Advertisement
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2019ರ ಆಗಸ್ಟ್- ಸೆಪ್ಪೆಂಬರ್ ತಿಂಗಳಲ್ಲಿ ಮಳೆಯಿಂದಾದ ಅತಿವೃಷ್ಟಿ ನಿವಾರಣೆ ಮಾಡುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಮನೆ, ಶಾಲಾ ಕಟ್ಟಡ, ಸೇತುವೆ, ರಸ್ತೆಗಳು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಗೊಳಗಾಗಿದ್ದವು. ಅವುಗಳ ಪುನರ್ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೇ ಸಾಕಷ್ಟು ಹಣ ಬಿಡುಗಡೆಯಾಗಿದ್ದರೂ ಕಾಮಗಾರಿಗಳು ಸಂಪೂರ್ಣವಾಗಿಲ್ಲ.
ಕೆಟಗರಿಯ ಮನೆಗಳಲ್ಲಿ ಒಟ್ಟು 2612 ಮನೆಗಳಿದ್ದು, 1,616 ಮನೆಗಳು ಪೂರ್ಣವಾಗಿದ್ದು, 584 ಮನೆಗಳ ಕಾಮಗಾರಿ ನಡೆಯುತ್ತಿದೆ. 430 ಮನೆಗಳ ಯಾವುದೇ ಕಾಮಗಾರಿ ಇನ್ನು ಆರಂಭವಾಗಿಲ್ಲ ನಡೆಯದೆ ಬಾಕಿ ಉಳಿದಿದೆ. ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಆರಂಭಿಸದ ಫಲಾನುಭವಿಗಳಿಗೆ ಅನುದಾನ ವಾಪಸ್ ಪಡೆಯುವುದಾಗಿ ನೋಟಿಸ್ ಅಥವಾ ತಿಳುವಳಿಕೆ ಪತ್ರ ನೀಡುವಂತೆ ತಿಳಿಸಿದರು. ಮನೆ ನಿರ್ಮಾಣಕ್ಕಾಗಿ ಅಂಗಡಿ, ಮಾವಿನಕೆರೆ, ಬಿ.ಹೊಸಹಳ್ಳಿ ಭಾಗದಲ್ಲಿ ಒಟ್ಟು 16 ಎಕರೆ ನಿವೇಶನ ಜಾಗ ಗುರುತಿಸಲಾಗಿದ್ದು, ಕೆಲವರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇನ್ನು ಕೆಲವರು ಹಕ್ಕುಪತ್ರ ಪಡೆಯಲು ನಿರಾಕರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ
ಗೌತಮ್ ಸಭೆಗೆ ತಿಳಿಸಿದರು. ಕೋವಿಡ್ ಗೆ ಸಂಬಂಧಿಸಿದಂತೆ ಜಿಲ್ಲೆಯ ಸುರಕ್ಷತೆಗಾಗಿ ಅವಶ್ಯಕವಿರುವ 3,500 ಪಿ.ಪಿ.ಇ ಕಿಟ್‌ಗಳನ್ನು
ಹೊಂದಲಾಗಿದ್ದು, ಅಗತ್ಯ ಪ್ರಮಾಣದ ಮಾಸ್ಕ್ಗಳನ್ನು ಹೊಂದಲಾಗಿದೆ. ಜೊತೆಗೆ ಇನ್ನೂ 5 ಸಾವಿರ ಮಾಸ್ಕ್ಗಳಿಗೆ ಬೇಡಿಕೆ ಇಡಲಾಗಿದೆ. ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗಳ ಕೆಲಸ ಆರಂಭಿಸಲು ಯಾವುದೇ ಅಡೆ ತಡೆಗಳಿಲ್ಲ. ಆದಷ್ಟು ಶೀಘ್ರ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಸುವಂತೆ ತಿಳಿಸಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್. ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ| ಕುಮಾರ್ ಮತ್ತಿತರರು ಇದ್ದರು.