ಚಿಕ್ಕಮಗಳೂರು : ಆಸ್ತಿಗಾಗಿ ಬದುಕಿರುವಾಗಲೇ ವೃದ್ಧೆಯ ಸಂಬಂಧಿಕರು ಮರಣ ಪತ್ರ ಸಿದ್ಧ ಮಾಡಿದ ಘಟನೆ ಜಿಲ್ಲೆ ಎನ್.ಆರ್.ಪುರ ಪಟ್ಟಣದಲ್ಲಿ ನಡೆದಿದೆ.
ಸಾರಮ್ಮ ಎಂಬ ವೃದ್ಧೆ ಜಮೀನು ಕಳೆದುಕೊಂಡು ಬೀದಿಗೆ ಬಿದ್ದಿದ್ದು,ಬದುಕಿರುವಾಗಲೇ ಮರಣ ಪತ್ರ ನೀಡಿ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದ್ದಾರೆ.
ಸಾರಮ್ಮ, ಸಂಬಂಧಿಕರು ಮರಣ ಪತ್ರ, ವಂಶವೃಕ್ಷ ಸೃಷ್ಟಿ ಮಾಡಿ ಆಸ್ತಿ ಕಬಳಿಸಲು ಯತ್ನ ಮಾಡಿದ್ದಾರೆ. ವೃದ್ಧೆ ಸತ್ತು ಹೋಗಿದ್ದಾರೆಂದು ಖಚಿತಪಡಿಸಿಕೊಳ್ಳದೆ, ವೃದ್ಧೆ ಬದುಕಿರೋ ಬಗ್ಗೆ ವಿಚಾರಿಸದೇ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದ್ದಾರೆ.
ಕೋವಿಡ್ ಸಮಯದಲ್ಲಿ ಸಾರಮ್ಮ, ಮಗಳ ಮನೆಗೆ ತೆರಳಿದ್ದ ವೇಳೆ ಸಂಬಂಧಿಕರಾದ ಇ.ಟಿ.ಬಾಬು ಹಾಗೂ ಶ್ರೀಜಾ ಎಂಬುವರು ವೃದ್ಧೆ ಸಾವನಪ್ಪಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಪೌತಿ ಖಾತೆ ಬದಲಾವಣೆಗೆ ಅರ್ಜಿ ಹಾಕಿದ್ದ ಇ.ಟಿ.ಬಾಬು ಜಮೀನು ಕೊಡುವುದಿಲ್ಲ ಎಂದಾಗ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ವೃದ್ಧೆಯ ಮರಣ ಪತ್ರ ಬಂದ ಕಾರಣ ರೇಷನ್ ಕಾರ್ಡ್ ಕೂಡ ಬಂದ್ ಆಗಿದ್ದು, ದಿಕ್ಕು ತೋಚದಂತಾಗಿದೆ. ಅಜ್ಜಿ ಸೂಕ್ತ ನ್ಯಾಯ ಒದಗಿಸುವಂತೆ ಆಳಲು ತೋಡಿಕೊಂಡಿದ್ದು, ಬಾಳೆಕೊಪ್ಪ ಸರ್ವೇ ನಂ 26 ರಲ್ಲಿರುವ ಒಂದು ಎಕರೆ 16 ಜಮೀನು ನನ್ನ ಜಮೀನು ವಾಪಸ್ ಕೊಡಿಸುವಂತೆ ಸಾರಮ್ಮ ತಹಶೀಲ್ದಾರ್ ಗೆ ದೂರು ನೀಡಿದ್ದಾರೆ.