಿಕ್ಕಮಗಳೂರು: ಬಾಳೂರು ಠಾಣಾ ವ್ಯಾಪ್ತಿಯ ಮಾಳಿಂಗನಾಡಿನಲ್ಲಿ ಮದುವೆ ಮನೆಯಿಂದ ಶಾಮಿಯಾನದ ಸಾಮಗ್ರಿಗಳನ್ನು ತುಂಬಿಕೊಂಡು ಸಾಗುತ್ತಿದ್ದ ಪಿಕಪ್ ವಾಹನವೊಂದು ಪಲ್ಟಿಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ವಾಹನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾಳಿಂಗನಾಡಿನಲ್ಲಿ ಶುಕ್ರವಾರ ಮದುವೆ ಕಾರ್ಯಕ್ರಮವೊಂದು ನಡೆದಿದ್ದು ಮದುವೆ ಮನೆಗೆ ತಂದಿದ್ದ ಶಾಮಿಯಾನ ಸಾಮಾಗ್ರಿಗಳನ್ನು ತುಂಬಿಕೊಂಡು ಮಾಗುಂಡಿಗೆ ಹಿಂದಿರುಗುವ ವೇಳೆ ಮಾಳಿಂಗನಾಡು ಸೇತುವೆ ಸಮೀಪ ಪಿಕಪ್ ವಾಹನ ಪಲ್ಟಿಯಾಗಿದೆ.
ಕಳೆದ ವರ್ಷ ಸುರಿದ ಬಾರಿ ಮಳೆಯಿಂದ ಮಾಳಿಂಗನಾಡು ಸೇತುವೆ ಕುಸಿದಿದ್ದು ಸೇತುವೆ ದುರಸ್ಥಿ ಕಾಮಗಾರಿಗಾಗಿ ಸೇತುವೆ ಪಕ್ಕದಲ್ಲಿ ಕಚ್ಚಾ ರಸ್ತೆಯನ್ನು ನಿರ್ಮಿಸಲಾಗಿದ್ದು ಈ ಮಾರ್ಗವಾಗಿ ಸಾಗುವ ವಾಹನ ಸವಾರರು ಕಚ್ಚಾ ರಸ್ತೆಯನ್ನೆ ಅವಲಂಬಿಸಿದ್ದು ಈ ಹಿಂದೆಯೂ ಕೂಡ ಹಲವಾರು ಅಪಘಾತಗಳು ಸಂಭವಿಸಿದ್ದವು. ಪ್ರಸ್ತುತ ಸೇತುವೆ ಕಾಮಗಾರಿ ಸ್ಥಗಿತಗೊಂಡಿದ್ದು ಶೀಘ್ರದಲ್ಲಿ ಕಾಮಗಾರಿ ಪುನರಾರಂಭಗೊಳಿಸಿ ರಸ್ತೆ ಅಭಿವೃದ್ಧಿಗೊಳಿಸುವ ಮೂಲಕ ಅಪಘಾತಗಳು ಸಂಭವಿಸುವುದನ್ನು ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಗಂಗಾವತಿ: ಮನೋಹರಸ್ವಾಮಿ ಅಪಹರಣ ಪ್ರಕರಣದಲ್ಲಿರುವ ನಗರಸಭೆ ಸದಸ್ಯರ ಬಂಧನಕ್ಕೆ ಆಗ್ರಹ